ಭೂಮಿಯ ಮೇಲಿರುವ ವಿಷಕಾರಿ ಪ್ರಾಣಿಗಳಲ್ಲಿ ಹಾವು ಕೂಡ ಒಂದು. ಸಾಮಾನ್ಯವಾಗಿ ಹಾವು ಎಂದಾಕ್ಷಣ ಜನರು ಭಯಗೊಳ್ಳುತ್ತಾರೆ.
ಭಾರತದಲ್ಲಿ ಹಲವು ಜಾತಿಯ ಹಾವುಗಳು ಕಂಡುಬರುತ್ತವೆ. ಆದರೂ ಅವುಗಳಲ್ಲಿ ಕೆಲವು ಮಾತ್ರ ವಿಷಕಾರಿಯಾಗಿವೆ.
ಭಾರತದಲ್ಲಿ ಒಂದೇ ಒಂದು ಹಾವಿಲ್ಲದ ಪ್ರದೇಶವೊಂದಿದೆ ಎಂದರೆ ನಿಮಗೆ ಖಂಡಿತ ಆಶ್ಚರ್ಯವಾಗುತ್ತೆ, ಆದ್ರೆ ಇದು ಖಂಡಿತ ನಿಜ. ಹಾಗಾದ್ರೆ ಆ ಸ್ಥಳ ಯಾವುದು ನೋಡಿ.
ಇದು ಭಾರತದ ಕೇಂದ್ರಾಡಳಿತ ಪ್ರದೇಶದವಾದ ಲಕ್ಷದ್ವೀಪ. ಹೌದು 36 ಸಣ್ಣ ಸಣ್ಣ ದ್ವೀಪಗಳಿಂದ ಕೂಡಿರುವ ಲಕ್ಷದ್ವೀಪ ಹಾವುಗಳೇ ಇರದ ಏಕೈಕ ಪ್ರದೇಶವಾಗಿದೆ.
ಲಕ್ಷದ್ವೀಪದ ಒಟ್ಟು ಜನಸಂಖ್ಯೆ ಸುಮಾರು 64,000 ಮಾತ್ರ. ಈ ಪ್ರದೇಶದಲ್ಲಿ ಹೆಚ್ಚಿನ ಜನರು ಮುಸ್ಲಿಮರು. ಶೇ 4ರಷ್ಟು ಮಾತ್ರ ಹಿಂದುಗಳಿದ್ದಾರೆ. ಒಂದಿಷ್ಟು ಮಂದಿ ಬೌದ್ಧರು ಹಾಗೂ ಇತರ ಧರ್ಮದವರಿದ್ದಾರೆ.
ಲಕ್ಷದ್ವೀಪದಲ್ಲಿ ಹಾವು ಮಾತ್ರವಲ್ಲ ಇಲ್ಲಿ ಒಂದೇ ಒಂದು ನಾಯಿ ಕೂಡ ಇಲ್ಲ. ಈ ಕೇಂದ್ರಾಡಳಿತ ಪ್ರದೇಶವು ಹಾವು ಹಾಗೂ ನಾಯಿಮುಕ್ತವಾಗಿದೆ.
ಲಕ್ಷದ್ವೀಪಕ್ಕೆ ಬರುವ ಪ್ರವಾಸಿಗರು ತಮ್ಮೊಂದಿಗೆ ನಾಯಿಗಳನ್ನು ತರಲು ಕೂಡ ಅನುಮತಿ ಇಲ್ಲ. ಕಾಗೆಯಂತಹ ಪಕ್ಷಿಗಳು ಇಲ್ಲಿ ಹೇರಳವಾಗಿ ಕಂಡುಬರುವುದಿಲ್ಲ.
ಮಾಹಿತಿಯ ಪ್ರಕಾರ ಲಕ್ಷದ್ವೀಪದಲ್ಲಿ 36 ದ್ವೀಪಗಳಿದ್ದರೂ ಆ ಪೈಕಿ 10 ದ್ವೀಪಗಳಲ್ಲಿ ಮಾತ್ರ ಜನರು ವಾಸಿಸುತ್ತಿದ್ದಾರೆ.
ಸಿರೇನಿಯಾ ಅಥವಾ ಸಮುದ್ರ ಹಸು ಲಕ್ಷದ್ವೀಪದಲ್ಲಿ ಕಂಡುಬರುತ್ತದೆ. ಅದಾಗ್ಯೂ ಈ ಪ್ರಾಣಿ ಅಳಿವಿನಂಚಿನಲ್ಲಿದೆ.
ಲಕ್ಷದ್ವೀಪವು ಹಾವುಗಳೇ ಇಲ್ಲದೇ ಪ್ರದೇಶವಾಗಿದ್ದರೆ, ಕೇರಳವು ಭಾರತದಲ್ಲಿ ಗರಿಷ್ಠ ಹಾವಿನ ಸಂಖ್ಯೆ ಇರುವ ರಾಜ್ಯವಾಗಿದೆ.
Kitchen Tips: ಈ 7 ಟ್ರಿಕ್ಸ್ ಫಾಲೊ ಮಾಡಿದ್ರೆ ಫ್ರಿಜ್‌ನಿಂದ ಎಂದಿಗೂ ಕೆಟ್ಟ ವಾಸನೆ ಬರಲ್ಲ