ಕನ್ನಡದ ನಂಬರ್‌ 1 ಧಾರಾವಾಹಿಯಲ್ಲಿ ನಟಿಸ್ತಿದ್ದಾಳೆ ಈ ಪುಟಾಣಿ, ಯಾರಿರಬಹುದು ಗೆಸ್‌ ಮಾಡಿ

By Manjunath B Kotagunasi
Mar 24, 2025

Hindustan Times
Kannada

ಜೀ ಕನ್ನಡದಲ್ಲಿ ಇತ್ತೀಚೆಗಷ್ಟೇ ಶುರುವಾಗಿದೆ ನಾ ನಿನ್ನ ಬಿಡಲಾರೆ ಅನ್ನೋ ಹೊಸ ಸೀರಿಯಲ್‌. 

ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿ ಹಿತಾ ಪಾತ್ರದಲ್ಲಿ ನಟಿಸಿರೋ ಪುಟಾಣಿಯೇ ಈ ಮಹಿತಾ

ಚಿಕ್ಕಂದಿನಿಂದಲೇ ನಟನೆಯಲ್ಲಿ ಗುರುತಿಸಿಕೊಂಡು, ಬಾಲನಟಿಯಾಗಿ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದಾಳೆ ಮಹಿತಾ

ಕಲರ್ಸ್‌ ಕನ್ನಡದ ನನ್ನಮ್ಮ ಸೂಪರ್​​ ಸ್ಟಾರ್​​, ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾಳೆ.

ಅದಷ್ಟೇ ಅಲ್ಲ ಕಲರ್ಸ್‌ ಕನ್ನಡದ ಚುಕ್ಕಿತಾರೆ ಸೀರಿಯಲ್ಲಿಯೂ ನಟಿಸಿ ವೀಕ್ಷಕರ ಮನಗೆದ್ದಿದ್ದಳು

ಈಗ ಇದೇ ಬಾಲನಟಿ, ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿ ಹಿತಾ ಪಾತ್ರದ ಮೂಲಕವೇ ಫೇಮಸ್‌

ಕನ್ನಡ ಧಾರಾವಾಹಿಗಳ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ ನಾ ನಿನ್ನ ಬಿಡಲಾರೆ ನಂಬರ್‌ 1 ಸ್ಥಾನದಲ್ಲಿದೆ. 

ಇದೇ ಸೀರಿಯಲ್‌ನಲ್ಲಿ ಅಂಬಿಕಾ ಮತ್ತು ಶರತ್‌ ದಂಪತಿಯ ಮಗಳಾಗಿ ಮಹಿತಾ ನಟಿಸುತ್ತಿದ್ದಾಳೆ. 

ನಟನೆ ಮಾತ್ರವಲ್ಲದೆ, ಹಾಡುಗಾರಿಕೆಯಲ್ಲಿಯ ಮಹಿತಾ ಮುಂದಿದ್ದಾಳೆ. ಇತ್ತೀಚೆಗಷ್ಟೇ ಶೀರ್ಷಿಕೆ ಗೀತೆಯನ್ನೂ ಹಾಡಿ ಗಮನ ಸೆಳೆದಿದ್ದಳು

ಇನ್‌ಸ್ಟಾಗ್ರಾಮ್‌ನಲ್ಲಿ ಆರ್‌ಸಿಬಿ ಮತ್ತೊಂದು ದಾಖಲೆ