ಭಾರತದ ಈ ರಾಜ್ಯ ಗರಿಷ್ಠ ಸಂಖ್ಯೆಯಲ್ಲಿ ಪ್ರಧಾನಿಗಳನ್ನು ಕೊಟ್ಟಿದೆ

By Raghavendra M Y
Mar 11, 2024

Hindustan Times
Kannada

ಭಾರತದ ಪ್ರಧಾನಿ ಹುದ್ದೆಗೇರಿರುವ 14 ಮಂದಿಯ ಪೈಕಿ 9 ಜನರು ಉತ್ತರ ಪ್ರದೇಶದವರೇ ಆಗಿದ್ದಾರೆ. ಲೋಕಸಭೆಗೆ ಅತಿ ಹೆಚ್ಚು ಸಂಸದರನ್ನ ಕಳಿಸುವ ರಾಜ್ಯವೂ ಇದೇ ಆಗಿದೆ

ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು 1964 ರಲ್ಲಿ ನಿಧನರಾಗುವವರೆಗೆ ಉತ್ತರ ಪ್ರದೇಶದ ಫುಲ್ಪ ಕ್ಷೇತ್ರವನ್ನ 3 ಬಾರಿ ಪ್ರತಿನಿಧಿಸಿದ್ದರು

ಲಾಲಾ ಬಹದ್ದೂರ್ ಶಾಸ್ತ್ರಿಯವರುು ಅಲಹಾಬಾದ್‌ನಿಂದ 2 ಬಾರಿ ಗೆದ್ದು ಬಂದಿದ್ದರು. ಒಂದೂವರೆ ವರ್ಷ ಪ್ರಧಾನಿಯಾಗಿ ದೇಶ ಸೇವೆ ಮಾಡಿದ್ದಾರೆ

ಇಂದಿರಾ ಗಾಂಧಿಯವರು 1977 ರಲ್ಲಿ ಸೋಲುವವರೆಗೆ ರಾಯ್‌ಬರೇಲಿಯಿಂದ 2 ಬಾರಿ ಗೆಲುವು ಸಾಧಿಸಿದ್ದರು. 1966-77, 1980-84 ಪ್ರಧಾನಿಯಾಗಿದ್ದರು 

ಉತ್ತರ ಪ್ರದೇಶದ ಬಾಗ್‌ಪತ್‌ನಿಂದ 3 ಮೂರಿ ಸಂಸತ್‌ಗೆ ಆಯ್ಕೆಯಾಗಿದ್ದ ಚರಣ್ ಸಿಂಗ್ ಅವರು 1979-80ರ ಅವಧಿಯಲ್ಲಿ 170 ದಿನಗಳ ಕಾಲ ಪ್ರಧಾನಿಯಾಗಿದ್ದರು

ಅಮೇಥಿಯಿಂದ 4 ಬಾರಿ ಗೆದ್ದು ಬಂದಿದ್ದ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಪತ್ನಿ ಸೋನಿಯಾ, ಪುತ್ರ ರಾಹುಲ್ ಇಲ್ಲಿಂದಲೇ ಆಯ್ಕೆಯಾಗಿದ್ದಾರೆ

ಫತೇಪುರ್‌ ಕ್ಷೇತ್ರವನ್ನು 2 ಬಾರಿ ಪ್ರತಿನಿಧಿಸಿದ್ದವರು ಮಾಜಿ ಪ್ರಧಾನಿ ವಿಪಿ ಸಿಂಗ್. ಇದಕ್ಕೂ ಮುನ್ನ ಇವರು ಅಲಹಾಬಾದ್, ಫುಲ್ಪುರದಿಂದ ಆಯ್ಕೆಯಾಗಿದ್ದರು

ಯುಪಿಯ ಬಲ್ಲಿಯಾ ಲೋಕಸಭಾ ಕ್ಷೇತ್ರದಿಂದ 8 ಬಾರಿ ಆಯ್ಕೆಯಾಗಿ ಬಂದಿದ್ದವರು ಚಂದ್ರಶೇಖರ್

ಅಟಲ್ ಬಿಹಾರಿ ವಾಜಪೇಯಿ ಅವರು ಲಕ್ನೋದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ದೆಹಲಿ, ಗಾಲ್ವಿಯರ್ ಹಾಗೂ ಬಲರಾಂಪುರದಿಂದಲೂ ಗೆದ್ದು ಬಂದಿದ್ದರು

ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು 2014 ರಿಂದ ಎರಡು ಬಾರಿ ವಾರಣಾಸಿಯಿಂದ ಗೆದ್ದ ಬಂದಿದ್ದಾರೆ. 2024 ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ

ಆರ್ಥಿಕ ಬಿಕ್ಕಟ್ಟಿನಿಂದ ಪಾಕಿಸ್ತಾನದ ಜನ ಕಂಗಾಲು, ದಿನಬಳಕೆ ವಸ್ತುಗಳ ದರ ಗಗನಕ್ಕೇರಿದೆ