ಬೆಂಗಳೂರು- ಕುಕ್ಕೆ ಸುಬ್ರಹ್ಮಣ್ಯ ರೈಲು ದಾರಿಯಲ್ಲಿ ಎಷ್ಟು ಗುಹೆ, ಸೇತುವೆಗಳಿವೆ?
wiki
By Praveen Chandra B
Sep 13, 2024
Hindustan Times
Kannada
ಬೆಂಗಳೂರು-ಮಂಗಳೂರು ಹಗಲು ರೈಲು ಪ್ರಯಾಣ ಮಾಡಿದವರಿಗೆ ವಿಶೇಷ ಅನುಭವ ಖಾತ್ರಿ. ಸಾಕಷ್ಟು ಗುಹೆಗಳು, ರೈಲ್ವೆ ಸೇತುವೆಗಳ ಮೇಲಿನ ಪ್ರಯಾಣದ ಆನಂದ ದೊರಕುತ್ತದೆ.
ಸಕಲೇಶಪುರದಿಂದ ಕುಕ್ಕೆಸುಬ್ರಹ್ಮಣ್ಯ ರೈಲು ಹಾದಿಯು ಸುಮಾರು 52 ಕಿ.ಮೀ. ಹೊಂದಿದೆ.
ಇದು ಸುಮಾರು 57 ಟನಲ್‌ಗಳು (ಗುಹೆಗಳು) ಮತ್ತು 109 ಸೇತುವೆಗಳನ್ನು ಹೊಂದಿದೆ.
ಕೆಲವು ಗುಹೆಗಳು ಕೆಲವು ಮೀಟರ್ ಇದ್ದರೆ ಇನ್ನು ಕೆಲವು 200 ಮೀಟರ್ ಉದ್ದವೂ ಇದೆ. ಕೆಲವು ಸೇತುವೆಗಳು 0.75 ಕಿ.ಮೀ. ಉದ್ದವೂ ಇದೆ.
ಈ ರೈಲ್ವೆ ಹಾದಿಗೆ ಗ್ರೀನ್ ರೂಟ್ ಎಂದು ಕರೆಯಲಾಗುತ್ತದೆ. ಈ ಹಾದಿಯಲ್ಲಿ ಪಶ್ಚಿಮ ಘಟ್ಟದ ಸುಂದರವಾದ ಬೆಟ್ಟಗುಡ್ಡಗಳನ್ನು ಕಣ್ತುಂಬಿಕೊಳ್ಳಬಹುದು.
ಬೆಂಗಳೂರು-ಮಂಗಳೂರು ಹಗಲು ರೈಲಿನಲ್ಲಿ ಪ್ರಯಾಣಿಸಿದರೆ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
ಭಾರತೀಯ ರೈಲ್ವೆಯ ಈ ಗ್ರೀನ್ ರೂಟ್‌ನಲ್ಲಿ ಸುಮಾರು 25 ಜಲಪಾತಗಳೂ ಇವೆ.
ಭಾರತೀಯ ರೈಲ್ವೆಯ ಈ ಗ್ರೀನ್ ರೂಟ್‌ನಲ್ಲಿ ಸುಮಾರು 25 ಜಲಪಾತಗಳೂ ಇವೆ.
ರೈಲು ಪ್ರಯಾಣ ಆನಂದಿಸುವವರು ಬೆಂಗಳೂರು-ಮಂಗಳೂರು ರೈಲು ಪ್ರಯಾಣ ಇಷ್ಟಪಡದೆ ಇರಲಾರರು. ವಿಸ್ಟಾಡೋಮ್ ಕೋಚ್ ಸಿಕ್ಕರಂತೂ ಇಲ್ಲಿನ ಪ್ರಯಾಣ ಇನ್ನೂ ಅದ್ಭುತವಾಗಿರುತ್ತದೆ.
ಜೈಪುರ ಪಿಂಕ್ ಪ್ಯಾಂಥರ್ಸ್ಗೆ ನೂತನ ನಾಯಕ ಘೋಷಣೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ