ಆಸೆ ಸೀರಿಯಲ್‌ನಿಂದ ಪ್ರಮುಖ ಪಾತ್ರಧಾರಿಯೇ ಔಟ್‌? ಹೊಸಬರ ಎಂಟ್ರಿ

By Manjunath B Kotagunasi
Apr 16, 2025

Hindustan Times
Kannada

ಸ್ಟಾರ್‌ ಸುವರ್ಣದ ಫೇಮಸ್‌ ಸೀರಿಯಲ್‌ಗಳಲ್ಲಿ ಆಸೆ ಧಾರಾವಾಹಿ ಸಹ ಒಂದು

ಟಿಆರ್‌ಪಿ ವಿಚಾರದಲ್ಲಿಯೂ ಸ್ಟಾರ್ ಸುವರ್ಣದ ಟಾಪ್‌ ರೇಟಿಂಗ್‌ ಧಾರಾವಾಹಿಯಲ್ಲಿ ಇದೂ ಒಂದು

ಇದೀಗ ಇದೇ ʻಆಸೆʼ ಸೀರಿಯಲ್‌ನಿಂದ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ.

ʻಆಸೆʼ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಪ್ರಮುಖ ಪಾತ್ರಧಾರಿಯೇ ಸೀರಿಯಲ್‌ನಿಂದ ಆಚೆ ನಡೆದಿದ್ದಾರೆ.

ಸೀರಿಯಲ್‌ಗಳಲ್ಲಿ ಪಾತ್ರಧಾರಿಗಳು ಬದಲಾಗುವುದು ಸಹಜ ಪ್ರಕ್ರಿಯೆ. ಈಗ ʻಆಸೆʼಯಲ್ಲಿಯೂ ಬದಲಾವಣೆಯಾಗಿದೆ. 

ಯಾರವರು? ಬೇರಾರು ಅಲ್ಲ, ನಾಯಕಿ ಮೀನಾ ತಂಗಿ ಕನಕ ಪಾತ್ರ ಇದೀಗ ಬದಲಾಗಿದೆ.

ಆಸೆ ಧಾರಾವಾಹಿಯಲ್ಲಿ ಕನಕ ಪಾತ್ರದ ಮೂಲಕ ಗಮನ ಸೆಳೆದವರು ನಟಿ ವಿನುತಾ ಗೌಡ

ಜಾಲತಾಣದಲ್ಲಿ ಸಕ್ರಿಯರಿರುವ ವಿನುತಾ ಗೌಡ ʻಆಸೆʼ ಧಾರಾವಾಹಿಯಿಂದ ಹಿಂದೆ ಸರಿದಿದ್ದಾರೆ. 

ಇದೀಗ ವಿನುತಾ ಗೌಡ ಅವರ ಬದಲಿಗೆ ಹೊಸ ನಟಿಯ ಆಗಮನವಾಗಿದೆ. 

Horoscope: ಮಕ್ಕಳು ಪ್ರಗತಿ ಹೊಂದುತ್ತಾರೆ; ಏಪ್ರಿಲ್ 20ರ ಭಾನುವಾರ ದಿನ ಭವಿಷ್ಯ