ಗೋಲ್ಡನ್ ಬ್ಯಾಟ್ ಗೆದ್ದ ಭಾರತದ ಆಟಗಾರರು
By Prasanna Kumar P N
Nov 22, 2023
Hindustan Times
Kannada
ಏಕದಿನ ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರನಿಗೆ ಗೋಲ್ಡನ್ ಬ್ಯಾಟ್ ಪ್ರಶಸ್ತಿ ನೀಡಲಾಗುತ್ತದೆ.
13 ಏಕದಿನ ವಿಶ್ವಕಪ್ ಆವೃತ್ತಿಗಳಲ್ಲಿ ಭಾರತದ ಪರ ನಾಲ್ವರು ಬ್ಯಾಟರ್ಸ್ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಏಕದಿನ ವಿಶ್ವಕಪ್‌ನಲ್ಲಿ ಮೊದಲು ಗೋಲ್ಡನ್ ಬ್ಯಾಟ್ ಗೆದ್ದ ಆಟಗಾರ ಸಚಿನ್ ತೆಂಡೂಲ್ಕರ್.
1996 ಮತ್ತು 2003ರ ವಿಶ್ವಕಪ್‌ನಲ್ಲಿ ಎರಡು ಬಾರಿ ಗೋಲ್ಡನ್ ಬ್ಯಾಟ್ ಗೆದ್ದಿದ್ದಾರೆ. ಎರಡು ಬಾರಿ ಗೋಲ್ಡನ್ ಬ್ಯಾಟ್ ಗೆದ್ದಭಾರತದ ಮೊದಲ ಆಟಗಾರ.
1996ರ ವಿಶ್ವಕಪ್‌ನಲ್ಲಿ 523 ರನ್, 2003ರ ವಿಶ್ವಕಪ್ ಟೂರ್ನಿಯಲ್ಲಿ 673 ರನ್ ಗಳಿಸಿದ್ದರು.
ರಾಹುಲ್ ದ್ರಾವಿಡ್, ಭಾರತದ ಪರ ಗೋಲ್ಡನ್ ಬ್ಯಾಟ್ ಗೆದ್ದ ಎರಡನೇ ಆಟಗಾರ. ಅವರು 1999ರ ವಿಶ್ವಕಪ್ ಟೂರ್ನಿಯಲ್ಲಿ 461 ರನ್ ಗಳಿಸಿ ಈ ಬಹುಮಾನ ದಕ್ಕಿಸಿಕೊಂಡಿದ್ದರು.
ರೋಹಿತ್ ಶರ್ಮಾ ಟೀಮ್ ಇಂಡಿಯಾ ಪರ ಗೋಲ್ಡನ್ ಬ್ಯಾಟ್ ಗೆದ್ದ ಮೂರನೇ ಆಟಗಾರ. ಹಿಟ್ ಮ್ಯಾನ್ 2019ರಲ್ಲಿ 648 ರನ್ ಸಿಡಿಸಿ ಈ ಪ್ರಶಸ್ತಿ ಗೆದ್ದುಕೊಂಡರು.
ಮೆನ್ ಇನ್ ಬ್ಲೂ ಪರ ಈ ಪ್ರಶಸ್ತಿ ಗೆದ್ದ ನಾಲ್ಕನೇ ಆಟಗಾರನಾಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ. ಈ ವಿಶ್ವಕಪ್‌ನಲ್ಲಿ 765 ರನ್ ಸಿಡಿಸಿದರು.
ಪುಷ್ಪ 2 ಸಿನಿಮಾದ ಕಿಸ್ಸಿಕ್ ಹಾಡಿಗೆ 2 ಕೋಟಿ ಸಂಭಾವನೆ ಪಡೆದ್ರ ಶ್ರೀಲೀಲಾ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ