ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ನೂತನ ನಾಯಕ ಘೋಷಣೆ
By Prasanna Kumar P N
Oct 13, 2024
Hindustan Times
Kannada
ಪ್ರೊ ಕಬಡ್ಡಿ ಲೀಗ್ನಲ್ಲಿ ಯಶಸ್ವಿ ತಂಡಗಳಲ್ಲಿ ಒಂದಾದ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ನೂತನ ನಾಯಕನನ್ನು ಘೋಷಿಸಲಾಗಿದೆ.
ಜೈಪುರ ಪಿಂಕ್ ಪ್ಯಾಂಥರ್ಸ್ ಅನುಭವಿ ರೈಡರ್ ಅರ್ಜುನ್ ದೇಶ್ವಾಲ್ ಅವರನ್ನು ನಾಯಕನನ್ನಾಗಿ ನೇಮಿಸಿದೆ.
ಅಕ್ಟೋಬರ್ 18ರಂದು ಹೈದರಾಬಾದ್‌ನಲ್ಲಿ ಪ್ರಾರಂಭವಾಗುವ ಪಿಕೆಎಲ್ 11ನೇ ಸೀಸನ್‌ಗೂ ಮುನ್ನ ಘೋಷಣೆ ಹೊರಡಿಸಿದೆ.
ಕಳೆದ ಸೀಸನ್ನಲ್ಲಿ ಜೈಪುರ ತಂಡಕ್ಕೆ ಸುನಿಲ್ ಮಲಿಕ್ ಅವರು ನಾಯಕನಾಗಿದ್ದರು.
2018ರಲ್ಲಿ ಯು ಮುಂಬಾ ಪರ ಪಿಕೆಎಲ್ ಪದಾರ್ಪಣೆ ಮಾಡಿದ ದೇಶ್ವಾಲ್, 2019ರ ಸೀಸನ್ನಲ್ಲೂ ಅದೇ ತಂಡದ ಪರ ಆಡಿದ್ದರು.
2021ರ ಆವೃತ್ತಿಯಲ್ಲಿ ಪ್ಯಾಂಥರ್ಸ್‌ಗೆ ಸೇರಿದ ನಂತರ ಅರ್ಜುನ್ ಹೆಚ್ಚು ಜನಪ್ರಿಯತೆ ಗಳಿಸಿದರು. ಇಲ್ಲಿ 267 ರೇಡ್ ಅಂಕ ಪಡೆದಿದ್ದರು.
2022ರಲ್ಲಿ ಜೈಪುರ ಪರ 296 ರೇಡ್ ಪಾಯಿಂಟ್ಗಳನ್ನು ಗಳಿಸಿದ ಅವರು ತಮ್ಮ ತಂಡ ಪ್ರಶಸ್ತಿ ಗೆಲ್ಲಲು ನೆರವಾದರು.
ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ