ಮುಂಬೈಯನ್ನು ಭಾರತದ ವಾಣಿಜ್ಯ ನಗರಿ ಎಂದು ಕರೆಯಲಾಗುತ್ತದೆ. ನಗರವು ಆರ್ಥಿಕ ಕ್ಷೇತ್ರ ಮತ್ತು ಒತ್ತಡದ ಜೀವನಶೈಲಿಗೆ ಹೆಸರುವಾಸಿ.
ಭಾರತೀಯ ಸೇನೆಯ ನಾಯಿಗಳು ಅಪಾಯಕಾರಿ ಪ್ರದೇಶಗಳಲ್ಲಿ ಸೈನಿಕರೊಂದಿಗೆ ಸೇವೆ ಸಲ್ಲಿಸುತ್ತವೆ. ವಿವಿಧ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡುತ್ತವೆ.
ಈ ಶ್ವಾನಗಳು ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳನ್ನು ಪತ್ತೆಹಚ್ಚಲು ತರಬೇತಿ ಪಡೆದಿರುತ್ತವೆ. ಅಪಾಯಕಾರಿ ಸಂದರ್ಭಗಳನ್ನು ಸೈನಿಕರ ರಕ್ಷಣೆಗೆ ಸಹಾಯ ಮಾಡುತ್ತವೆ.
ವಿಪತ್ತಿನ ಸಮಯದಲ್ಲಿ, ಭಾರತೀಯ ಸೇನೆಯ ನಾಯಿಗಳು ಸಂಕಷ್ಟದಲ್ಲಿ ಸಿಲುಕಿರುವ ಅಥವಾ ಗಾಯಗೊಂಡ ಜನರನ್ನು ಪತ್ತೆ ಮಾಡುತ್ತವೆ. ಅಗತ್ಯ ರಕ್ಷಣಾ ಬೆಂಬಲ ನೀಡುತ್ತವೆ.
ಒತ್ತಡದ ಸಂದರ್ಭಗಳಲ್ಲಿ ಶಾಂತವಾಗಿ ಮತ್ತು ವಿಧೇಯರಾಗಿ ಇರಲು ನಾಯಿಗಳು ಕಠಿಣ ತರಬೇತಿಗೆ ಒಳಗಾಗುತ್ತವೆ.
ಸಾಮಾನ್ಯವಾಗಿ ಜರ್ಮನ್ ಶೆಫರ್ಡ್, ಲ್ಯಾಬ್ರಡಾರ್ ಮತ್ತು ಬೆಲ್ಜಿಯನ್ ಮಾಲಿನೊಯಿಸ್ ತಳಿಯ ನಾಯಿಗಳು ಬಳಕೆಯಲ್ಲಿವೆ. ಇವುಗಳನ್ನು ಅದರ ನಿಷ್ಠೆ ಮತ್ತು ಚುರುಕುತನ ಕಾರಣದಿಂದ ಆಯ್ಕೆ ಮಾಡಲಾಗುತ್ತದೆ.
ಭಾರತೀಯ ಸೇನೆಯ ಕೆಲವು ಶ್ವಾನಗಳು ಅವು ಸೈನಿಕರಂತೆಯೇ ಮಾಡುವ ಶೌರ್ಯದ ಕಾರ್ಯಗಳಿಗಾಗಿ ಪ್ರಶಸ್ತಿ ಪಡೆಯುತ್ತವೆ.
ಸೈನ್ಯದ ಶ್ವಾನಗಳು ನಿವೃತ್ತಿ ಹೊಂದಿದಾಗ, ದೇಶಕ್ಕಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ವಿದಾಯ ಸಮಾರಂಭ ನಡೆಸಲಾಗುತ್ತದೆ.
ಈ ಶ್ವಾನಗಳು ತಮ್ಮ ಹ್ಯಾಂಡ್ಲರ್‌ಗಳೊಂದಿಗೆ ಬಲವಾದ ಬಂಧವನ್ನು ಹೊಂದಿರುತ್ತವೆ. ತಂಡದ ಭಾಗವಾಗಿ ಕೆಲಸ ಮಾಡುತ್ತವೆ.
ಸೇನಾ ಶಿಬಿರಗಳು ಮತ್ತು ಗಡಿ ಪ್ರದೇಶಗಳನ್ನು ಶತ್ರುಗಳ ಬೆದರಿಕೆಗಳಿಂದ ಸುರಕ್ಷಿತವಾಗಿಡುವಲ್ಲಿ ಈ ಶ್ವಾನಗಳು ಪ್ರಮುಖ ಪಾತ್ರವಹಿಸುತ್ತವೆ.