ಭಾರತದ ಸಮೋಸಾ ವೆರೈಟಿ ಹೀಗಿದೆ ನೋಡಿ

Pexel

By Umesh Kumar S
Mar 13, 2025

Hindustan Times
Kannada

ವೆಜ್ ಸಮೋಸಾ

ಇದು ಕ್ಲಾಸಿಕ್ ಸಮೋಸಾ. ಆಲೂಗಡ್ಡೆ, ಬಟಾಣಿ ಹಾಗೂ ಇತರೆ ತರಕಾರಿ ಮಸಾಲೆಗಳನ್ನು ಒಳಗೊಂಡ ಸ್ಟಫಿಂಗ್ ಹೊಂದಿದ್ದು, ಬಿಸಿಬಿಸಿಯಾಗಿ ತಿನ್ನೋದಕ್ಕೆ ಖುಷಿ ಕೊಡುತ್ತೆ.

Pixabay

ವೆಜ್ ಸಮೋಸಾ ವೆರೈಟಿ

ಈರುಳ್ಳಿ ಸಮೋಸಾ, ಮಿಕ್ಸೆಡ್ ವೆಜ್ ಸಮೋಸಾ, ಖೋಯಾ ಸಮೋಸಾ, ಮಶ್ರೂಮ್ ಸಮೋಸಾ, ಚಾಕೊಲೇಟ್ ಸಮೋಸಾ, ಹರಾ ಮಟರ್ ಸಮೋಸಾ, ಗೋಬಿ ಸಮೋಸಾ ಹೀಗೆ ಹಲವು ವೆರೈಟಿಗಳಿವೆ.

Pixabay

ನಾನ್‌ ವೆಜ್ ಸಮೋಸಾ ವೆರೈಟಿ

ಕೀಮಾ ಸಮೋಸಾ ಹೊರತಾಗಿ, ಚಿಕನ್ ಸಮೋಸಾ, ಫಿಶ್‌ ಸಮೋಸಾ, ಎಗ್ ಸಮೋಸಾ ಇತ್ಯಾದಿ

Pixabay

ಪನೀರ್ ಸಮೋಸಾ

ಸಮೋಸಾ ಸ್ಟಫಿಂಗ್‌ ಮಾಡುವಾಗ ಮಸಾಲೆ ಜತೆಗೆ ಪನೀರ್ ಬಳಸಲಾಗುತ್ತದೆ. ಇದು ಸಮೋಸಾಕ್ಕೆ ಹೊಸ ರುಚಿ ಮತ್ತು ಸ್ವಾದವನ್ನು ನೀಡುತ್ತದೆ.

Pixabay

ಪಂಜಾಬಿ ಸಮೋಸಾ

ಹೆಸರೇ ಹೇಳುವಂತೆ ಪಂಜಾಬಿಗಳು ಇಷ್ಟಪಡುವ ಸಮೋಸಾ. ಬೆಣ್ಣೆ ಅಥವಾ ತುಪ್ಪ ಬಳಸಿ ಸಮೋಸಾ ಕರಿಯುವ ಕಾರಣ, ಇದು ಹೆಚ್ಚು ಸುವಾಸನೆಯಿಂದ ಕೂಡಿರುತ್ತದೆ. ರುಚಿಕರವೂ ಆಗಿರುತ್ತದೆ.

Pixabay

ಗೋವಾನ್ ಸಮೋಸಾ (ಚಮುಕಾಸ್)

ಗೋವಾ, ಪೋರ್ಚುಗಲ್‌, ಅಂಗೋಲಾದಲ್ಲಿ ಸಮೋಸಾಗಳನ್ನು ಚಮುಕಾಸ್ ಎನ್ನುತ್ತಾರೆ. ಸಮೋಸಾ ಸ್ಟಫಿಂಗ್‌ ಆಗಿ ಚಿಕನ್‌, ಬೀಫ್, ಪೋರ್ಕ್‌, ಕುರಿಮಾಂಸವನ್ನು ವೆಜ್ ಸ್ಟಫಿಂಗ್ ಬದಲಿಗೆ ಬಳಸುತ್ತಾರೆ.

Pixabay

ಗೋವಾ ಶಿಂಗಾಸ್‌

ಪೂರ್ವ ಭಾರತದಲ್ಲಿ ಲಭ್ಯವಿರುವ ಸಮೋಸಾದ ಮಾದರಿ ಇದು. ಗೋವಾದಲ್ಲಿ ಹೆಚ್ಚು ಜನಪ್ರಿಯವಾಗಿರುವ ಶಿಂಗಾಸ್‌ಗೆ ಸ್ಟಫಿಂಗ್ ಆಗಿ ಆಲೂಗಡ್ಡೆ ಹೂರಣವಿರುತ್ತದೆ.

Pixabay

ಸಿಂಗರಸ್ ಅಥವಾ ಶಿಂಗ್ರಾಸ್‌

ಪೂರ್ವ ಭಾರತದಲ್ಲಿ ಲಭ್ಯವಿರುವ ಸಮೋಸಾದ ಮಾದರಿ ಇದು. ಗೋವಾದಲ್ಲಿ ಹೆಚ್ಚು ಜನಪ್ರಿಯವಾಗಿರುವ ಶಿಂಗಾಸ್‌ಗೆ ಸ್ಟಫಿಂಗ್ ಆಗಿ ಆಲೂಗಡ್ಡೆ ಹೂರಣವಿರುತ್ತದೆ.

Pixabay

 ಹೈದರಾಬಾದ್ ಸಮೋಸಾ ಲುಕ್ಮಿ

ಹೈದರಾಬಾದ್‌ನಲ್ಲಿ ಲಭ್ಯವಿರುವ ಸಮೋಸಾ ಚೌಕಾಕಾರದಲ್ಲಿದ್ದು, ಸ್ಟಫಿಂಗ್ ಆಗಿ ಮಸಾಲೆ ಮಾಂಸವನ್ನು ತುಂಬಿರುತ್ತಾರೆ. ಇದಲ್ಲದೆ ಈರುಳ್ಳಿ ಸ್ಟಫಿಂಗ್ ಇರುವ ಲುಕ್ಮಿ ಕೂಡ ಲಭ್ಯವಿದೆ.

Pixabay

ಕೀಮಾ ಸಮೋಸಾ

ಇದು ಮಾಂಸಾಹಾರಿಗಳಿಗೆ ಹೆಚ್ಚು ಪ್ರಿಯವಾದುದು. ವಿಶೇಷವಾಗಿ ಭೋಪಾಲ್‌ನಂತಹ ಪ್ರದೇಶಗಳಲ್ಲಿ, ಮಸಾಲೆ ಹಾಕಿದ ಕೊಚ್ಚಿದ ಮಾಂಸವನ್ನು (ಕೀಮಾ) ಸಮೋಸಾ ಸ್ಟಫಿಂಗ್‌ ಆಗಿ ಬಳಸಿರುತ್ತಾರೆ.

Pixabay

ಅಮೃತಧಾರೆ ಸೀರಿಯಲ್ ಮಲ್ಲಿ ಸ್ಥಾನಕ್ಕೆ ಬಂದ ಅನ್ವಿತಾ ಸಾಗರ್‌ ಎಲ್ಲಿವರು, ಓದಿದ್ದೇನು?