ತಿಳಿ ಹಸಿರು ವರ್ಣದ ಸೀರೆಯಲ್ಲಿ ಕಂಡ ಭವ್ಯಾ ಗೌಡಗೆ ದೇವತೆ ಪಟ್ಟ ಕೊಟ್ಟ ಫ್ಯಾನ್ಸ್‌

By Manjunath B Kotagunasi
Mar 09, 2025

Hindustan Times
Kannada

ಕನ್ನಡ ಕಿರುತೆರೆಯಲ್ಲಿ ಗೀತಾ ಸೀರಿಯಲ್‌ ಮೂಲಕ ಮನೆಮಾತಾದವರು ನಟಿ ಭವ್ಯಾ ಗೌಡ

ಆ ಸೀರಿಯಲ್‌ನಿಂದಲೇ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ಕ್ಕೂ ಸ್ಪರ್ಧಿಯಾಗಿ ಆಗಮಿಸಿದ್ದರು ಭವ್ಯಾ

ಬಿಗ್‌ ಬಾಸ್‌ ಮನೆಯಲ್ಲಿ ಇದ್ದಷ್ಟು ದಿನವೂ ಲವಲವಿಕೆಯಿಂದಲೇ ವೀಕ್ಷಕರ ಮನ ಗೆದ್ದಿದ್ದರು.

ಬಿಗ್‌ ಬಾಸ್‌ ಮುಗಿದ ಬಳಿಕ ಒಂದಷ್ಟು ಮಂದಿ ಹೊಸ ಹೊಸ ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾದರು.

ಆದರೆ, ಭವ್ಯಾ ಮಾತ್ರ ಈ ವರೆಗೂ ಯಾವುದೇ ಸೀರಿಯಲ್‌ ಆಗಲಿ, ಸಿನಿಮಾ ಒಪ್ಪಿಕೊಂಡಿಲ್ಲ 

ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಿರುವ ಭವ್ಯಾ ಇದೀಗ ಹೊಸ ಲುಕ್‌ ಜತೆ ಆಗಮಿಸಿದ್ದಾರೆ

ತಿಳಿ ಹಸಿರು ವರ್ಣದ ಸೀರೆಯ ಜತೆಗೆ ಎಂಟ್ರಿಕೊಟ್ಟಿರುವ ಭವ್ಯಾಗೆ ಬಗೆಬಗೆ ಕಾಮೆಂಟ್‌ಗಳೂ ಸಂದಾಯವಾಗ್ತಿವೆ

ಒಂದಷ್ಟು ಮಂದಿ ದೇವತೆ ಎಂದು ವರ್ಣಿಸಿದರೆ, ಇನ್ನು ಕೆಲವರು ಕ್ವೀನ್‌ ಎಂದು ಬಣ್ಣಿಸುತ್ತಿದ್ದಾರೆ.

ಸೀರಿಯಲ್‌ ಅಥವಾ ಸಿನಿಮಾ.. ನಿಮ್ಮ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಅಪ್‌ಡೇಟ್‌ ಬರಲಿ ಎಂದೂ ಕಾಮೆಂಟ್‌ ಮಾಡಿದ್ದಾರೆ.

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS