ಎಂದೂ ಪಂಕ್ಚರ್ ಆಗದ ರೈಲು ಚಕ್ರಕ್ಕೂ ಇದೆ ಆಯಸ್ಸು 

By Jayaraj
May 06, 2024

Hindustan Times
Kannada

ರೈಲು ಪ್ರಯಾಣ ಭಾರತೀಯರ ಬದುಕಿನ ಭಾಗವೇ ಆಗಿದೆ. ಪ್ರತಿನಿತ್ಯ ಲಕ್ಷಾಂತರ ಜನರು ದೇಶಾದ್ಯಂತ ರೈಲಿನಲ್ಲಿ ಸಂಚರಿಸುತ್ತಾರೆ.

ರೈಲಿನ ಚಕ್ರಗಳು ಪಂಕ್ಚರ್‌ ಆಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಂತಾ ರೈಲು ಚಕ್ರಗಳನ್ನು ಬದಲಾಯಿಸುವುದೇ ಇಲ್ಲ ಎಂದಲ್ಲ. 

ಹಾಗಿದ್ದರೆ, ರೈಲಿನ ಚಕ್ರಗಳನ್ನು ಎಷ್ಟು ಸಮಯದ ನಂತರ ಬದಲಾಯಿಸಲಾಗುತ್ತದೆ? ಅದರ ಪರಿಶೀಲನೆ ಮಾಡುವುದು ಯಾವಾಗ ಎಂಬುದನ್ನು ನೋಡೋಣ.

ಬಸ್ಸು, ಕಾರು, ವಿಮಾನ ಸೇರಿದಂತೆ ಎಲ್ಲಾ ವಾಹನಗಳಿಗೂ ರಬ್ಬರ್ ಚಕ್ರಗಳನ್ನು ಜೋಡಿಸಲಾಗಿರುತ್ತದೆ. ಚಕ್ರವು ಪಂಕ್ಚರ್ ಅಥವಾ ಹಾನಿಗೊಳಗಾದಾಗ ಅವುಗಳನ್ನು ಬದಲಾಯಿಸಲಾಗುತ್ತದೆ.

ಆದರೆ ರೈಲಿನ ಚಕ್ರಗಳು ಕಬ್ಬಿಣದ್ದು. ಅದು ಹಾನಿಯಾಗುವುದಿಲ್ಲವೇ? ಕಬ್ಬಿಣದ ಚಕ್ರಗಳ ಆಯಸ್ಸು ಎಷ್ಟು ಎಂಬ ಪ್ರಶ್ನೆಗಳು ನಿಮ್ಮಲ್ಲಿರಬಹುದು.

ಭಾರತೀಯ ರೈಲ್ವೆ ಇಲಾಖೆಯು ಕಾಲಕಾಲಕ್ಕೆ ರೈಲುಗಳ ನಿರ್ವಹಣೆ ಮಾಡುತ್ತಿರುತ್ತದೆ. ಆಗಾಗ ಹಾನಿಗೊಳಗಾದ  ಕೋಚ್‌ ಭಾಗಗಳನ್ನು ಸರಿಪಡಿಸಲಾಗುತ್ತದೆ.

ರೈಲುಗಳ ನಿರ್ವಹಣೆಗೆ ಸಂಬಂಧಿಸಿದ ಪ್ರತಿ ಕೆಲಸವನ್ನೂ ಕೋಚ್ ಯಾರ್ಡ್‌ನಲ್ಲಿ ಮಾಡಲಾಗುತ್ತದೆ. ಆದರೆ ರೈಲಿನ ಚಕ್ರ ಬದಲಾಯಿಸಬೇಕಾದರೆ ಡಿಪೋಗೆ ಶಿಫ್ಟ್‌ ಮಾಡುತ್ತಾರೆ.

ರೈಲಿನ ಚಕ್ರಗಳನ್ನು 2 ರೀತಿಯಲ್ಲಿ ಬದಲಾಯಿಸಲಾಗುತ್ತದೆ. ಚಕ್ರ ಬದಲಾವಣೆಗಳನ್ನು ಮೊದಲು ಅನ್ಕಪ್ಲಿಂಗ್ ಮೂಲಕ ಮತ್ತು ಎರಡನೆಯದಾಗಿ ಬೋಗಿ ಡ್ರಾಪ್ ಟೇಬಲ್ ಸಹಾಯದಿಂದ ಮಾಡಲಾಗುತ್ತದೆ.

ಕಬ್ಬಿಣದ ಚಕ್ರ ಬದಲಾಯಿಸುವುದು ಸುಲಭದ ಕೆಲಸವೇನಲ್ಲ. ಇದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ.

ಪ್ಯಾಸೆಂಜರ್‌ ರೈಲುಗಳಿಗೆ ವಿವಿಧ ರೀತಿಯ ಚಕ್ರ ಅಳವಡಿಸಲಾಗುತ್ತದೆ. ಅದರ ತೂಕ 230ರಿಂದ 680 ಕೆಜಿ ವರೆಗೆ ಇರುತ್ತದೆ. ಇದೇ ವೇಳೆ ಗೂಡ್ಸ್ ರೈಲಿನ ಚಕ್ರಗಳು ಸುಮಾರು 900 ಕೆಜಿ ತೂಗುತ್ತವೆ.

ಪ್ರಯಾಣಿಕ ರೈಲಿನ ಚಕ್ರದ ಜೀವಿತಾವಧಿ ಸುಮಾರು 3ರಿಂದ 4 ವರ್ಷಗಳು. ಆ ಚಕ್ರವು 70 ಸಾವಿರ ಮೈಲುಗಳಿಂದ 1 ಲಕ್ಷ ಮೈಲುಗಳವರೆಗೆ ಓಡಿದ ನಂತರ  ಚಕ್ರಗಳನ್ನು ಬದಲಾಯಿಸಲಾಗುತ್ತದೆ.

ಇದೇ ವೇಳೆ ಗೂಡ್ಸ್ ರೈಲಿನ ಚಕ್ರದ ಜೀವಿತಾವಧಿ 8ರಿಂದ 10 ವರ್ಷಗಳು. ಆ ಬಳಿಕ ಅವುಗಳನ್ನು ಕೂಡಾ ಬದಲಾಯಿಸಲಾಗುತ್ತದೆ.

ಬದಲಾವಣೆ ಕೆಲವು ವರ್ಷಗಳ ಬಳಿಕ ಮಾಡಿದರೂ, ಚಕ್ರಗಳನ್ನು ಪ್ರತಿ ತಿಂಗಳು ಪರಿಶೀಲಿಸಲಾಗುತ್ತದೆ. ಏನಾದರೂ ಸಮಸ್ಯೆ ಕಂಡುಬಂದರೆ ಆಗ ಬದಲಾವಣೆ ಮಾಡಲಾಗುತ್ತದೆ.

ರೈಲು ಚಕ್ರದ ಫ್ಯಾಕ್ಟರಿ ನಮ್ಮ ಕರ್ನಾಟಕದಲ್ಲಿಯೇ ಇದೆ. ರಾಜಧಾನಿ ಬೆಂಗಳೂರಿನ ಯಲಹಂಕದಲ್ಲಿ ಫ್ಯಾಕ್ಟ್ರಿ ಇದೆ.

ಆರ್‌ಸಿಬಿ ಮ್ಯಾಚ್‌ ನೋಡಲು ಬೆಂಗಳೂರಿಗೆ ಬಂದ್ರ? ಚಿನ್ನಸ್ವಾಮಿ ಸ್ಟೇಡಿಯಂಗೆ ಹತ್ತಿರದ ಈ ಮಾಲ್‌ಗಳನ್ನೂ ನೋಡಿ