ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲು ವೇಳಾಪಟ್ಟಿ, ಟಿಕೆಟ್ ದರ ಹೀಗಿದೆ

By Raghavendra M Y
Mar 11, 2024

Hindustan Times
Kannada

ಮಾರ್ಚ್ 12 ರಂದು ಕಲಬುರಗಿ-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸೇವೆ ಆರಂಭ

ಕಲಬುರಗಿ ರೈಲ್ವೆ ನಿಲ್ದಾಣದಿಂದ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ವರೆಗೆ ವಾರದ 6 ದಿನ ಸಂಚಾರ

ಕಲಬುರಗಿಯಲ್ಲಿ ಬೆಳಗ್ಗೆ 5.15ಕ್ಕೆ ಹೊರಡಲಿರುವ ವಂದೇ ಭಾರತ್ ರೈಲು ಮಧ್ಯಾಹ್ನ 2 ಗಂಟೆಗೆ ಬೆಂಗಳೂರು ತಲುಪಲಿದೆ

ಬೈಯ್ಯಪ್ಪನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಮ 2.40ಕ್ಕೆ ಹೊರಟು ರೈಲು ರಾತ್ರಿ 11.30ಕ್ಕೆ ಕಲಬುರಗಿ ನಿಲ್ದಾಣ ತಲುಪಲಿದೆ

ಕಲಬುರಗಿಯಿಂದ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ ಮಾರ್ಗದಲ್ಲಿ ಒಟ್ಟು 7 ಕಡೆ ವಂದೇ ಭಾರತ್ ರೈಲು ನಿಲುಗಡೆ

ಕಲಬುರಗಿಯಿಂದ ಬೆಳಗ್ಗೆ 5.15ಕ್ಕೆ ಹೊರಟರೆ 5.40ಕ್ಕೆ ವಾಡಿ. ರಾಯಚೂರಿಗೆ 6.53, ಮಂತ್ರಲಾಯಂ ರೂಡ್ ನಿಲ್ದಾಣಕ್ಕೆ 7.08, ಗುಂತಕಲ್‌ಗೆ 8.25ಕ್ಕೆ ಆಗಮಿಸಲಿದೆ

ಕಲಬುರಗಿಯಿಂದ ಬರುವ ವಂದೇ ಭಾರತ್ ರೈಲು ಬೆಳಗ್ಗೆ 9.28ಕ್ಕೆ ಅನಂತಪುರಂ, 10.50ಕ್ಕೆ ಧರ್ಮಾವರಂ, 12.45ಕ್ಕೆ ಯಲಹಂಕ, ಬೈಯ್ಯಪ್ಪನಹಳ್ಳಿಗೆ ಮ 2 ಕ್ಕೆ ಆಗಮಿಸುತ್ತೆ

ಪ್ರಧಾನಿ ಮೋದಿ ಮಾರ್ಚ್ 12 ರಂದು ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ. ಟಿಕೆಟ್ ದರ 1500 ರೂ ಆಸುಪಾಸಿನಲ್ಲಿ ಇರಲಿದೆ

ಆನೆಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಪಾರಂಪರಿಕ ಪ್ರಾಣಿ ಎನ್ನುವ ಗೌರವವನ್ನು 2010ರಲ್ಲಿಯೇ ಭಾರತ ಸರ್ಕಾರ ನೀಡಿದೆ