30ರ ನಂತರ ಮಹಿಳೆಯರ ಅಂದ-ಆರೋಗ್ಯ ಕಾಳಜಿಗೆ  ಟಿಪ್ಸ್

By Meghana B
Mar 02, 2024

Hindustan Times
Kannada

ಎಷ್ಟೇ ಕೆಲಸ ಇದ್ರೂ ಪ್ರತಿದಿನ 7 ರಿಂದ 8 ಗಂಟೆ ನಿದ್ದೆ ಮಾಡಲೇಬೇಕು

ಪ್ರತಿದಿನ 3 ಲೀಟರ್​ ನೀರು ಕುಡಿಯಬೇಕು. ನಿದ್ದೆ ಮತ್ತು ನೀರು ಮುಖ ಸುಕ್ಕುಗಟ್ಟಿದಂತೆ ತಡೆಯುವಲ್ಲಿ ಹೆಚ್ಚು ಪಾತ್ರ ವಹಿಸುತ್ತದೆ.

ಕಬ್ಬಿಣಾಂಶ, ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಡಿ, ವಿಟಮಿನ್ ಬಿ ಸೇರಿದಂತೆ ಪೋಷಕಾಂಶಯುಕ್ತ ಆಹಾರ ಸೇವಿಸಿ

ಎಷ್ಟೇ ಸುಸ್ತಾಗಿದ್ರೂ ತ್ವಚೆಯ ಆರೈಕೆ ಬಿಡಬೇಡಿ. ಕ್ಲೆನ್ಸರ್‌, ಮಾಯಿಶ್ಚರೈಸರ್‌, ಸನ್‌ಸ್ಕ್ರೀನ್‌ ಹೀಗೆ ಅಗತ್ಯವಿರುವ ಉತ್ಪನ್ನ ಬಳಸಿ. ಫೇಸ್​ಪ್ಯಾಕ್​, ಫೇಸ್​ ಮಸಾಜ್​ ಬಿಡಬೇಡಿ. 

ಹೊಸತನ್ನು ಕಲಿಯುತ್ತಿರಿ, ನಿಮಗಿಷ್ಟವಾದ ಕೆಲಸ ಮಾಡಿ, ಇಷ್ಟವಾದ ಸಂಗೀತ ಕೇಳಿ. ಧ್ಯಾನ ಮಾಡಿ. ಇದು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ

ಪ್ರತಿದಿನ ಯೋಗ, ವಾಕಿಂಗ್​, ಜಿಮ್​ ವರ್ಕೌಟ್​, ಜಾಗಿಂಗ್​, ಈಜು ಹೀಗೆ ಯಾವುದಾದರೂ ವ್ಯಾಯಾಮಗಳನ್ನು ಮಾಡಿ ಫಿಟ್​ನೆಸ್​ ಕಾಪಾಡಿಕೊಳ್ಳಿ

ಮನೆಯಲ್ಲಿ ಹೆಚ್ಚು ಕೆಲಸವಿಲ್ಲದವರು ಕುಳಿತು ತಿನ್ನುತ್ತಾ ಬೊಜ್ಜು ಬರಿಸಿಕೊಳ್ಳಬೇಡಿ. ದೈಹಿಕ ಚಟುವಟಿಕೆ ಇರಲಿ. 

ಆಗಾಗ್ಗ ಕೊಲೆಸ್ಟ್ರಾಲ್‌, ಬಿಪಿ, ಶುಗರ್, ದಂತ-ಕಣ್ಣಿನ ಟೆಸ್ಟ್ ಮಾಡಿಸಿಕೊಳ್ಳುತ್ತಿರಬೇಕು

3 ವರ್ಷಗಳಿಗೊಮ್ಮೆಯಾದರೂ HPV ನಂತಹ ಕ್ಯಾನ್ಸರ್ ಸ್ಕ್ರೀನಿಂಗ್ ಪರೀಕ್ಷೆ ಮತ್ತು ಹೃದಯ ಸಂಬಂಧಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು

ಆರ್ಥಿಕ ಬಿಕ್ಕಟ್ಟಿನಿಂದ ಪಾಕಿಸ್ತಾನದ ಜನ ಕಂಗಾಲು, ದಿನಬಳಕೆ ವಸ್ತುಗಳ ದರ ಗಗನಕ್ಕೇರಿದೆ