ರಾಹುಲ್‌ಗಾಂಧಿಯಿಂದ ಹೇಮಮಾಲಿನಿವರೆಗೆ, ಭಾರತದ ಕೆಲವು ಪ್ರಸಿದ್ಧ ರಾಜಕಾರಣಿಗಳು ಶ್ವಾನ ಪ್ರಿಯರು. ಅವರ ನೆಚ್ಚಿನ ನಾಯಿಯ ಬಗ್ಗೆ ನೀವು ತಿಳ್ಕೊಳ್ಳಿ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶ್ವಾನಪ್ರೇಮಿ. ಅವರ ಎರಡು ಸಾಕು ನಾಯಿಗಳು ಸಾಕಷ್ಟು ಜನಪ್ರಿಯವಾಗಿವೆ. ಪಿಡಿ ಗಾಂಧಿ ಮತ್ತು ಯಾಸ್ಸಾ ಎರಡು ಅವರ ನೆಚ್ಚಿನ ನಾಯಿಗಳು.
ನಟಿ, ರಾಜಕಾರಿಣಿ ಹೇಮಾಮಾಲಿನಿ ಕುಟುಂಬದಲ್ಲೂ ಇಬ್ಬರು ವಿಶೇಷವಾದ ಸದಸ್ಯರಿದ್ದಾರೆ. ಸ್ನೂಪಿ ದಾರಿ ತಪ್ಪಿ ಬಂದು ಸೇರಿದ ನಾಯಿಯಾದ್ರೆ, ಇನ್ನೊಂದು ನಾಯಿ ಹೆಸರು ಜಿಪ್ಸಿ.
ಬಿಜೆಪಿ ರಾಜಕಾರಿಣಿ ಹಾಗೂ ಕರ್ನಾಟಕದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅಪ್ಪಟ ಶ್ವಾನಪ್ರೇಮಿ. 2021ರಲ್ಲಿ ಅವರು ತಮ್ಮ ಪ್ರೀತಿ ಸಾಕು ನಾಯಿ ಸನ್ನಿ ಕಳೆದುಕೊಂಡಾಗ ಕಣ್ಣೀರು ಸುರಿಸಿದ್ದು, ಅದರ ಅಂತ್ಯಸಂಸ್ಕಾರ ಮಾಡಿದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಭಾರತದ ರಾಜಕಾರಣಿ, ಮಹರಾಷ್ಟ್ರ ನವನಿರ್ಮಾಣ ಸೇನೆಯ ಸಂಸ್ಥಾಪಕಾಧ್ಯಕ್ಷ ರಾಜ್ ಠಾಕ್ರೆ ಮೂರು ಗ್ರೇಟ್ ಡೇನ್‌ಗಳನ್ನು ಹೊಂದಿದ್ದಾರೆ. ಜೇಮ್ಸ್, ಬಾಂಡ್ ಮತ್ತು ಶಾನ್ ಆ ನಾಯಿಗಳ ಹೆಸರು.
ಒಡಿಶಾ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಕೂಡ ಬ್ರನೋ ರಾಕ್ಸಿ ಎಂಬ ಎರಡು ನಾಯಿಗಳ ಮಾಲೀಕರಾಗಿದ್ದಾರೆ.
ಬಿಜೆಪಿ ನಾಯಕಿ ಸ್ಮೃತಿ ಇರಾನಿ ಕೂಡ ನಾಯಿಪ್ರೇಮಿ, ಇವರ ಪ್ರೀತಿಯ ನಾಯಿಯ ಹೆಸರು ಶೋರು.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರಾಣಿಪ್ರೇಮಿ. ಅವರು ಪ್ರಾಣಿಗಳ ಕಲ್ಯಾಣಕ್ಕಾಗಿ ಟ್ರಸ್ಟ್ ನಡೆಸುತ್ತಿದ್ದಾರೆ. ಅವರು ಕಾಳು ಎಂಬ ಸಾಕು ನಾಯಿಯನ್ನು ಹೊಂದಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಕೂಡ ಶ್ವಾನಪ್ರೇಮಿ. ಅವರ ನಾಯಿ ಹೆಸರು ಮಿಲೋ.
ಪುಷ್ಪ 2 ಸಿನಿಮಾದ ಕಿಸ್ಸಿಕ್ ಹಾಡಿಗೆ 2 ಕೋಟಿ ಸಂಭಾವನೆ ಪಡೆದ್ರ ಶ್ರೀಲೀಲಾ