ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ವಲ್ಪ ಬಿಗುನಿಲುವು ಹೊಂದಿರುವ ವ್ಯಕ್ತಿತ್ವದವರು. ಮನೆಯಲ್ಲಿ ಖರ್ಚು ವೆಚ್ಚ ಹಿಡಿತದಲ್ಲಿರಲಿ ಎನ್ನುವ ಬಿಗುನಿಲುವಿನ ಅಮ್ಮಂದಿರು ಹೇಗಿದ್ದಾರೋ ಹಾಗೆ,
ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಸತತ 8ನೇ ಕೇಂದ್ರ ಬಜೆಟ್ ಮಂಡಿಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಫೆಬ್ರವರಿ 1 ರಂದು ಕೇಂದ್ರ ಬಜೆಟ್ 2025 ಮಂಡನೆಯಾಗಲಿದೆ.
ತಮಿಳುನಾಡಿನ ಮಧುರೈನಲ್ಲಿ 1959ರ ಆಗಸ್ಟ್ 18ರಂದು ಜನನ. ನಾರಾಯಣನ್ ಸೀತಾರಾಮನ್ ಮತ್ತು ಸಾವಿತ್ರಿ ದಂಪತಿಯ ಪುತ್ರಿ..ಮಧ್ಯಮ ವರ್ಗದ ಕುಟುಂಬ ಜೀವನ ಕಲಿಸಿದ ಸರಳತೆ, ಶಿಸ್ತು, ಶಿಕ್ಷಣ ಬದುಕಿನಲ್ಲಿ ಮೈಗೂಡಿಕೊಂಡಿದೆ
ಪ್ರತಿಭಾನ್ವಿತ ವಿದ್ಯಾರ್ಥಿನಿ.ಸೀತಾಲಕ್ಷ್ಮಿ ರಾಮಸ್ವಾಮಿ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ, ನವದೆಹಲಿಯ ಜವಾಹರಲಾಲ್ ನೆಹರು ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ರಾಜಕೀಯಕ್ಕೆ ಸೇರುವ ಮೊದಲು, ನಿರ್ಮಲಾ ಸೀತಾರಾಮನ್ ಲಂಡನ್‌ನಲ್ಲಿ ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್ (PwC) ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.ನಂತರ, ಬ್ರಿಟನ್‌ನ ಕೃಷಿ ಇಂಜಿನಿಯರ್ಸ್ ಅಸೋಸಿಯೇಷನ್‌ಗೆ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.
ರಾಜಕೀಯಕ್ಕೆ ಸೇರುವ ಮೊದಲು, ನಿರ್ಮಲಾ ಸೀತಾರಾಮನ್ ಲಂಡನ್‌ನಲ್ಲಿ ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್ (PwC) ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.ನಂತರ, ಬ್ರಿಟನ್‌ನ ಕೃಷಿ ಇಂಜಿನಿಯರ್ಸ್ ಅಸೋಸಿಯೇಷನ್‌ಗೆ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.
ನಿರ್ಮಲಾ ಸೀತಾರಾಮನ್ ಅವರು 2017ರಲ್ಲಿ ಭಾರತದ ಎರಡನೇ ಮಹಿಳಾ ರಕ್ಷಣಾ ಸಚಿವರಾಗಿ ಹೊಣೆಗಾರಿಕೆ ನಿರ್ವಹಿಸಿದರು. 2019ರಲ್ಲಿ ಪೂರ್ಣಾವಧಿಯ ಹಣಕಾಸು ಸಚಿವರಾಗಿ ನೇಮಕವಾದರು. ಅಲ್ಲಿಂದೀಚೆಗೆ ಅವರೇ ಈ ಹೊಣೆಗಾರಿಕೆ ನಿಭಾಯಿಸುತ್ತಿದ್ದಾರೆ
ಭಾರತ ಕೋವಿಡ್ ಸಂಕಷ್ಟ ಎದುರಿಸಿದ ಸಂದರ್ಭದಲ್ಲಿ ಅರ್ಥ ವ್ಯವಸ್ಥೆ ಸಂಪೂರ್ಣವಾಗಿ ತಲ್ಲಣಗೊಂಡಿತ್ತು. ಆಗ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಿದ್ದ ನಿರ್ಮಲಾ ಸೀತಾರಾಮನ್, ಹಣಕಾಸು ಸ್ಥಿತಿ ಸರಿದೂಗಿಸಿ ಸೈ ಅನಿಸಿಕೊಂಡಿದ್ದರು.
ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಮೂಲಸೌಕರ್ಯ, ಆರೋಗ್ಯ ರಕ್ಷಣೆ, ಡಿಜಿಟಲೀಕರಣ ಮತ್ತು ಆರ್ಥಿಕ ಬೆಳವಣಿಗೆ ಹೆಚ್ಚಿಸುವ ಕಡೆಗೆ ಗಮನಕೇಂದ್ರೀಕರಿಸಿದೆ. 2021ರಲ್ಲಿ ಮೊದಲ ಬಾರಿಗೆ ಪೇಪರ್‌ಲೆಸ್ ಬಜೆಟ್ ಮಂಡಿಸಿದರು
ರಾಜಕೀಯಕ್ಕೆ ಹೊರತಾಗಿ ನಿರ್ಮಲಾ ಸೀತರಾಮನ್ ಅವರ ವೈಯಕ್ತಿಕ ಬದುಕು ಕೂಡ ಗಮನಸೆಳೆಯುವಂಥದ್ದು. ಸೈದ್ಧಾಂತಿಕವಾಗಿ ಭಿನ್ನ ಚಿಂತನೆಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ ಅವರು ನಿರ್ಮಲಾ ಸೀತಾರಾಮನ್ ಪತಿ. ಮಗಳು ಪರಕಾಲ ವಾಂಗ್ಮಯಿ. ನಿರ್ಮಲಾ ಅವರಿಗೆ ಶಾಸ್ತ್ರೀಯ ಸಂಗೀತ ಬಹಳ ಅಚ್ಚುಮೆಚ್ಚು, ಓದುವ ಹವ್ಯಾಸವೂ ಇದೆ.