ಮಹಾ ಶಿವರಾತ್ರಿ ಶುಭಾಶಯಗಳು

By Rakshitha Sowmya
Jan 20, 2025

Hindustan Times
Kannada

ಈ ಬಾರಿ ಮಾರ್ಚ್‌ 26 ರಂದು ಮಹಾ ಶಿವರಾತ್ರಿ ಆಚರಿಸಲಾಗುತ್ತಿದೆ

ನಿಮ್ಮ ಆತ್ಮೀಯರಿಗೆ ಈ ರೀತಿ ಶುಭ ಹಾರೈಸಿ

ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಭಕ್ತಿ, ಆಧ್ಯಾತ್ಮಿಕತೆ ಮತ್ತು ದೈವಿಕ ಆಶೀರ್ವಾದದಿಂದ ತುಂಬಿದ ಮಹಾ ಶಿವರಾತ್ರಿಯ ಶುಭಾಶಯಗಳು.

ಚಂದ್ರಮೌಳಿಯು ನಿಮ್ಮ ಕಷ್ಟಗಳನ್ನು ಪರಿಹರಿಸಿ, ನಿಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಲಿ, ಮಹಾ ಶಿವರಾತ್ರಿಯ ಶುಭ ಹಾರೈಕೆಗಳು. 

ಈ ಶುಭದಿನದಂದು ಪಶುಪತಿಯ ಪ್ರಾರ್ಥನೆ ಮಾಡೋಣ, ನಂಜುಂಡೇಶ್ವರನ ದಿವ್ಯ ಸಾನ್ನಿಧ್ಯ, ದೈವಿಕ ಅನುಗ್ರಹವು ನಿಮ್ಮೊಂದಿಗೆ ಇರಲಿ, ಶಿವನು ಶಾಶ್ವತ ಪ್ರೀತಿ ಮತ್ತು ಶಕ್ತಿ ನಿಮಗೆ ಕರುಣಿಸಲಿ, ಮಹಾ ಶಿವರಾತ್ರಿ ಶುಭಾಶಯಗಳು

ಶಂಕರನು ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ಜಯಿಸಲು ನಿಮಗೆ ಶಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸವನ್ನು ನೀಡಲಿ, ಮಹಾ ಶಿವರಾತ್ರಿ ಶುಭಾಶಯಗಳು.

ಕೈಲಾಸವಾಸಿಯು ಆಶೀರ್ವಾದವು ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಮಹಾ ಶಿವರಾತ್ರಿ 2025 ರ ಶುಭಾಶಯಗಳು.

ಶಿವ ಪಾರ್ವತಿಯರು ನಾಡಿಗೆ ಒಳಿತು ಮಾಡಲಿ, ಸರ್ವರಿಗೂ ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು

 ಮಹಾದೇವನು ನಿಮ್ಮ ಬಾಳಿನ ಅಂಧಕಾರವನ್ನು ತೊಳೆದು, ಸಂತೋಷವೆಂಬ ಬೆಳಕನ್ನು ನೀಡಲಿ, ಮಹಾ ಶಿವರಾತ್ರಿಯ ಶುಭ ಹಾರೈಕೆಗಳು

ಎರಡನೇ ಮಗುವಿನ ತಂದೆಯಾದ ಪ್ಯಾಟ್ ಕಮಿನ್ಸ್

File