ಮಗು ಜನಿಸಿದ ಬಳಿಕ ದಪ್ಪ ಆಗದೇ ಇರಲು ಸಲಹೆಗಳು 

By Meghana B
Mar 03, 2024

Hindustan Times
Kannada

ದಪ್ಪ ಆಗ್ತೀವಿ ಅನ್ನೋ ಚಿಂತೆಯಲ್ಲಿ 8 ವಾರಗಳ ಒಳಗೆ ವ್ಯಾಯಾಮ ಮಾಡಬೇಡಿ. ಬಾಣಂತನದ ಅವಧಿಯಲ್ಲಿ ಬಾಣಂತಿಗೆ ವಿಶ್ರಾಂತಿಯ ಅಗತ್ಯ ಇರುತ್ತದೆ. 

ದಪ್ಪ ಆಗ್ತೀವಿ ಅನ್ನೋ ಚಿಂತೆಯಲ್ಲಿ 8 ವಾರಗಳ ಒಳಗೆ ವ್ಯಾಯಾಮ ಮಾಡಬೇಡಿ. ಬಾಣಂತನದ ಅವಧಿಯಲ್ಲಿ ಬಾಣಂತಿಗೆ ವಿಶ್ರಾಂತಿಯ ಅಗತ್ಯ ಇರುತ್ತದೆ. 

ತೂಕ ಇಳಿಸಿಕೊಳ್ಳಬೇಕೆಂಬ ಭರದಲ್ಲಿ ಒಂದೇ ಬಾರಿಗೆ ಹೆವಿ ವ್ಯಾಯಾಮ ಮಾಡಬೇಡಿ. ತೂಕ ನಷ್ಟ ಪ್ರಕ್ರಿಯೆ ನಿಧಾನವಿರಲಿ. ವಾಕಿಂಗ್​​ನಿಂದ ವ್ಯಾಯಾಮ ಆರಂಭಿಸಿ.

ರಾತ್ರಿ ಸಾಕಷ್ಟು ನಿದ್ದೆ ಮಾಡಬೇಕು. 2 ತಿಂಗಳ ಬಳಿಕ ಹಗಲಿನ ವೇಳೆ ಮಲಗಿಕೊಂಡೇ ಇರುವ ಬದಲು ಓಡಾಡುತ್ತಿರಬೇಕು. ಸಣ್ಣಪುಟ್ಟ ಕೆಲಸಗಳನ್ನು ಮಾಡಿ. 

ತೆಳ್ಳ ಆಗಬೇಕು ಅಂತ ಊಟ ಕಡಿಮೆ ಮಾಡಿದರೆ ಅದು ನಿಮ್ಮ ಮೇಲೆ ಮಾತ್ರವಲ್ಲ ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಹಣ್ಣು, ತರಕಾರಿ, ಡ್ರೈ ಫ್ರೂಟ್ಸ್, ಕಾಳು ಸೇರಿದಂತೆ ಪೋಷಕಾಂಶಯುಕ್ತ ಸಮತೋಲಿತ ಆಹಾರ ನಿಮ್ಮ ಊಟದ ಪ್ಲೇಟ್​​ನಲ್ಲಿರಲಿ.

ಫ್ರೀ ಆಗಿ ಕುಳಿತಿದ್ದೇನೆಂದು ಸಿಕ್ಕಸಿಕ್ಕದ್ದನ್ನು ತಿನ್ನಬೇಡಿ. ಸಕ್ಕರೆ ಅಂಶ ಕಡಿಮೆ ಇರುವ ಆಹಾರ ಸೇವಿಸಿ. 

ದಿನಕ್ಕೆ 3 ಲೀಟರ್​ ನೀರು ಕುಡಿಯ ಬೇಕು. ಇದು ಜೀರ್ಣಕ್ರಿಯೆ ಸರಿಯಾಗಿ ಆಗಲು ಹಾಗೂ ದೇಹ ಹೈಡ್ರೇಟೆಡ್ ಆಗಿರಲು ಉಪಯುಕ್ತ. 

ಆನೆಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಪಾರಂಪರಿಕ ಪ್ರಾಣಿ ಎನ್ನುವ ಗೌರವವನ್ನು 2010ರಲ್ಲಿಯೇ ಭಾರತ ಸರ್ಕಾರ ನೀಡಿದೆ