ಸ್ವಾತಂತ್ರ್ಯ ದಿನಕ್ಕೆ ಉಡಲು ಸೂಕ್ತ ಎನ್ನಿಸುವ ಸೀರೆಗಳಿವು, ನಿಮಗೂ ಇಷ್ಟವಾಗಬಹುದು ನೋಡಿ   

By Reshma
Aug 14, 2024

Hindustan Times
Kannada

ಆಗಸ್ಟ್‌ 15 ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ. ಈ ದಿನ ಶಾಲೆ, ಕಾಲೇಜು, ಕಚೇರಿಗಳಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ. ಸ್ವಾತಂತ್ರ್ಯೋತ್ಸವದಂದು ನೀವು ಸೀರೆ ಉಡುವ ಮೂಲಕ ಸಂಭ್ರಮಿಸಬಹುದು 

ಸ್ವಾತಂತ್ರ್ಯೋತ್ಸವದಂದು ನೀವು ಸೀರೆಯುಟ್ಟು ಸ್ಟೈಲಿಶ್‌ ಆಗಿ ಕಾಣಬಹುದು. ಉಡಲು ಹಗುರವಾದ, ಸುಂದರ ಸೀರೆಗಳ ಬಗ್ಗೆ ತಿಳಿಯಿರಿ. 

ಶೀರ್‌ ಸೀರೆ ಹಗುರವಾಗಿದ್ದು, ಉಟ್ಟರೆ ಚೆನ್ನಾಗಿ ಕಾಣುತ್ತದೆ. ಇದಕ್ಕೆ ನೀವು ಮ್ಯಾಚಿಂಗ್‌ ಬ್ಲೌಸ್‌ ಧರಿಸುವುದರಿಂದ ಇನ್ನಷ್ಟು ಸುಂದರವಾಗಿ ಕಾಣಬಹುದು. 

ಶಿಫಾನ್‌ ಸೀರೆ ಕೂಡ ಸ್ವಾತಂತ್ರ್ಯೋತ್ಸವದಂದು ಧರಿಸಬಹುದು. ಸರಳ ಸೀರೆಯೊಂದಿಗೆ ಕಸೂತಿ ಇರುವ ಬ್ಲೌಸ್‌ ಧರಿಸಬಹುದು

ಸ್ವಾತಂತ್ರ್ಯೋತ್ಸವಕ್ಕೆ ನೀವು ಹಸಿರು ಬಣ್ಣದ ಪ್ರಿ-ಡ್ರೇಪ್ಡ್‌ ಸೀರೆ ಧರಿಸಬಹುದು. ಇಂತಹ ಶಿಫಾನ್‌ ಸೀರೆಗಳು ಹೊಸ ಲುಕ್‌ ನೀಡುವುದು ಸುಳ್ಳಲ್ಲ.

ಕೇಸರಿ ಬಣ್ಣದ ಸೀರೆಗೆ ಹಸಿರು, ಬಿಳಿ ಲೈನ್‌ ಇರುವ ಬ್ಲೌಸ್‌ ಧರಿಸುವ ಮೂಲಕ ಅಂದ ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲ ದೇಶಪ್ರೇಮ ಮೆರೆಯಬಹುದು 

ಫ್ಲೋರಲ್‌ ಪ್ರಿಂಟ್‌ ಇರುವ ಶಿಫಾನ್‌ ಸೀರೆ ಕೂಡ ಉಟ್ಟಾಗ ಸುಂದರವಾಗಿ ಕಾಣುತ್ತದೆ. ಇದಕ್ಕೆ ಮಲ್ಟಿಕಲರ್‌ ಬ್ಲೌಸ್‌ ಮ್ಯಾಚಿಂಗ್‌ ಮಾಡಿಕೊಳ್ಳಬಹುದು. 

ನೀಲಿ ಹಾಗೂ ಹಳದಿ ಬಣ್ಣದ ಶಿಫಾನ್‌ ಸೀರೆ ಧರಿಸಲು ಹಗುರವಾಗಿದ್ದು, ಸುಂದರವಾಗಿ ಕಾಣುತ್ತದೆ. ಇದನ್ನ ತುಂಬುತೋಳಿನ ಬ್ಲೌಸ್‌ ಜೊತೆ ಧರಿಸಬಹುದು 

ಗೋಲ್ಡನ್‌ ಬಾರ್ಡರ್‌ ಇರುವ ಹಸಿರು ಸೀರೆ ಸ್ವಾತಂತ್ರ್ಯ ದಿನಕ್ಕೆ ಒಪ್ಪುತ್ತದೆ 

ಸಂಪೂರ್ಣ ಕಿತ್ತಳೆ ಬಣ್ಣದ ಸೀರೆ ಕೂಡ ಸ್ವಾತಂತ್ರ್ಯ ದಿನದಂದು ಧರಿಸಲು ಹೇಳಿ ಮಾಡಿಸಿದ್ದು. 

ಹಿಂದಿನ ಯುದ್ಧಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ 8 ಪ್ರಾಣಿಗಳು