ಭಾರತದಲ್ಲಿ ಅತ್ಯಂತ ನಿಧಾನವಾಗಿ ಚಲಿಸುವ ರೈಲಿದು 

By Reshma
Jun 25, 2024

Hindustan Times
Kannada

ವಿಶ್ವದ ಅತಿ ದೊಡ್ಡ ರೈಲು ಜಾಲದಲ್ಲಿ ಭಾರತೀಯ ರೈಲ್ವೆಯು ಸೇರಿದೆ. ಪ್ರತಿದಿನ ಹಲವು ಹೈಸ್ಪೀಡ್‌ ಹಾಗೂ ಪ್ಯಾಸೆಂಜರ್‌ ರೈಲುಗಳು ದೇಶದಾದ್ಯಂತ ಓಡಾಡುತ್ತವೆ. 

ಭಾರತದಲ್ಲಿ ವಂದೇ ಭಾರತ್‌, ರಾಜಧಾನಿ ಎಕ್ಸ್‌ಪ್ರೆಸ್‌, ಗತಿಮಾನ್‌ ಎಕ್ಸ್‌ಪ್ರೆಸ್‌, ದುರಂತೋ ಎಕ್ಸ್‌ಪ್ರೆಸ್‌, ಶತಾಬ್ದಿ ಎಕ್ಸ್‌ಪ್ರೆಸ್‌ ರೈಲುಗಳನ್ನು ಪ್ರೀಮಿಯಂ ವರ್ಗಕ್ಕೆ ಸೇರಿವೆ. ಈ ರೈಲುಗಳ ವೇಗವೂ ಅಧಿಕ. 

ಆದರೆ ಭಾರತದಲ್ಲಿ ನಿಧಾನಕ್ಕೆ ಚಲಿಸುವ ರೈಲು ಇದೆ. ಇದರ ಬಗ್ಗೆ ನೀವು ತಿಳಿಯಲೇಬೇಕು. 

ಭಾರತದಲ್ಲಿ ಗಂಟೆಗೆ ಸರಾಸರಿ 10ಕಿಲೋಮೀಟರ್‌ ವೇಗದಲ್ಲಿ ಚಲಿಸುವ ರೈಲು ಕೂಡ ಇದೆ. ಈ ರೈಲನ್ನು ಭಾರತದ ಅಗ್ಗದ ರೈಲು ಎಂದು ಕರೆಯುತ್ತಾರೆ. 

ನಾವು ಈಗ ಹೇಳುತ್ತಿರುವುದು ಮೈದಪಾಳಂ ಊಟಿ ನೀಲಗಿರಿ ಪ್ಯಾಸೆಂಜರ್‌ ರೈಲು. 

ಭಾರತದ ಅತ್ಯಂತ ನಿಧಾನವಾದ ರೈಲು ಎನ್ನಿಸಿಕೊಂಡಿರುವ ಈ ರೈಲು ಮೆಟ್ಟುಪಾಳ್ಯಂ ಮತ್ತು ಊಟಿ ನಡುವೆ 46 ಕಿಲೋಮೀಟರ್‌ ದೂರ ಪ್ರಯಾಣಿಸುತ್ತದೆ. 

ಮೆದ್ವೇಶಾಲಯ ಮತ್ತು ಊಟಿ ನಡುವೆ ಪ್ರಯಾಣಿಸುವಾಗ ಈ ರೈಲು ಕೆಲ್ಲರ್‌, ಕೂನೂರು, ವೆಲ್ಲಿಂಗ್ಟನ್‌, ಲವ್‌ಡೇಲ್‌ ಮತ್ತು ಊಟಕಮಂಡ್‌ ನಿಲ್ದಾಣಗಳನ್ನು ಹಾದು ಹೋಗುತ್ತದೆ. 

ಈ ರೈಲು ಹೊರಡುವ ನಿಲ್ದಾಣದಿಂದ ಕೊನೆಯ ನಿಲ್ದಾಣ ತಲುಪಲು ಎಂದರೆ 46 ಕಿಲೋಮೀಟರ್‌ ಸಾಗಲು 5 ಗಂಟೆ ತೆಗೆದುಕೊಳ್ಳುತ್ತದೆ. 

ನೀವು ರೈಲು ಪ್ರಯಾಣವನ್ನು ಎಂಜಾಯ್‌ ಮಾಡಬೇಕು ಅಂದ್ರೆ ಈ ರೈಲಿನಲ್ಲಿ ಪ್ರಯಾಣ ಮಾಡಬೇಕು. 

ಈ ರೈಲು ಮಾರ್ಗದಲ್ಲಿ ಪರ್ವತಗಳು, ಜಲಪಾತ, ಬೆಟ್ಟ-ಗುಡ್ಡಗಳು, ಹಸಿರು ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. 

ಇನ್‌ಸ್ಟಾಗ್ರಾಮ್‌ನಲ್ಲಿ ಕೊಹ್ಲಿಯನ್ನು ಫಾಲೋ ಮಾಡುವ ಖ್ಯಾತ ಕ್ರೀಡಾಪಟುಗಳಿವರು