ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರೋದ್ಯಾಕೆ; ಹೀಗಿದೆ ಕಾರಣ
By Reshma Nov 05, 2024
Hindustan Times Kannada
ಅಡುಗೆಗೆ ಬಳಸುವ ಪ್ರಮುಖ ವಸ್ತುಗಳಲ್ಲಿ ಈರುಳ್ಳಿ ಕೂಡ ಒಂದು. ಇದು ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯಕ್ಕೂ ಉತ್ತಮ
ಸಾಂಬಾರ್, ಸಾರು, ಸಲಾಡ್‌ನಂತಹ ಖಾದ್ಯಗಳ ರುಚಿ ಹೆಚ್ಚಿಸಲು ಈರುಳ್ಳಿ ಬಳಸಲಾಗುತ್ತದೆ
ರುಚಿ ನೀಡುವ ಈರುಳ್ಳಿ ಕಣ್ಣೀರು ಬರಿಸುತ್ತೆ. ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವ ಜೊತೆಗೆ ಕಣ್ಣು ಉರಿ ಶುರುವಾಗುತ್ತದೆ. ಹಾಗಾದರೆ ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರೋದ್ಯಾಕೆ?
ಈರುಳ್ಳಿಯಲ್ಲಿ ಸಿನ್ ಪ್ರೊಪನೆಥಿಯಲ್ ಎಸ್ ಆಕ್ಸೈಡ್ ಎಂದು ಸಂಯುಕ್ತವಿರುತ್ತದೆ
ಈರುಳ್ಳಿ ಕತ್ತರಿಸಿದಾಗ ಇದರಲ್ಲಿರುವ ಈ ರಾಸಾಯನಿಕವು ಕಣ್ಣುಗಳ ಲ್ಯಾಕ್ರಿಮಲ್ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಕಣ್ಣೀರು ಬರುತ್ತದೆ
ಸಂಶೋಧನೆಯ ಪ್ರಕಾರ ಈರುಳ್ಳಿಯಲ್ಲಿರುವ ಲ್ಯಾಕ್ರಿಮೇಟರಿ– ಫ್ಯಾಕ್ಟರ್–ಸಿಂಥೆಸ್ ಕಿಣ್ವ ಈರುಳ್ಳಿ ಕತ್ತರಿಸುವಾಗ ಕಣ್ಣೀರಿಗೆ ಕಾರಣವಾಗಿದೆ
ಈರುಳ್ಳಿ ಸಿಪ್ಪೆ ಸುಲಿದಾಗ ಅಥವಾ ಕತ್ತರಿಸಿದಾಗ ಈ ಕಿಣ್ವವು ಗಾಳಿಯೊಂದಿಗೆ ಸಂಪರ್ಕಕ್ಕೆ ಬರುತ್ತದೆ ಮತ್ತು ಅದು ಸಲ್ಫೆನಿಕ್ ಆಮ್ಲವಾಗಿ ಪರಿವರ್ತನೆಗೊಳ್ಳುತ್ತದೆ
ಸಲ್ಫೆನಿಕ್ ಆಮ್ಲವು ಕಣ್ಣುಗಳ ಲ್ಯಾಕ್ರಿಮಲ್ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಕಣ್ಣೀರು ಬರುತ್ತದೆ
ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುತ್ತೆ ಎನ್ನುವ ಕಾರಣಕ್ಕೆ ಈರುಳ್ಳಿ ಬಳಸದೇ ಇರುವುದು ಸರಿಯಲ್ಲ. ಇದರಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನಿಶಿಯಂ, ಮಿಟಮಿನ್ ಬಿ 6 ನಂತಹ ಹಲವು ಪೋಷಕಾಂಶಗಳು ಕಂಡುಬರುತ್ತವೆ