ತೆರಿಗೆದಾರರ ಗಮನಕ್ಕೆ

12 ಲಕ್ಷ ರೂ ತೆರಿಗೆ ರಿಯಾಯಿತಿಗೆ ಹೊರತಾದ 5 ಮುಖ್ಯ ತೆರಿಗೆ ಸುಧಾರಣೆಗಳಿವು

UNSPLASH

By Umesh Kumar S
Feb 01, 2025

Hindustan Times
Kannada

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ನಲ್ಲಿ ವೇತನದಾರ ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತೆ ತೆರಿಗೆ ಕಡಿತವನ್ನು ಪ್ರಕಟಿಸಿದರು. 75,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಸೇರಿ 12 ಲಕ್ಷ ರೂ ವರೆಗೆ ಆದಾಯ ತೆರಿಗೆ ವಿನಾಯಿತಿ ನೀಡುವುದಾಗಿ ಅವರು ಘೋಷಿಸಿದರು.

ಬಜೆಟ್ 2025 ರಲ್ಲಿ ಘೋಷಿಸಲಾದ ಕೆಲವು ಪ್ರಮುಖ ಆದಾಯ ತೆರಿಗೆ ಸುಧಾರಣೆಗಳ ಕಿರುನೋಟ 

ಮನೆ ಮಾಲೀಕರಿಗೆ ತೆರಿಗೆ ಪ್ರಯೋಜನ 

ವ್ಯಕ್ತಿಗಳು ತಾವು ಅನುಭವಿಸುತ್ತಿರುವ ಎರಡು ಆಸ್ತಿಗಳನ್ನು ತೆರಿಗೆ ಮುಕ್ತ ಆದಾಯವೆಂದು ಘೋಷಿಸಬಹುದು.

PEXELS

ನವೀಕರಿಸಿದ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿ ಹೆಚ್ಚಳ

ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ನವೀಕರಿಸಲು ಈಗ 2 ವರ್ಷಗಳ ಬದಲು 4 ವರ್ಷಗಳ ಕಾಲಾವಕಾಶ ಪಡೆಯಲಿದ್ಧಾರೆ.

PIXABAY

ಮೂಲದಲ್ಲಿ ತೆರಿಗೆ ಕಡಿತ

ಬಾಡಿಗೆಯ ಮೇಲಿನ ಟಿಡಿಎಸ್ ಮಿತಿಯನ್ನು 2.4 ಲಕ್ಷ ರೂ.ಗಳಿಂದ 6 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ, ಇದು ಸಣ್ಣ ಭೂಮಾಲೀಕರಿಗೆ ಅನುಕೂಲಕರವಾಗಿದೆ.

PIXABAY

ಮೂಲದಲ್ಲಿ ಸಂಗ್ರಹಿಸಿದ ತೆರಿಗೆ

ವಿದೇಶಿ ಹಣ ರವಾನೆಯ ಮೇಲಿನ ಟಿಸಿಎಸ್ ಮಿತಿಯನ್ನು 7 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗೆ ಹೆಚ್ಚಿಸಲಾಗಿದ್ದು, ತೆರಿಗೆ ಕಡಿತಗಳು ಅನ್ವಯವಾಗುವ ಮೊದಲು ಹೆಚ್ಚಿನ ಮಿತಿಯನ್ನು ಒದಗಿಸುತ್ತದೆ.

PIXABAY

ಹೊಸ ಆದಾಯ ತೆರಿಗೆ ಮಸೂದೆ

ಬಜೆಟ್ ಅಧಿವೇಶನದಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಪರಿಚಯಿಸಲು ಸರ್ಕಾರ ಯೋಜಿಸಿದೆ. ತೆರಿಗೆ ಅನುಸರಣೆಯನ್ನು ಸರಳೀಕರಿಸಲು ಮತ್ತು ದಾವೆಗಳನ್ನು ಕಡಿಮೆ ಮಾಡುವ ಉದ್ದೇಶ ಇದರಲ್ಲಿದೆ. ಪ್ರಸ್ತಾವಿತ ಮಸೂದೆಯ ಅಧ್ಯಾಯಗಳ ಸಂಖ್ಯೆ ಕಡಿಮೆ ಇರಲಿದೆ. ಪದಗಳ ಪ್ರಮಾಣವೂ ಶೇಕಡ 50 ಕಡಿಮೆ ಇರಲಿದೆ.

PIXABAY

ಕೆಲಸ ಮಾಡುವಾಗ ಉಲ್ಲಾಸ ಹೆಚ್ಚಿಸಲು ಸರಳ ಡೆಸ್ಕ್ ವ್ಯಾಯಾಮ

PEXELS