ಇದು ಬಣ್ಣ ಬದಲಾಯಿಸುವ ಹಾವು, ನಾಗರ ಹಾವಿಗಿಂತ ಹೆಚ್ಚು ವಿಷಕಾರಿ

By Raghavendra M Y
Jul 07, 2024

Hindustan Times
Kannada

ಭೂಮಿಯ ಮೇಲಿರುವ ವಿಷಕಾರಿ ಜೀವಿಗಳಲ್ಲಿ ಒಂದಾದ ಹಾವನ್ನು ನೋಡಿದರೆ ಬಹುತೇಕರು ಭಯಭೀಳುತ್ತಾರೆ. ನ್ಯಾಷನಲ್ ಜಿಯೊಗ್ರಾಫಿಕ್ ಪ್ರಕಾರ, ಪ್ರಪಂಚದಾದ್ಯಂತ 3 ಸಾವಿರಕ್ಕೂ ಹೆಚ್ಚು ಜಾತಿಯ ಹಾವುಗಳಿವೆ

ಸಾವಿರಾರು ಜಾತಿಯ ಹಾವುಗಳು ಇದ್ದರೂ ಸುಮಾರು 600 ಜಾತಿಯ ಹಾವುಗಳು ಮಾತ್ರ ವಿಷಕಾರಿ. ಕೆಲವು ತುಂಬಾ ವಿಷಕಾರಿಯಾಗಿದ್ದು, ಕ್ಷಣದಲ್ಲಿ ಕೊಲ್ಲುವ ವಿಷವನ್ನು ಹೊಂದಿವೆ

ಊಸರವಳ್ಳಿಯ ಬಣ್ಣ ಬದಲಾವಣೆಯ ಬಗ್ಗೆ ಸಾಕಷ್ಟು ಕೇಳಿರುತ್ತೀರಿ. ಆದರೆ ಬಣ್ಣ ಬದಲಾಯಿಸುವ ಹಾವಿನ ಬಗ್ಗೆ ಸಾಕಷ್ಟು ಮಂದಿ ಕೇಳಿರುವುದಿಲ್ಲ

ಭೂಮಿಯ ಮೇಲೆ ಕೇವಲ 1 ಜಾತಿಯ ಹಾವು ತನ್ನ ಬಣ್ಣವನ್ನು ಬದಲಾಯಿಸುತ್ತದೆ. ಈ ನಿರ್ದಿಷ್ಟ ಜಾತಿಯ ಹಾವು ನಾಗರಹಾವುಗಿಂತ ಹೆಚ್ಚು ವಿಷಕಾರಿಯಾಗಿದೆ

ಬಣ್ಣ ಬದಲಾಯಿಸುವ ಅತ್ಯಂತ ವಿಷಯಕಾರಿ ಹಾವು ಇನ್‌ಲ್ಯಾಂಡ್ ತೈಪಾನ್. ವೈಜ್ಞಾನಿಕ ಭಾಷೆಯಲ್ಲಿ ಇದನ್ನು Oxyuranus microlepidotus ಎಂದು ಕರೆಯಲಾಗುತ್ತದೆ

ಇನ್‌ಲ್ಯಾಂಡ್ ತೈಪಾನ್ ಹಾವು ಮಧ್ಯಮ ಗಾತ್ರಕ್ಕಿಂತ ಸ್ವಲ್ಪ ದೊಡ್ಡದಾಗಿರುತ್ತೆ. ಈ ಹಾವು ತನ್ನ ಬಣ್ಣವನ್ನ ತಿಳಿ ಕಂದು ಬಣ್ಣದಿಂದ ಗಾಢ ಕಂದು, ಹಸಿರು ಹಾಗೂ ಹಳದಿ ಬಣ್ಣಕ್ಕೆ ಬದಲಾಯಿಸಿಕೊಳ್ಳುತ್ತೆ

ಇನ್‌ಲ್ಯಾಂಡ್ ತೈಪಾನ್ ಹಾವಿನ ಬಣ್ಣ ಋತುವಿನ ಪ್ರಕಾರ ಬದಲಾಗುತ್ತದೆ. ಈ ಹಾವು ಚಳಿಗಾಲದಲ್ಲಿ ಗಾಢ ಬಣ್ಣ ಮತ್ತು ಬೇಸಿಗೆಯಲ್ಲಿ ಹಗುರವಾಗಿರುತ್ತದೆ

ಇನ್‌ಲ್ಯಾಂಡ್ ತೈಪಾನ್ ಹಾವು LD50 ವರ್ಗದ ವಿಷವನ್ನು ಉತ್ಪಾದಿಸುತ್ತದೆ. LD50 ಎಂಬುದು ಒಂದು ನಿರ್ದಿಷ್ಟ ಅವಧಿಯೊಳಗೆ 100 ಜನರನ್ನು ಕೊಲ್ಲಲು ಸಾಕಾಗುವ ವಿಷಕಾರಿ ಅಂಶ

ಇನ್‌ಲ್ಯಾಂಡ್ ತೈಪಾನ್ ಹಾವುಗಳು  ಮುಂಜಾನೆ ಹೆಚ್ಚು ಸಕ್ರಿಯವಾಗಿರುತ್ತವೆ. ಈ ಸಮಯದಲ್ಲಿ ಅವು ಸೂರ್ಯನ ಮೈಯೊಡ್ಡುವುದು, ಆಹಾರವನ್ನು ಹುಡುಕುತ್ತಾ ಸಮಯವನ್ನು ಕಳೆಯುತ್ತವೆ

ಇನ್‌ಲ್ಯಾಂಡ್ ತೈಪಾನ್ ಹಾವುಗಳು ಅತ್ಯಂತ ವೇಗವಾಗಿ ಮತ್ತು ಚುರುಕುಬುದ್ದಿಯೆಂದು ಪರಿಗಣಿಸಲಾಗಿದೆ. ಇದು ತನ್ನ ಬೇಟೆಯ ಮೇಲೆ ಬಹಳ ನಿಖರವಾಗಿ ದಾಳಿ ಮಡಾುತ್ತದೆ. ಈ ಹಾವು ತುಂಬಾ ಅಪಾಯಕಾರಿ

ಕಪಲ್ ಕಿಸ್ ಮಾಡುವಾಗ ಯಾಕೆ ಕಣ್ಣುಗಳನ್ನು ಮುಚ್ಚುತ್ತಾರೆ?