ಬಜೆಟ್ 2025

ಗರಿಷ್ಠ ಆದಾಯ ತೆರಿಗೆ ದರ ಹೊಂದಿರುವ 4 ದೇಶಗಳು

PEXELS

By Umesh Kumar S
Feb 01, 2025

Hindustan Times
Kannada

ಭಾರತದಲ್ಲಿ, ಉನ್ನತ ಆದಾಯದ ವರ್ಗಕ್ಕೆ ಹೆಚ್ಚಿನ ಆದಾಯ ತೆರಿಗೆ ದರ 30% ಇದೆ. ಹೊಸ ಅಥವಾ ಹಳೆಯ ತೆರಿಗೆ ಪದ್ಧತಿಯನ್ನು ಅವಲಂಬಿಸಿ 37% ವರೆಗೆ ಹೆಚ್ಚುವರಿ ಸರ್ಚಾರ್ಜ್ ಮತ್ತು ಒಟ್ಟು ಮೊತ್ತದ ಮೇಲೆ 4% ಹೆಚ್ಚುವರಿ ಸರ್ಚಾರ್ಜ್ ಇರುತ್ತದೆ.

PEXELS

ಬಜೆಟ್ 2023 ರಲ್ಲಿ, ಹೊಸ ತೆರಿಗೆ ಆಡಳಿತಕ್ಕೆ ಗರಿಷ್ಠ ಸರ್ಚಾರ್ಜ್ ಅನ್ನು 37% ರಿಂದ 25% ಕ್ಕೆ ಇಳಿಸಲಾಯಿತು. ಒಟ್ಟು ತೆರಿಗೆ ದರವನ್ನು 39% ಕ್ಕೆ ತರಲಾಯಿತು. ಹಳೆಯ ತೆರಿಗೆ ವ್ಯವಸ್ಥೆಯಲ್ಲಿ, ಒಟ್ಟು ತೆರಿಗೆ ದರವು 42.7% ರಷ್ಟಿದೆ.

ಅತಿ ಹೆಚ್ಚು ಆದಾಯ ತೆರಿಗೆ ದರ ಹೊಂದಿರುವ 4 ದೇಶಗಳು ಇಲ್ಲಿವೆ

PEXELS

ಯುಎಸ್ಎ

ಆದಾಯವನ್ನು ಅವಲಂಬಿಸಿ ಆದಾಯ ತೆರಿಗೆ ದರಗಳು 10% ರಿಂದ 37% ವರೆಗೆ ಬದಲಾಗುತ್ತವೆ. ಗರಿಷ್ಠ ದರವು 609 ಸಾವಿರ ಡಾಲರ್‌ಗಿಂತ  (ಸುಮಾರು 5.3 ಕೋಟಿ ರೂ)  ಹೆಚ್ಚಿನ ಗಳಿಕೆಗೆ ಅನ್ವಯಿಸುತ್ತದೆ. 58,000 ಡಾಲರ್‌ವರೆಗಿನ ಆದಾಯ ಹೊಂದಿರುವ ವ್ಯಕ್ತಿಗಳಿಗೆ, ಗರಿಷ್ಠ ತೆರಿಗೆ ದರ ಶೇ 22 ಆಗಿದೆ.

PEXELS

ಯುನೈಟೆಡ್ ಕಿಂಗ್ಡಂ

ಯುಕೆಯಲ್ಲಿ 1.25 ಲಕ್ಷ ಪೌಂಡ್‌ಗಿಂತ ಹೆಚ್ಚು ಗಳಿಸುವ ವ್ಯಕ್ತಿಗಳು 45% ಗರಿಷ್ಠ ದರಕ್ಕೆ ಒಳಪಟ್ಟಿರುತ್ತಾರೆ. ಸ್ಕಾಟ್ಲೆಂಡ್‌ನ ತೆರಿಗೆ ದರ ಹೆಚ್ಚಾಗಿದ್ದು, 12,571 ಪೌಂಡ್‌ಗಿಂತ ಹೆಚ್ಚಿನ ಆದಾಯಕ್ಕೆ 19% ಮತ್ತು 125,140 ಪೌಂಡ್ (ಸುಮಾರು 1.37 ಕೋಟಿ ರೂ.) ಗಿಂತ ಹೆಚ್ಚಿನ ಆದಾಯಕ್ಕೆ  ಶೇ 48 ರಿಂದ ಪ್ರಾರಂಭವಾಗುತ್ತದೆ. 75000 ಪೌಂಡ್‌ ಮತ್ತು 125000 ಪೌಂಡ್‌ ನಡುವೆ ಗಳಿಸುವವರಿಗೆ ತೆರಿಗೆ ದರ ಶೇಕಡ 45 ಇದೆ.

PEXELS

ಆಸ್ಟ್ರೇಲಿಯಾ

ಆಸ್ಟ್ರೇಲಿಯಾದಲ್ಲಿ ಗರಿಷ್ಠ ತೆರಿಗೆ ದರವು 190,000 ಡಾಲರ್ (ಸುಮಾರು 1.02 ಕೋಟಿ ರೂಪಾಯಿ) ಗಿಂತ ಹೆಚ್ಚಿನ ಗಳಿಕೆಯ ಮೇಲೆ 45% ಆಗಿದೆ. ಹೆಚ್ಚುವರಿಯಾಗಿ, ಶೇ 2 ಮೆಡಿಕೇರ್ ಲೆವಿ ಸೇರಿ ಪರಿಣಾಮಕಾರಿ ಗರಿಷ್ಠ ತೆರಿಗೆ ದರ ಶೇ 45.9 ಕ್ಕೆ ಏರಿಕೆಯಾಗುತ್ತದೆ.

PEXELS

ಜರ್ಮನಿ

ವಿವಾಹಿತ ವ್ಯಕ್ತಿಗಳಿಗೆ 555,652 ಮಾರ್ಕ್‌ (ಅಂದಾಜು 5 ಕೋಟಿ ರೂಪಾಯಿ) ಮತ್ತು ಏಕ ತೆರಿಗೆದಾರರಿಗೆ 277,826 ಮಾರ್ಕ್‌ (ಸುಮಾರು 2.5 ಕೋಟಿ ರೂಪಾಯಿ) ಗಿಂತ ಹೆಚ್ಚಿನ ಆದಾಯಕ್ಕೆ ಶೇ 45 ಗರಿಷ್ಠ ಆದಾಯ ತೆರಿಗೆ ದರ ಅನ್ವಯಿಸುತ್ತದೆ.

PEXELS

ಚೋಳ ರಾಜವಂಶದ ದೇವಾಲಯಗಳ ವಾಸ್ತುಶಿಲ್ಪ ಅದ್ಭುತವಾಗಿವೆ. ಪುರಾತನ ಶಿವನ ದೇವಾಲಯಗಳು ಸೇರಿ ಚೋಳರ ಕಾಲದ ನೋಡಲೇಬೇಕಾದ ದೇವಾಲಯಗಳ ವಿವರ ಇಲ್ಲಿದೆ