ಭಾರತದಿಂದ ರೈಲಲ್ಲೂ ವಿದೇಶ ಪ್ರಯಾಣ ಮಾಡಬಹುದು ಯಾವ್ಯಾವ ನಿಲ್ದಾಣಗಳಿಂದ- ಇಲ್ಲಿದೆ ಆ ವಿವರ
By Umesh Kumar S
Jan 02, 2025
Hindustan Times
Kannada
ಭಾರತದ ಅಂತಾರಾಷ್ಟ್ರೀಯ ಸಂಪರ್ಕ ಕೊಂಡಿ ಈ 5 ರೈಲು ನಿಲ್ದಾಣಗಳು
ಚೀನಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಭೂತಾನ್, ನೇಪಾಳ, ಬಾಂಗ್ಲಾದೇಶಗಳು ಭಾರತದ ನೆರೆ ರಾಷ್ಟ್ರಗಳು.
ನೇಪಾಳ, ಬಾಂಗ್ಲಾದೇಶಗಳಿಗೆ ಭಾರತದಿಂದ ನೇರ ರೈಲು ಸಂಪರ್ಕವೂ ಇದೆ.
ಭಾರತದ ಈ 5 ರೈಲು ನಿಲ್ಷಾಣಗಳಿಂದ ರೈಲು ಹತ್ತಿ ನೆರೆ ರಾಷ್ಟ್ರಗಳಿಗೆ ಪ್ರಯಾಣಿಸಬಹುದು
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪೆಟ್ರಾಪೋಲ್ ರೈಲು ನಿಲ್ದಾಣವು ಭಾರತ-ಬಾಂಗ್ಲಾದೇಶ ಗಡಿಯ ಸಮೀಪದಲ್ಲಿದೆ.
ಕೋಲ್ಕತಾದಿಂದ ಬಾಂಗ್ಲಾದೇಶಕ್ಕೆ ಬಂಧನ್ ಎಕ್ಸ್‌ಪ್ರೆಸ್ ಮೂಲಕ ಪ್ರಯಾಣಿಸಬೇಕು. ಇದು ಪೆಟ್ರಾಪೋಲ್ ನಿಲ್ದಾಣದಲ್ಲಿ ನಿಲ್ಲುತ್ತದೆ.
ಈ ರೈಲಿನಲ್ಲಿ ಪ್ರಯಾಣಿಸಲು ನೀವು ಮಾನ್ಯವಾದ ಪಾಸ್‌ಪೋರ್ಟ್, ವೀಸಾ ಹೊಂದಿರಬೇಕು.
ಹಲ್ದಿಬರಿ ರೈಲು ನಿಲ್ದಾಣವು ಬಾಂಗ್ಲಾದೇಶದ ಗಡಿಯಿಂದ ಸುಮಾರು 4.5 ಕಿಮೀ ದೂರದಲ್ಲಿದೆ, ಇದು ಸಾರಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
ಮೂರನೇಯದು ರಾಧಿಕಾಪುರ ರೈಲ್ವೆ ನಿಲ್ದಾಣ. ಇದು ಭಾರತ- ಬಾಂಗ್ಲಾ ನಡುವಿನ ಚೆಕ್‌ಪಾಯಿಂಟ್. ಇದು ಉತ್ತರ ದಿನಜ್‌ಪುರ ಜಿಲ್ಲೆಯಲ್ಲಿದೆ.
ನಾಲ್ಕನೇಯದ್ದು ಸಿಂಗಾಬಾದ್ ರೈಲು ನಿಲ್ದಾಣ. ಇದು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿದೆ.
ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿರುವ ಈ ನಿಲ್ದಾಣದಿಂದ ಒಂದು ಪ್ಯಾಸೆಂಜರ್ ಟ್ರೈನ್ ಮಾತ್ರ ಸಂಚರಿಸುತ್ತದೆ
ಐದನೇಯದ್ದು ಜಯನಗರ ರೈಲ್ವೆ ನಿಲ್ದಾಣ. ಇದು ಬಿಹಾರದ ಮಧುಬನಿ ಜಿಲ್ಲೆಯಲ್ಲಿದ್ದು, ನೇಪಾಳಕ್ಕೆ ಎಂಟ್ರಿ ಪಾಯಿಂಟ್ ಇದುವೇ.
26 ಎಸೆತಗಳಲ್ಲಿ ಪಂದ್ಯ ಗೆದ್ದ ಭಾರತ ತಂಡ
Photos: ICC/BCCI
ಮುಂದಿನ ಸ್ಟೋರಿ ಕ್ಲಿಕ್ ಮಾಡಿ