ಸೇಲ್ಸ್‌ವುಮನ್ ಆಗಿದ್ದವರು ಭಾರತದ ವಿತ್ತ ಸಚಿವರಾದ್ರು, ನಿರ್ಮಲಾ ಸೀತಾರಾಮನ್ ಓದಿದ್ದೇನು

By Umesh Kumar S
Jan 31, 2024

Hindustan Times
Kannada

ಭಾರತದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಗ್ಗೆ ಮಾತನಾಡುತ್ತೀರಾದರೆ ಈ 10 ಆಸಕ್ತಿಕರ ಅಂಶಗಳನ್ನು ನೀವು ತಿಳಿದಿರಿ... 

ತಮಿಳುನಾಡಿನ ಮಧುರೆನಲ್ಲಿ 18 ಆಗಸ್ಟ್ 1959ರಲ್ಲಿ ಜನನ. ಸೇಲ್ಸ್‌ವುಮನ್ ಆಗಿದ್ದವರು ಇಂದು ಭಾರತದ ಹಣಕಾಸು ಸಚಿವರು. 

ಮಧ್ಯಮ ವರ್ಗದ ಕುಟುಂಬ. ತಂದೆ ಹೆಸರು ನಾರಾಯಣ ಸೀತಾರಾಮನ್‌, ತಾಯಿ ಸಾವಿತ್ರಿ ಸೀತಾರಾಮನ್. ತಂದೆ ರೈಲ್ವೆ ಉದ್ಯೋಗಿ, ತಾಯಿ ಗೃಹಿಣಿ. 

ಮದ್ರಾಸ್ ಮತ್ತು ತಿರುಚಿರಾಪಳ್ಳಿಯಲ್ಲಿ ಶಾಲಾ ಶಿಕ್ಷಣ. ಬಿಎ ಎಕನಾಮಿಕ್ಸ್‌ ಪದವಿ, ಜೆಎನ್‌ಯುನಲ್ಲಿ ಸ್ನಾತಕೋತ್ತರ ಪದವಿ.

ಪರಕಲ ಪ್ರಭಾಕರ ಅವರೊಂದಿಗೆ 1986ರಲ್ಲಿ ವಿವಾಹ. ಬಳಿಕ ಲಂಡನ್ ವಾಸ. ಲಂಡನ್‌ನಲ್ಲಿ ಸೇಲ್ಸ್‌ವುವನ್‌ ಆಗಿ ಕೆಲಸ ಮಾಡಿದ್ದರು. 

ಪ್ರೈಸ್‌ವಾಟರ್‌ಹೌಸ್‌ಕೂಪರ್‌ನಲ್ಲಿ ಮ್ಯಾನೇಜರ್‌. ಬಿಬಿಸಿಗೂ ಕೆಲ ಕಾಲ ಕೆಲಸ ಮಾಡಿದ್ದರು ಎನ್ನುತ್ತಿವೆ ವರದಿಗಳು. 

1991ರಲ್ಲಿ ಭಾರತಕ್ಕೆ ಹಿಂದಿರುಗಿದ ನಿರ್ಮಲಾ ಸೀತಾರಾಮನ್, 2003ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿದ್ದರು. 

2004ರಲ್ಲಿ ಬಿಜೆಪಿಗೆ ಸೇರಿದರು. ಬಿಜೆಪಿಯ ವಕ್ತಾರರಾಗಿ ಮುಖ್ಯವಾಹಿನಿಗಳಲ್ಲಿ ಚರ್ಚೆಗಳ ಭಾಗವಹಿಸಿದರು. 

ಇಂದಿರಾಗಾಂಧಿ ಬಳಿಕ ರಕ್ಷಣಾ ಖಾತೆ ಹೊಂದಿದ ಮಹಿಳೆ ಎಂಬ ಕೀರ್ತಿಗೆ ಭಾಜನರಾದರು. 

ನರೇಂದ್ರ ಮೋದಿ ಸರ್ಕಾರದ ಈ ಅವಧಿಯಲ್ಲಿ ವಿತ್ತ ಸಚಿವರಾಗಿ ಸತತ ಆರನೇ ಬಜೆಟ್ ಮಂಡಿಸುತ್ತಿದ್ದಾರೆ. 

ಕೃಷ್ಣ ಭಕ್ತೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಶಾಸ್ತ್ರೀಯ ಸಂಗೀತ ಆಲಿಸುವುದೆಂದರೆ ಬಲು ಪ್ರೀತಿ. ಪ್ರವಾಸ, ಚಾರಣ ಮತ್ತು ಅಡುಗೆ ಮಾಡುವುದು ಕೂಡ ಇಷ್ಟ. 

ಸೀಬೆ ಹಣ್ಣನ್ನು ಬೆಂಕಿಯಲ್ಲಿ ಸುಟ್ಟು ತಿನ್ನುವುದರಿಂದ ಏನೆಲ್ಲ ಪ್ರಯೋಜ‌ನ ಇದೆ ನೋಡಿ