ಐಪಿಎಲ್ 2025 ಮೆಗಾ ಹರಾಜಿಗೆ ಯಾವ ದೇಶದಿಂದ ಎಷ್ಟು ಆಟಗಾರರು?

By Jayaraj
Nov 06, 2024

Hindustan Times
Kannada

ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಗೆ ದಿನಾಂಕ ನಿಗದಿಯಾಗಿದೆ. ನವೆಂಬರ್ 24-25ರಂದು ಆಕ್ಷನ್‌ ನಡೆಯಲಿದೆ.

ಒಟ್ಟು 1,574 ಆಟಗಾರರು ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 409 ವಿದೇಶಿ ಆಟಗಾರರು. 

ಹಾಗಿದ್ದರೆ ಯಾವ ದೇಶದಿಂದ ಎಷ್ಟು ಆಟಗಾರರು ಹರಾಜಿಗೆ ಹೆಸರು ನೋಂದಾಯಿಸಿದ್ದಾರೆ ಎಂದು ನೋಡೋಣ. 

ದಕ್ಷಿಣ ಆಫ್ರಿಕಾದಿಂದ ಗರಿಷ್ಠ ಆಟಗಾರರು ಹೆಸರು ರಿಜಿಸ್ಟರ್ ಮಾಡಿದ್ದಾರೆ. ಸೌತ್‌ ಆಫ್ರಿಕಾದ 91 ಆಟಗಾರರು ಐಪಿಎಲ್ ಆಡಲು ಉತ್ಸುಕರಾಗಿದ್ದಾರೆ.

ಆಸ್ಟ್ರೇಲಿಯಾದಿಂದ 76 ಆಟಗಾರರು ಹರಾಜಿಗೆ ನಿಂತಿದ್ದಾರೆ.

ಇಂಗ್ಲೆಂಡ್‌ನ 52 ಆಟಗಾರರು ಆಕ್ಷನ್‌ಗೆ ಬರಲಿದ್ದಾರೆ.

ನ್ಯೂಜಿಲೆಂಡ್‌ನ 39 ಆಟಗಾರರು ಹಾಗೂ ಶ್ರೀಲಂಕಾದ 29 ಆಟಗಾರರು ಇದ್ದಾರೆ.

ಅಫ್ಘಾನಿಸ್ತಾನದ 29 ಆಟಗಾರರು ಹಾಗೂ ವೆಸ್ಟ್ ಇಂಡೀಸ್‌ನ 33 ಆಟಗಾರರು ಆಕ್ಷನ್‌ಗೆ  ಬರಲಿದ್ದಾರೆ.

ಬಾಂಗ್ಲಾದೇಶದ 13, ಐರ್ಲೆಂಡ್‌ನ 9, ಜಿಂಬಾಬ್ವೆಯ 8, ನೆದರ್ಲೆಂಡ್ಸ್‌ನ 12 ಆಟಗಾರರು ಆಸಕ್ತಿ ತೋರಿದ್ದಾರೆ.

ಕೆನಡಾದ 4, ಇಟಲಿಯ ಒಬ್ಬರು, ಸ್ಕಾಟ್ಲೆಂಡ್‌ನ 2, ಯುಎಸ್‌ಎ 10 ಹಾಗೂ ಯುಎಇ ಒಬ್ಬರು ಹರಾಜಿಗೆ ಹೆಸರು ಕೊಟ್ಟಿದ್ದಾರೆ.

ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್‌ ಕಠಾರಿ