ಕಲ್ಕಿ 2898 ಎಡಿ ಬಳಿಕ ರಿಲೀಸ್‌ಗೆ ಸಿದ್ಧವಾಗುತ್ತಿರುವ 7 ಬಹು ನಿರೀಕ್ಷಿತ ಸಿನಿಮಾಗಳಿವು

By Raghavendra M Y
Jun 27, 2024

Hindustan Times
Kannada

ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಕಲ್ಕಿ 2898 ಎಡಿ ಸಿನಿಮಾ ಜೂನ್ 27ರ ಗುರುವಾರ ದೇಶಾದ್ಯಂತ ಬಿಡುಗಡೆಯಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ

ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಅಲ್ಲು ಅರ್ಜನ್ ನಟನೆಯ ಪುಷ್ಪಾ 2 ಕೂಡ ಒಂದು. ಪುಷ್ಪಾ ಮತ್ತು ಭನ್ವರ್ ಸಿಂಗ್ ನಡುವಿನ ತೀವ್ರ ಯುದ್ಧಕ್ಕೆ ಇದು ಸಾಕ್ಷಿಯಾಗುತ್ತೆ

ದೇವರ: ಎನ್‌ಟಿಆರ್ ಕೊರಟಾಲ ಶಿವ ಕಾಂಬಿನೇಷ್‌ನ ದೇವರ ಸಿನಿಮಾಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸೆಪ್ಟೆಂಬರ್ 27ಕ್ಕೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ

ಗೇಮ್ ಚೇಂಜರ್: ಎಸ್ ಶಂಕರ್ ನಿರ್ದೇಶನ ಮತ್ತು ರಾಮ್ ಚರಣ್ ಅಭಿನಯದ ರಾಜಕೀಯ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದೆ

ಇಂಡಿಯನ್ 2: ಮಾಜಿ ಸ್ವಾತಂತ್ರ್ಯ ಹೋರಾಟಗಾರ ಸೇನಾಪತಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆಯಾಗಿದೆ. ಇದು ಕಮಲ್ ಹಾಸನ್ ಅವರ ಬಹು ನಿರೀಕ್ಷಿತ ಸಿನಿಮಾ

ಕಂಗುವ: ತಮಿಳು ನಟ ಸೂರ್ಯ ಅವರ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು, ಬಾಬಿ ಡಿಯೋಲ್ ಮತ್ತು ದಿಶಾ ಪಟಾನಿ ಅವರೊಂದಿಗೆ ಸೂರ್ಯ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ವಿಶ್ವಂಭರ: ಮೆಗಾ ಸ್ಟಾರ್ ಚಿರಂಜೀವಿ ನಟನೆಯ ವಿಶ್ವಂಭರ ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ. ಅಶಿಕಾ ರಂಗನಾಥ್ ಈ ಸಿನಿಮಾದಲ್ಲಿ ಅವಕಾಶ ಪಡೆದಿದ್ದಾರೆ

ಟಾಕ್ಸಿಕ್: ಕೆಜಿಎಫ್‌ ಮೂಲಕ ಭಾರತೀಯ ಸಿನಿಮಾದಲ್ಲಿ ದೊಡ್ಡ ಹೆಸರು ಮಾಡಿರುವ ಯಶ್ ನಟನೆಯ ಟಾಕ್ಸಿಕ್ ತೆರೆಗೆ ಬರಲು ಸಿದ್ಧವಾಗುತ್ತಿದೆ. ಕಿಯಾರಾ, ಕರೀನಾ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ

ನಿರ್ಮಲಾ ಸೀತಾರಾಮನ್ ಘೋಷಿಸಿದ್ದ 5 ಆದಾಯ ತೆರಿಗೆ ನಿಯಮಗಳಿವು