ನೌಕರರಿಗೆ ವೇತನ ಹೆಚ್ಚಳ

8ನೇ ವೇತನ ಆಯೋಗದ ಕುರಿತು ತಿಳಿದಿರಬೇಕಾದ 5 ಸಂಗತಿಗಳು

PEXELS

By Praveen Chandra B
Jan 17, 2025

Hindustan Times
Kannada

ಕೇಂದ್ರ ಸಚಿವ ಸಂಪುಟವು 8ನೇ ವೇತನ ಆಯೋಗಕ್ಕೆ ಅನುಮತಿ ನೀಡಿದೆ. ಇದು ಕೇಂದ್ರ ಸರಕಾರದ ನೌಕರರು, ಪಿಂಚಣಿದಾರರು ಮತ್ತು ರಕ್ಷಣಾ ಸಿಬ್ಬಂದಿ ಸೇರಿದಂತೆ 1.15 ಕೋಟಿ  ಜನರ ಮೇಲೆ ಪರಿಣಾಮ ಬೀರುತ್ತದೆ. 

PINTEREST

8ನೇ ವೇತನ ಆಯೋಗದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ಸಂಗತಿಗಳು ಇಲ್ಲಿವೆ:

PINTEREST

50 ಲಕ್ಷ ಉದ್ಯೋಗಿಗಳ ವೇತನ ಹೆಚ್ಚಳ

8ನೇ ವೇತನ ಆಯೋಗವು ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಹೆಚ್ಚಿಸುತ್ತದೆ, 

PINTEREST

65 ಲಕ್ಷ ಪಿಂಚಣಿದಾರರಿಗೆ ಪರಿಹಾರ

ನಿವೃತ್ತ ರಕ್ಷಣಾ ಸಿಬ್ಬಂದಿ ಸೇರಿದಂತೆ ಸುಮಾರು 65 ಲಕ್ಷ ಪಿಂಚಣಿದಾರರು ಎಂಟನೇ ವೇತನ ಆಯೋಗದಿಂದ ಪ್ರಯೋಜನ ಪಡೆಯಲಿದ್ದಾರೆ.

PINTEREST

ದೆಹಲಿ ನೌಕರರ ಮೇಲೆ ಪರಿಣಾಮ

ದೆಹಲಿ ರಾಜ್ಯ ಸರ್ಕಾರಿ ನೌಕರರು ಮತ್ತು ರಕ್ಷಣಾ ಸಿಬ್ಬಂದಿ ಸೇರಿದಂತೆ ಸುಮಾರು ನಾಲ್ಕು ಲಕ್ಷ ದೆಹಲಿ ನೌಕರರು ಹೊಸ ವೇತನ ರಚನೆಯಿಂದ ಪ್ರಯೋಜನ ಪಡೆಯಲಿದ್ದಾರೆ.

PINTEREST

ಆರ್ಥಿಕತೆಗೂ ಪ್ರಯೋಜನ

8ನೇ ವೇತನ ಆಯೋಗವು ಫಲಾನುಭವಿಗಳ ಜೀವನ ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಎಂದು ಪಿಎಂ ನರೇಂದ್ರ ಮೋದಿ ಹೇಳಿದ್ದಾರೆ. 

PEXELS

ಬಜೆಟ್‌ಗೆ ಮೊದಲೇ ಘೋಷಣೆ

ಕೇಂದ್ರ ಬಜೆಟ್‌ಗೆ ಮೊದಲೇ ಎಂಟನೇ ವೇತನ ಆಯೋಗಕ್ಕೆ ಅನುಮತಿ ನೀಡಲಾಗಿದೆ. 

PINTEREST

ಕಪ್ಪು, ಬಿಳುಪಿನ ಸೀರೆಯುಟ್ಟ ಶ್ರೀಲೀಲಾ; ಇಲ್ಲಿದೆ ಫೋಟೋಸ್‌