ಭಾರತದಲ್ಲಿ ಕಂಡುಬರುವ 8 ಅತ್ಯಂತ ವಿಷಕಾರಿ ಹಾವುಗಳಿವು 

By Reshma
Nov 01, 2024

Hindustan Times
Kannada

ಭಾರತದಲ್ಲಿ ಹಲವು ಬಗೆಯ ಹಾವುಗಳಿದ್ದು ಎಲ್ಲಾ ಹಾವುಗಳು ವಿಷಕಾರಿಯಲ್ಲ. ಆದರೆ ಕೆಲವು ಹಾವುಗಳ ಅತ್ಯಂತ ಅಪಾಕಾರಿ ಹಾಗೂ ವಿಷಕಾರಿಯಾಗಿವೆ 

ಭಾರತದಲ್ಲಿ ಕಂಡುಬರುವ 8 ವಿಷಕಾರಿ ಹಾವುಗಳ ಪಟ್ಟಿ ಇಲ್ಲಿದೆ 

ಕಿಂಗ್ ಕೋಬ್ರಾ: ಕಿಂಗ್ ಕೋಬ್ರಾ ವಿಶ್ವದ ಅತಿ ಉದ್ದದ ವಿಷಕಾರಿ ಹಾವು. ಇದು ನೆಲದಿಂದ 2 ಮೀಟರ ಎತ್ತರಕ್ಕೆ ತನ್ನ ತಲೆಯನ್ನು ಏರಿಸಬಲ್ಲುದು 

ಇಂಡಿಯನ್ ಕ್ರೈಟ್‌: ಇದನ್ನು ಕಾಮನ್ ಕ್ರೈಟ್‌ ಎಂದೂ ಕೂಡ ಕರೆಯುತ್ತಾರೆ. ಈ ಕೈಟ್‌ನ ವಿಷವು ವಿವಿಧ ನ್ಯೋರೊಟಾಕ್ಸಿನ್‌ಗಳನ್ನು ಹೊಂದಿರುತ್ತದೆ. ಈ ಹಾವು ಕಚ್ಚುವುದರಿಂದ ಜೀವಕ್ಕೆ ಅಪಾಯ ಖಚಿತ 

ರಸೆಲ್ಸ್ ವೈಪರ್ ಭಾರತದಲ್ಲಿ ಅತಿ ಹೆಚ್ಚು ಜನರನ್ನು ಕೊಂದಿರುವ ಖ್ಯಾತಿ ಇದಕ್ಕಿದೆ. ಈ ವಿಷಕಾರಿ ಹಾವು ದಾಳಿ ಮಾಡುವುದಕ್ಕಿಂತ ಮೊದಲು ದೊಡ್ಡ ಶಬ್ದ ಮಾಡುತ್ತದೆ 

ಸಾ ಸ್ಕೇಲ್ಡ್‌ ವೈಪರ್ಸ್‌ ಕೂಡ ವಿಷಕಾರಿ ಹಾವುಗಳಲ್ಲಿ ಒಂದು. ಇದು ಮರಳು ಪ್ರದೇಶ, ಬಂಡೆಗಳ ಸಂಧಿ, ಪೊದೆ ಸಸ್ಯಗಳಲ್ಲಿ ಕಂಡುಬರುತ್ತದೆ 

ನಾಗರಹಾವು ಭಾರತದಲ್ಲಿ ಕಂಡುಬರುವ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದು 

ರಾಕ್ ವೈಪರ್ ಕೂಡ ಭಾರತದಲ್ಲಿ ಕಂಡುಬರುವ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದು. ಇದು ನೈಋತ್ಯ ಭಾರತದಲ್ಲಿ ಹೆಚ್ಚು ಕಂಡುಬರುತ್ತದೆ 

ಕ್ರೈಟ್ ಹಾವುಗಳಲ್ಲೇ ದೊಡ್ಡ ಜಾತಿ ಹಾವು ಬ್ಯಾಂಡೆಡ್‌ ಕ್ರೈಟ್‌. ಇದು ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಅತಿ ಅತ್ಯಂತ ವಿಷಕಾರಿ ಹಾವು

ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಗುಡ್ಡಗಾಡು ಪ್ರದೇಶಗಳಲ್ಲಿ ಕಂಡುಬರುವ  ಬ್ಯಾಂಬೂ ವೈಫರ್ ಹಾವು. ಇದು ಕೂಡ ಅತ್ಯಂತ ವಿಷಕಾರಿ ಹಾವು. ಇದು ಹಸಿರು ಬಣ್ಣದ ಹಾವು  

ಯುವರಾಜ್ ಸಿಂಗ್ ಹುಟ್ಟುಹಬ್ಬ; ಕ್ರಿಕೆಟ್ ದಾಖಲೆ-ನಿವ್ವಳ ಮೌಲ್ಯ