ಕೇದಾರನಾಥ ದೇಗುಲದಿಂದ 228 ಕಿಲೋ ಚಿನ್ನ ನಾಪತ್ತೆ, ಏನಿದು ಪ್ರಕರಣ
By Umesh Kumar S
Jul 18, 2024
Hindustan Times
Kannada
ಕೇದಾರನಾಥದಿಂದ 228 ಕಿಲೋ ಚಿನ್ನ ನಾಪತ್ತೆ ಪ್ರಕರಣ ಈಗ ಚರ್ಚೆಯ ಕೇಂದ್ರ ಬಿಂದು.
ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಈ ಆರೋಪ ಮಾಡಿದ್ದು, ಚಿನ್ನದ ಹಗರಣ ಎಂದು ಕರೆದಿದ್ದಾರೆ.
ಕೇದಾರನಾಥದಿಂದ 228 ಕೆಜಿ ಚಿನ್ನ ನಾಪತ್ತೆಯಾಗಿದೆ. ಯಾವುದೇ ತನಿಖೆ ಕೂಡ ನಡೆಸಿಲ್ಲ ಎಂದು ಅವಿಮುಕ್ತೇಶ್ವರಾನಂದ್ ಆರೋಪಿಸಿದ್ದಾರೆ
ದೆಹಲಿಯಲ್ಲಿ ಕೇದಾರನಾಥ ನಿರ್ಮಾಣಕ್ಕೆ ಅವರು ವಿರೋಧಿ ವ್ಯಕ್ತಪಡಿಸಿದ್ದಾರೆ. ಈ ಚಿನ್ನದ ಹಗರಣ 2023ರ ಜೂನ್ ತಿಂಗಳಲ್ಲಿ ಬೆಳಕಿಗೆ ಬಂದಿತು.
ಅಂದು ಕೇದಾರನಾಥ ಧಾಮದ ಮುಖ್ಯ ಅರ್ಚಕ ಸಂತೋಷ್ ತ್ರಿವೇದಿ ಅವರು ಚಿನ್ನದ ಲೇಪನದಲ್ಲಿ ಅವ್ಯವಹಾರದ ಆರೋಪ ಮಾಡಿದ್ದರು.
ದೇಗುಲದ ಗರ್ಭಗುಡಿಯ ಗೋಡೆಗಳ ಮೇಲೆ ಚಿನ್ನ ಮರುಲೇಪನದ ಹೆಸರಲ್ಲಿ 125 ಕೋಟಿ ರೂ ಅವ್ಯವಹಾರದ ಆರೋಪ ಮಾಡಿದ್ದರು.
ಈ ಚಿನ್ನವನ್ನು 2005 ರಲ್ಲಿ ದೇವಾಲಯದ ಗೋಡೆಗಳ ಮೇಲೆ ಲೇಪಿಲಾಯಿತು. ದಾನಿಯೊಬ್ಬರು ಈ ಚಿನ್ನ ದಾನ ಮಾಡಿದ್ದರು.
ಆದರೆ, ಆ ಚಿನ್ನ ಈಗ ಹಿತ್ತಾಳೆಯಾಗಿ ಮಾರ್ಪಟ್ಟಿದೆ ಎಂದು ಸಂತೋಷ್ ತ್ರಿವೇದಿ ಹೇಳಿಕೊಂಡಿದ್ದರು.
ಬಿಕೆಟಿಸಿ ವಿರುದ್ಧ ಅವ್ಯವಹಾರದ ಆರೋಪ ಮಾಡಿದ್ದರು. ಆದರೆ, ದೇವಸ್ಥಾನ ಸಮಿತಿ ಇದನ್ನು ನಿರಾಕರಿಸಿದೆ. ಇದು ಪಿತೂರಿ ಎಂದು ಹೇಳಿತ್ತು.
ಗುಲಾಬಿಯಂತೆ ಅರಳಿದ ಸಪ್ತಮಿ ಗೌಡ; ಸಿಂಪಲ್ ಕುರ್ತಾದಲ್ಲೂ ಸಖತ್ ಕ್ಯೂಟ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ