ಸ್ವಾತಂತ್ರ್ಯ ದಿನದಂದು ನೀವು ಹೀಗೆ ಡ್ರೆಸ್ ಮಾಡಿಕೊಳ್ಳಿ, ಸ್ಪೆಷಲ್ ಅನ್ನಿಸ್ತೀರಿ

By Reshma
Aug 13, 2024

Hindustan Times
Kannada

ಸ್ವಾತಂತ್ರ್ಯ ದಿನದಂದು ಹೆಣ್ಣುಮಕ್ಕಳಿಗೆ ಧರಿಸಲು ಕೇಸರಿ, ಬಿಳಿ, ಹಸಿರು ತ್ರಿವರ್ಣವಿರುವ ಸಲ್ವಾರ್‌ಗಿಂತ ಬೆಸ್ಟ್‌ ಡ್ರೆಸ್‌ ಇನ್ನೊಂದಿಲ್ಲ.

ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರಕ್ಕೂ ಸಾಕಷ್ಟು ಮಹತ್ವವಿದೆ. ಹಾಗಾಗಿ ಸ್ವಾತಂತ್ರ್ಯೋತ್ಸವದ ದಿನ ಬಿಳಿ ಬಣ್ಣದೊಂದಿಗೆ ನೀಲಿ ಬಣ್ಣದ ಚಿತ್ತಾರವಿರುವ ಚೂಡಿದಾರ್‌ ಧರಿಸಬಹುದು.

ಸ್ವಾತಂತ್ರ್ಯ ದಿನದಂದು ಸಂಪೂರ್ಣ ಬಿಳಿ ಬಣ್ಣದ ಕುರ್ತಾ, ಪ್ಯಾಂಟ್‌ ಮೇಲೆ ಹಸಿರು ಬಣ್ಣದ ಶಾಲ್‌ ಧರಿಸಬಹುದು. 

ಇಂಡಿಪೆಂಡೆನ್ಸ್‌ ಡೇಯಂದು ಸಂಪೂರ್ಣ ಕೇಸರಿ ಬಣ್ಣದ ಸ್ವೆಲಾರ್‌ ಸೆಟ್‌ ಕೂಡ ಧರಿಸಲು ಸೂಕ್ತ ಎನ್ನಿಸುತ್ತದೆ. 

ಹುಡುಗರು ಬಿಳಿ ಬಣ್ಣದ ಪೈಜಾಮ ಮೇಲೆ ಕೇಸರಿ ಬಣ್ಣದ ಕುರ್ತಾ ಧರಿಸಬಹುದು

ಹಸಿರು ಬಣ್ಣದ ಇಂಡೋ-ವೆಸ್ಟರ್ನ್‌ ಕುರ್ತಾ ಕೂಡ ಸ್ವಾತಂತ್ರ್ಯ ದಿನಕ್ಕೆ ಹೇಳಿ ಮಾಡಿಸಿದ ಡ್ರೆಸ್‌

ಬಿಳಿ ಬಣ್ಣದ ಕುರ್ತಾದೊಂದಿಗೆ ಅದೇ ಬಣ್ಣದ ವೇಸ್ಟ್‌ಕೋಟ್‌ ಕೂಡ ಧರಿಸಬಹುದು

ನೇವಿ ಬ್ಲೂ ಬಣ್ಣದ ಕುರ್ತಾ ಪೈಜಾಮ ಧರಿಸುವ ಮೂಲಕ ಸ್ವಾತಂತ್ರ್ಯ ದಿನದಂದು ದೇಶಭಕ್ತಿ ಮೆರೆಯಬಹುದು

ಬಿಳಿಬಣ್ಣದ ಕುರ್ತಾ ಪ್ಯಾಂಟ್‌ ಮೇಲೆ ನೀಲಿ ಬಣ್ಣದ ವೇಸ್ಟ್‌ ಕೋಟ್‌ ಧರಿಸಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು 

ಸುಕನ್ಯಾ ಸಮೃದ್ಧಿ ಯೋಜನೆ: ನಿಮ್ಮ ಮಗಳ ಸುವರ್ಣ ಭವಿಷ್ಯಕ್ಕೆ ಇದು ಅತ್ಯುತ್ತಮ ಆಯ್ಕೆ

HT File Photo