ಭಾರತದ 7 ಶ್ರೀಮಂತ ದೇವಾಲಯಗಳಿವು 

By Reshma
Jan 24, 2024

Hindustan Times
Kannada

ಹಿಂದೂ ರಾಷ್ಟ್ರ ಎಂದೇ ಕರೆಸಿಕೊಳ್ಳುವ ಭಾರತದಲ್ಲಿ ಸಾವಿರಾರು ದೇವಾಲಯಗಳಿವೆ. ಇಲ್ಲಿನ ದೇವಾಲಯಗಳು ಇತಿಹಾಸ ಪ್ರಸಿದ್ಧವಾಗಿರುವುದು ಮಾತ್ರವಲ್ಲ ಶ್ರೀಮಂತಿಕೆಯಿಂದಲೂ ಹೆಸರು ಗಳಿಸಿವೆ. ಭಾರತದಲ್ಲಿನ 7 ಅತ್ಯಂತ ಶ್ರೀಮಂತ ದೇಗುಲಗಳ ಬಗ್ಗೆ ನೀವೂ ತಿಳಿಯಿರಿ. 

ಅನಂತಪದ್ಮನಾಭ ದೇವಸ್ಥಾನ ತಿರುವನಂತಪುರ, ಕೇರಳ: ಭಾರತದ ಅತ್ಯಂತ ಶ್ರೀಮಂತ ದೇವರುಗಳ ಪಟ್ಟಿಯಲ್ಲಿ ಈ ದೇವರಿಗೆ ಅಗ್ರಸ್ಥಾನ. ಈ ದೇವಾಲಯದ ಒಟ್ಟು ಆಸ್ತಿ 1,20,000 ಕೋಟಿ. 

ತಿರುಪತಿ ವೆಂಕಟರಮಣ: ಭಾರತದಲ್ಲಿ ಅತಿ ಹೆಚ್ಚು ಜನರು ಭೇಟಿ ನೀಡುವ ದೇವಾಲಯ ಇದಾಗಿದೆ. ಈ ದೇವಸ್ಥಾನದ ಆದಾಯ 3 ಲಕ್ಷ ಕೋಟಿ ಎನ್ನಲಾಗುತ್ತದೆ. 

ಗುರುವಾಯೂರು ದೇವಸ್ಥಾನ: ಕೇರಳದ ಗುರುವಾಯೂರಿನ ಶ್ರೀಕೃಷ್ಣ ದೇಗುಲವು 1,737.04 ಕೋಟಿ ಹಣ ಹಾಗೂ 271.05 ಎಕರೆ ಭೂಮಿ ಹೊಂದಿದೆ. ಪ್ರಪಂಚದಾದ್ಯಂತ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. 

ಶಿರಡಿ ಸಾಯಿಬಾಬಾ: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಶಿರಡಿ ಸಾಯಿ ಮಂದಿರದ ಒಟ್ಟು ಆಸ್ತಿ ಮೌಲ್ಯ 400 ಕೋಟಿ. 

ವೈಷ್ಣೋದೇವಿ ದೇವಾಲಯ ಜಮ್ಮು: ಭಾರತದ ಶ್ರೀಮಂತ ದೇವರುಗಳ ಪಟ್ಟಿಯಲ್ಲಿ ಜಮ್ಮುವಿನಲ್ಲಿರುವ ವೈಷ್ಣೋದೇವಿ ದೇಗುಲ ಕೂಡ ಸೇರಿದೆ. ಈ ದೇಗುಲವು 1,800 ಕೆಜಿ ಚಿನ್ನ ಹಾಗೂ 2000 ಕೋಟಿ ಹಣ ಹೊಂದಿದೆ. 

ಮದುರೈ ಮೀನಾಕ್ಷಿ: ತಮಿಳುನಾಡಿನಲ್ಲಿರುವ ಮಧುರೈ ಮೀನಾಕ್ಷಿ ದೇವಾಲಯದ ವಾರ್ಷಿಕ ಆದಾಯ ಸರಿಸುಮಾರು 60 ಮಿಲಿಯನ್‌.  

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS