By Umesh Kumar S
Jan 28, 2025

Hindustan Times
Kannada

ಭಾರತದ ವಿತ್ತ ಸಚಿವರಾಗಿ ಹೆಚ್ಚು ಕಾಲ ಹೊಣೆಗಾರಿಕೆ ನಿಭಾಯಿಸಿದ 7 ಸಚಿವರು ಇವರು. ಮೊರಾರ್ಜಿ ದೇಸಾಯಿ ಅವರಿಂದ ಹಿಡಿದು ಹಾಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತನಕ ಯಾರೆಲ್ಲ ಹೆಚ್ಚು ಅವಧಿಗೆ ವಿತ್ತ ಸಚಿವ ಸ್ಥಾನದ ಕರ್ತವ್ಯ ನಿರ್ವಹಿಸಿದ್ದಾರೆ ತಿಳಿಯೋಣ. 

ನಿರಂತರ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸದೇ ಇದ್ದರೂ ಹೆಚ್ಚು ಕಾಲ ವಿತ್ತ ಸಚಿವರಾಗಿದ್ದವರು ಪಿ ಚಿದಂಬರಂ. 

ಪಿ ಚಿದಂಬರಂ 

ಅವಧಿ - 1996-98, 2004-08, 2012-14 (8 ವರ್ಷ) 

ಜವಾಹರಲಾಲ್ ನೆಹರೂ ಸಚಿವ ಸಂಪುಟದಲ್ಲಿ ಮತ್ತು ಇಂದಿರಾ ಗಾಂಧಿ ಸರ್ಕಾರ ಇದ್ದಾಗ ಹಣಕಾಸು ಸಚಿವರಾಗಿದ್ದರು. ಭಾರತದ ಮೊದಲ ಕಾಂಗ್ರೆಸ್ಸೇತರ ಪಕ್ಷದ ಪ್ರಧಾನಮಂತ್ರಿಯೂ ಹೌದು.

ಮೊರಾರ್ಜಿ ದೇಸಾಯಿ 

ಅವಧಿ - 1958-63, 1967- 69 (7 ವರ್ಷ)

ಕೇಂದ್ರ ವಿತ್ತ ಸಚಿವರಾಗಿ ಒಟ್ಟು ಆರು ವರ್ಷ ಸೇವೆ ಸಲ್ಲಿಸಿದ್ದರು. ರಾಷ್ಟ್ರಪತಿ ಹುದ್ದೆಗೇರಿದ ಪಶ್ಚಿಮ ಬಂಗಾಳ ಮೂಲದ ಮೊದಲ ವ್ಯಕ್ತಿ.

ಪ್ರಣಬ್ ಮುಖರ್ಜಿ

ಅವಧಿ - 1982-84, 2009-12 (6 ವರ್ಷ)

ಯಶವಂತ ಸಿನ್ಹ ಅವರು ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಹಣಕಾಸು ಬಾಧ್ಯತೆ ಕಾನೂನು ಜಾರಿಗೊಳಿಸಿದರು.

ಯಶವಂತ ಸಿನ್ಹ

ಅವಧಿ- 1998- 2004 (6 ವರ್ಷ) 

ಸ್ವತಂತ್ರ ಭಾರತದ ಮೂರನೇ ಹಣಕಾಸು ಸಚಿವರಾಗಿದ್ದರು.ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ದ ಮೊದಲ ಗವರ್ನರ್ ಆಗಿದ್ದರು

ಸಿಡಿ ದೇಶಮುಖ

ಅವಧಿ- 1950- 1956 (6 ವರ್ಷ)

ಭಾರತದ ಮೊದಲ ಮಹಿಳಾ ವಿತ್ತ ಸಚಿವರು. ಹಾಲಿ ಹಣಕಾಸು ಸಚಿವೆಯೂ ಹೌದು. ಸತತವಾಗಿ 7 ಕೇಂದ್ರ ಬಜೆಟ್ ಮಂಡಿಸಿರುವ ನಿರ್ಮಲಾ ಸೀತರಾಮನ್, ಫೆ 1 ರಂದು 8ನೇ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ.

ನಿರ್ಮಲಾ ಸೀತಾರಾಮನ್

ಅವಧಿ- 2019ರಿಂದ (5+ ವರ್ಷ)

ಭಾರತದ ಅರ್ಥ ವ್ಯವಸ್ಥೆಯನ್ನು ಉದಾರೀಕರಣ, ಖಾಸಗೀಕರಣ, ಜಾಗತೀಕರಣಕ್ಕೆ ತೆರೆದು ಬಿಟ್ಟ ವಿತ್ತ ಸಚಿವ ಡಾ ಮನಮೋಹನ್ ಸಿಂಗ್. 1991ರಲ್ಲಿ ಈ ಸುಧಾರಣಾ ಕ್ರಮಗಳನ್ನು ಅವರು ಜಾರಿಗೊಳಿಸಿದರು. ಇದು ಭಾರತದ ಬೆಳವಣಿಗೆ ಬುನಾದಿಯಾಯಿತು. 

ಡಾ ಮನಮೋಹನ ಸಿಂಗ್ 

ಅವಧಿ - 1991-96 (5 ವರ್ಷ) 

ಹೆಚ್ಚಿನ ಉಷ್ಣಾಂಶ ಇರುವ ಕರ್ನಾಟಕದ ಪ್ರಮುಖ ನಗರಗಳು