ಸ್ವಾತಂತ್ರ್ಯ ದಿನದ ಸಂಭ್ರಮ ಹೆಚ್ಚಿಸುವ ತ್ರಿವರ್ಣ ತಿನಿಸುಗಳು

By Reshma
Aug 14, 2024

Hindustan Times
Kannada

ಭಾರತದ ರಾಷ್ಟ್ರಧ್ವಜದಲ್ಲಿರುವ ಕೇಸರಿ, ಬಿಳಿ, ಹಸಿರು ಧೈರ್ಯ-ತ್ಯಾಗ, ಶಾಂತಿ-ಸತ್ಯ ಹಾಗೂ ನಂಬಿಕೆಯ ಪ್ರತೀಕವಾಗಿವೆ 

ಸ್ವಾತಂತ್ರ್ಯ ದಿನದಂದು ಮಾಡಬಹುದಾದ ತ್ರಿವರ್ಣ ರೆಸಿಪಿಗಳ ಪಟ್ಟಿ ಇಲ್ಲಿದೆ

ತ್ರಿವರ್ಣ ಇಡ್ಲಿ: ಇಡ್ಲಿ ಹಿಟ್ಟಿಗೆ ಪಾಲಕ್‌ ಪ್ಯೂರಿ, ಹಾಗೂ ಕ್ಯಾರೆಟ್‌ ಪ್ಯೂರಿ ಬೇರೆಯಾಗಿ ಮಿಶ್ರಣ ಮಾಡಿ, ಇನ್ನೊಂದಕ್ಕೆ ಏನನ್ನೂ ಮಿಶ್ರಣ ಮಾಡಬೇಡಿ, ಇದರಿಂದ ನೀವು ಕೇಸರಿ, ಬಿಳಿ, ಹಸಿರಿನ ಇಡ್ಲಿ ಮಾಡಬಹುದು 

ತ್ರಿವರ್ಣ ಸ್ಯಾಂಡ್‌ವಿಚ್‌: ಬ್ರೆಡ್‌ ಸ್ಲೈಸ್‌ಗಳ ನಡುವೆ ಗ್ರೀನ್‌ ಚಟ್ನಿ, ಚೀಸ್‌ ಹಾಗೂ ಕ್ಯಾರೆಟ್‌ ಅನ್ನು ತೆಳುವಾಗಿ ಹೆಚ್ಚಿ ಲೇಯರ್‌ ಮಾಡಿ 

ತ್ರಿವರ್ಣ ದೋಕ್ಲಾ: ಇದನ್ನೂ ಇಡ್ಲಿ ಹಿಟ್ಲಿನಂತೆ ಪಾಲಕ್‌, ಕ್ಯಾರೆಟ್‌ ಪ್ಯೂರಿ ಬಳಸಿ ಮೂರು ಬಣ್ಣವಾಗಿ ವಿಭಾಗಿಸಬಹುದು 

ತ್ರಿವರ್ಣದ ಬರ್ಫಿ: ಖೋವಾವನ್ನು ಮೂರು ವಿಭಾಗಗಳಾಗಿ ವಿಂಗಡಿಸಿ. ಒಂದಕ್ಕೆ ಪಿಸ್ತಾ ಪೇಸ್ಟ್‌ ಸೇರಿಸಿ ಇನ್ನೊಂದಕ್ಕೆ ಕ್ಯಾರೆಟ್‌ ಪ್ಯೂರಿ ಸೇರಿಸಿ. ಇದರಿಂದ ತ್ರಿವರ್ಣದ ಬರ್ಫಿ ತಯಾರಿಸಬಹುದು 

ತ್ರಿವರ್ಣ ದೋಸೆ: ಇಡ್ಲಿ ಹಿಟ್ಟಿನಂತೆ ಹಿಟ್ಟು ಬಳಸಿ ತ್ರಿವರ್ಣ ದೋಸೆಯನ್ನೂ ತಯಾರಿಸಬಹುದು 

ಆಪಲ್‍ಗಳಿಂದ ತಯಾರಿಸಿ ಬಗೆ-ಬಗೆಯ ಭಕ್ಷ್ಯಗಳು

freepik