ಐದು ದಿನ ಮುಂಚಿತವಾಗಿ  ಮುಂಗಾರು ಮಳೆ ಆಗಮನದ ನಿರೀಕ್ಷೆ

By Umesh Kumar S
May 11, 2025

Hindustan Times
Kannada

ಸಾಮಾನ್ಯವಾಗಿ ಜೂನ್ 1 ಅಥವಾ 2 ರಂದು ಮುಂಗಾರು ಮಳೆ ಕೇರಳವನ್ನು ಪ್ರವೇಶಿಸುವುದು ವಾಡಿಕೆ. ಆದರೆ ಈ ಬಾರಿ ಮೇ 27 ರಂದು ಕೇರಳ ಪ್ರವೇಶಿಸಲಿದೆ

Pixabay

ಅದಾಗಿ ಎರಡು ಅಥವಾ ಮೂರು ದಿನಕ್ಕೆ ಮುಂಗಾರು ಮಳೆ ಕರ್ನಾಟಕವನ್ನು ಪ್ರವೇಶಿಸಲಿದೆ. ಅಂದರೆ ಮೇ 31 ಅಥವಾ ಜೂನ್ 1ಕ್ಕೆ ಕರ್ನಾಟಕದಲ್ಲಿ ಮುಂಗಾರು ಮಳೆ ಶುರುವಾಗಲಿದೆ.

ನಿರೀಕ್ಷೆಯಂತೆ, ಕೇರಳಕ್ಕೆ ಮುಂಗಾರು ಮೇ 27ಕ್ಕೆ ಆಗಮಿಸಿದರೆ, 16 ವರ್ಷಗಳ ಬಳಿಕ ಮೊದಲ ಬಾರಿಗೆ ಭಾರತದ ಮುಖ್ಯ ಭೂ ಭಾಗಗಳಲ್ಲಿ ಮುಂಗಾರು ಮಳೆ ಬಹುಬೇಗನೆ ಶುರುವಾದಂತಾಗಲಿದೆ.

pexels

ಇದಕ್ಕೂ ಮುನ್ನ 2009ರಲ್ಲಿ ನಿಗದಿತ ಸಮಯಕ್ಕೆ ಮುಂಚಿತವಾಗಿ ಮುಂಗಾರು ಮಳೆ ಶುರುವಾಗಿತ್ತು. ಆ ವರ್ಷ ಮೇ 23ರಂದು ಕೇರಳಕ್ಕೆ ಮುಂಗಾರು ಆಗಮಿಸಿತ್ತು.

pexels

ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳಕ್ಕೆ ಆಗಮಿಸುವ ಮುಂಗಾರು ಮಳೆ ಜೂನ್ 8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ.

pexels

ಸೆಪ್ಟೆಂಬರ್ 17ರ ಸುಮಾರಿಗೆ ವಾಯುವ್ಯ ಭಾರತಕ್ಕೆ ಹೋಗಿ ಅಲ್ಲಿಂದಾಚೆಗೆ, ಅಕ್ಟೋಬರ್ 15ರ ವೇಳೆಗೆ ಮುಂಗಾರು ಮಳೆ ಸೀಸನ್ ಮುಗಿಯುವುದು ವಾಡಿಕೆ.

pexels

ಕಳೆದ ವರ್ಷ ಮೇ 30ರಂದು, 2023ರಲ್ಲಿ ಜೂನ್ 8, 2022 ರಲ್ಲಿ ಮೇ 29, 2021 ರಲ್ಲಿ ಜೂನ್ 3, 2020ರಲ್ಲಿ ಜೂನ್ 1, 2019ರಲ್ಲಿ ಜೂನ್ 8. ಮತ್ತು 2018ರಲ್ಲಿ ಮೇ 29ರಂದು ಮಾನ್ಸೂನ್ ಕೇರಳಕ್ಕೆ ಪ್ರವೇಶಿಸಿತ್ತು.

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS