ಕ್ರಿಸ್‌ಮಸ್‌ ಸಮಯದಲ್ಲಿ ಬೆಲ್‌ ಬಾರಿಸುವುದು ಯಾಕೆ?

By Jayaraj
Dec 17, 2024

Hindustan Times
Kannada

ಕ್ರಿಸ್‌ಮಸ್ ಹಬ್ಬವನ್ನು ಡಿಸೆಂಬರ್ 25ರಂದು ಎಲ್ಲೆಡೆ ಉತ್ಸಾಹದಿಂದ ಆಚರಿಸಲಾಗುತ್ತದೆ. ಕ್ರಿಶ್ಚಿಯನ್ ಧರ್ಮದಲ್ಲಿ ಕ್ರಿಸ್‌ಮಸ್ ಪ್ರಮುಖ ಹಬ್ಬ.

ಕ್ರಿಶ್ಚಿಯನ್ ಧರ್ಮದ ನಂಬಿಕೆಗಳ ಪ್ರಕಾರ, ಜೀಸಸ್ ಕ್ರೈಸ್ಟ್ ಡಿಸೆಂಬರ್ 25ರಂದು ಜನಿಸಿದರು. ಹೀಗಾಗಿ ಈ ದಿನವನ್ನು ಕ್ರಿಸ್ಮಸ್ ದಿನವೆಂದು ಆಚರಿಸಲಾಗುತ್ತದೆ.

ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಕ್ರಿಸ್ಮಸ್ ಮರ ಗಮನ ಸೆಳೆಯುತ್ತದೆ. ಈ ದಿನದಂದು ಸಣ್ಣ ಬೆಲ್‌ಗಳನ್ನು ಕೂಡಾ ಬಾರಿಸಲಾಗುತ್ತದೆ. ಇದನ್ನು ರಿಂಗಿಂಗ್ ಬೆಲ್ಸ್ ಎಂದು ಹೇಳಲಾಗುತ್ತದೆ.

ಕ್ರಿಸ್‌ಮಸ್‌ ದಿನ ಚರ್ಚ್‌ಗೆ ಹೋಗಿ ಪ್ರಾರ್ಥಿಸುತ್ತಾರೆ. ಸಾಂಟಾ ಕ್ಲಾಸ್‌ ಕೂಡಾ ಹಬ್ಬದ ಆಕರ್ಷಣೆ. ಕೇಕ್ ತಯಾರಿಯೂ ಸಡಗರ ಹೆಚ್ಚಿಸುತ್ತದೆ.

ಕ್ರಿಶ್ಚಿಯನ್ ಧರ್ಮದಲ್ಲಿ ಕ್ರಿಸ್ಮಸ್ ದಿನದಂದು ಗಂಟೆಗಳನ್ನು ಬಾರಿಸುವ ಸಂಪ್ರದಾಯವಿದೆ. ರಿಂಗಿಂಗ್ ಬೆಲ್‌ ಬಾರಿಸುವುದರ ಹಿಂದೆಯೂ ನಂಬಿಕೆ ಇದೆ.

ಸಮೃದ್ಧಿ ಸಂಕೇತವಾಗಿ ಕ್ರಿಸ್ಮಸ್ ದಿನದಂದು ಬೆಲ್‌ಗಳನ್ನು ಬಾರಿಸಲಾಗುತ್ತದೆ.

ಕ್ರಿಸ್‌ಮಸ್ ದಿನ ಮನೆಯಲ್ಲಿ ಗಂಟೆ ಬಾರಿಸುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ನಂಬಲಾಗಿದೆ.

ಸಾಂತಾಕ್ಲಾಸ್ ಕೈಯಲ್ಲಿ ಗಿಫ್ಟ್ ಜೊತೆಗೆ ಗಂಟೆ ಕೂಡ ಕಾಣಿಸುತ್ತದೆ. ಅದನ್ನು ಬಾರಿಸುವ ಮೂಲಕ  ಮಕ್ಕಳನ್ನು ಸಂತೋಷಪಡಿಸುತ್ತಾರೆ.

ಈ ಮಾಹಿತಿಯು ನಂಬಿಕೆಗಳು, ಧಾರ್ಮಿಕ ಗ್ರಂಥಗಳು ಮತ್ತು ವಿವಿಧ ಮಾಧ್ಯಮಗಳನ್ನು ಆಧರಿಸಿದೆ.

pixabay and Pexel

26 ಎಸೆತಗಳಲ್ಲಿ ಪಂದ್ಯ ಗೆದ್ದ ಭಾರತ ತಂಡ

Photos: ICC/BCCI