ಪವನ್ ಕಲ್ಯಾಣ್‌ರಿಂದ ಕಂಗನಾ ರನೌತ್‌ವರೆಗೆ, ಲೋಕಸಭೆ ಪ್ರವೇಶಿಸಲಿರುವ 12 ಸಲೆಬ್ರಿಟಿಗಳಿವರು

By Reshma
Jun 06, 2024

Hindustan Times
Kannada

ಲೋಕಸಭಾ ಚುನಾವಣೆ 2024ರ ಫಲಿತಾಂಶ ಹೊರಬಿದಿದ್ದೆ. ಕಂಗನಾ ರನೌತ್‌ರಿಂದ ಪವನ್‌ ಕಲ್ಯಾಣ್‌ವರೆಗೆ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸೆಲೆಬ್ರೆಟಿಗಳಿವರು.

ಕಂಗನಾ ರನೌತ್‌: ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದಾರೆ. 

ಪವನ್‌ ಕಲ್ಯಾಣ್‌: ಆಂಧ್ರಪ್ರದೇಶದ ಪಿಠಾಪುರಂನಿಂದ ತಮ್ಮದೇ ಸ್ವಂತ ಜನಸೇನಾ ಪಕ್ಷದಿಂದ ಸ್ಪರ್ಧೆ ಮಾಡಿ ವಿಜಯ ಸಾಧಿಸಿದ್ದಾರೆ. 

ಅರುಣ್‌ ಗೋವಿಲ್‌: ಉತ್ತರಪ್ರದೇಶದ ಮೀರತ್‌ನಿಂದ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. 

ಹೇಮಮಾಲಿನಿ: ಉತ್ತರಪ್ರದೇಶದ ಮಥುರಾದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 

ಶತ್ರುಘ್ನ ಸಿನ್ಹಾ: ಪಶ್ಚಿಮ ಬಂಗಾಳದ ಅಸನ್ಸೋಲ್‌ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ವಿಜಯಶಾಲಿಯಾಗಿದ್ದಾರೆ. 

ಮನೋಜ್‌ ತಿವಾರಿ: ದೆಹಲಿ ಈಶಾನ್ಯ, ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 

ರವಿ ಕಿಶನ್‌: ಉತ್ತರಪ್ರದೇಶ, ಗೋರಖ್‌ಪುರದಲ್ಲಿ ಗೆಲುವು; ಬಿಜೆಪಿ

ದೇವ್‌ ಅಧಿಕಾರಿ: ತೃಣಮೂಲ ಕಾಂಗ್ರೆಸ್‌ ಪಕ್ಷದಿಂದ ಗೆಲುವು ಸಾಧಿಸಿರುವ ಇವರು ಪಶ್ಚಿಮ ಬಂಗಾಳದ ಘಟಾಲ್‌ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. 

ಜೂನ್‌ ಮಾಲಿಯಾ: ತೃಣಮೂಲ ಕಾಂಗ್ರೆಸ್‌ನಿಂದ ಪಶ್ಚಿಮ ಬಂಗಾಳದ ಮೇದಿನಿಪುರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 

ರಚನಾ ಬ್ಯಾನರ್ಜಿ: ಪಶ್ಚಿಮ ಬಂಗಾಳದ ಹೂಗ್ಲಿಯಿಂದ ಸ್ಪರ್ಧಿಸಿದ್ದ ಇವರು ತೃಣಮೂಲ ಕಾಂಗ್ರೆಸ್‌ ಪಕ್ಷದಿಂದ ಚುನಾವಣೆಗೆ ನಿಂತಿದ್ದರು. 

ಶತಾಬ್ದಿ ರಾಯ್‌: ತೃಣಮೂಲ ಕಾಂಗ್ರೆಸ್‌ ಪಕ್ಷದಿಂದ ಪಶ್ಚಿಮ ಬಂಗಾಳದ ಬಿರ್ಭುಮ್‌ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. 

ಸುರೇಶ್‌ ಗೋಪಿ: ಬಿಜೆಪಿ ಪಕ್ಷದಿಂದ ಕೇರಳದ ತ್ರಿಶೂರ್‌ನಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 

ಬಾಳೆಹೊನ್ನೂರು ರಂಭಾಪುರಿ ಸ್ವಾಮೀಜಿಗಳ ಇಷ್ಟಲಿಂಗಪೂಜೆ