ಹಿಂದೂ ಧರ್ಮದಲ್ಲಿ ನವಿಲುಗರಿಯನ್ನು ಬಹಳ ಶುಭ ಎಂದು ನಂಬಲಾಗಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ನವಿಲುಗರಿಗಳು ಎಲ್ಲಾ ರೀತಿಯ ಗ್ರಹ ದೋಷಗಳನ್ನು ತೆಗೆದುಹಾಕುವ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಇದನ್ನು ಬಹಳ ಪವಿತ್ರ ಎಂದು ನಂಬಲಾಗಿದೆ.
ನವಿಲುಗರಿಯನ್ನು ನೋಡುವುದು ಬಹಳ ಮಂಗಳಕರ ಎಂದು ನಂಬಲಾಗಿದೆ. ಇದನ್ನು ನೋಡುವುದು ಪೂಜೆ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಆಸೆಗಳು ನೆರವೇರುತ್ತದೆ
ಒಂದು ವೇಳೆ ನೀವು ರಸ್ತೆಯಲ್ಲಿ ಹೋಗುವಾಗ ನಿಮಗೆ ನವಿಲುಗರಿ ಕಂಡರೆ ಅದನ್ನು ಸ್ವಚ್ಛಗೊಳಿಸಿ ಮನೆಗೆ ಕೊಂಡೊಯ್ಯಬಹುದು. ಹೀಗೆ ಮಾಡುವುದರಿಂದ ನಿಮಗೆ ಶುಭವಾಗುವುದು.
ಹೊರಗೆ ನಿಮಗೆ ದೊರೆತ ನವಿಲುಗರಿಯನ್ನು ಮನೆಗೆ ತಂದು ಪೂರ್ವ ದಿಕ್ಕಿಗೆ ಇಟ್ಟರೆ ಅದರಿಂದ ಒಳ್ಳೆಯ ಫಲಿತಾಂಶ ದೊರೆಯುತ್ತದೆ.
ನವಿಲುಗರಿ ಮನೆಯಲ್ಲಿದ್ದರೆ ನಿಮ್ಮ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ
ಬೆಳ್ಳಂ ಬೆಳಗ್ಗೆ ನೀವು ನವಿಲು ಅಥವಾ ನವಿಲುಗರಿಯನ್ನು ನೋಡಿದರೆ ಇಡೀ ದಿನ ಧನಾತ್ಮಕ ಅಂಶಗಳಿಂದ ಕೂಡಿರುತ್ತದೆ
ನೀವು ಯಾವುದಾದೂ ಕೆಲಸಕ್ಕೆ ಹೋಗುವಾಗ ನವಿಲುಗರಿಗಳು ನಿಮ್ಮ ಕಣ್ಣಿಗೆ ಬಿದ್ದರೆ ಆ ಕೆಲಸ ನೂರಕ್ಕೆ ನೂರರಷ್ಟು ಯಶಸ್ವಿ ಎಂದೇ ಅರ್ಥ
ಒಟ್ಟಿನಲ್ಲಿ ನವಿಲುಗರಿಯನ್ನು ನೋಡುವುದು, ಮನೆಗೆ ತಂದು ಪೂಜಿಸುವುದು ಬಹಳ ಶ್ರೇಷ್ಠ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.