ಭಾರತದ ಕ್ಯೂಟ್‌ ಐಎಎಸ್ ಜೋಡಿ ಇದು; ಒಬ್ಬರು ಕರ್ನಾಟಕದವರು 

By Jayaraj
Feb 05, 2025

Hindustan Times
Kannada

ಭಾರತದಲ್ಲಿ ಭಾರಿ ಚರ್ಚೆಗೊಳಗಾದ ಐಎಎಸ್ ಅಧಿಕಾರಿಗಳಲ್ಲಿ ಸೃಷ್ಟಿ ದೇಶಮುಖ್ ಕೂಡಾ ಒಬ್ಬರು.

ಸೃಷ್ಟಿ ಅವರ ಪತಿಯ ಹೆಸರು ನಾಗಾರ್ಜುನ ಬಿ ಗೌಡ

ಸೃಷ್ಟಿ ಮೂಲತಃ ಮಧ್ಯಪ್ರದೇಶದ ಭೋಪಾಲ್‌ನವರು. ಅವರ ಪತಿ ನಾಗಾರ್ಜುನ ನಮ್ಮ ಕರ್ನಾಟಕದವರು.

ನಾಗಾರ್ಜುನ ಮತ್ತು ಸೃಷ್ಟಿ ಇಬ್ಬರೂ 2019ರ ಬ್ಯಾಚ್‌ನ ಐಎಎಸ್ ಅಧಿಕಾರಿಗಳು. ಈ ದಂಪತಿ 2018ರಲ್ಲಿ ಯುಪಿಎಸ್‌ಸಿ ಸಿಎಸ್ಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

ಈ ಮುದ್ದಾದ ಜೋಡಿ 2022ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು

LBSNAAನಲ್ಲಿ ತರಬೇತಿ ಪಡೆಯುವಾಗ ಈ ಜೋಡಿ ಮೊದಲ ಬಾರಿಗೆ ಭೇಟಿಯಾದರು.

ಮೊದಲ ಭೇಟಿಯಲ್ಲೇ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರು. ಇದಾದ ನಂತರ ಮಾತುಕತೆ ಆರಂಭವಾಗಿದೆ.

ದಿನ ಕಳೆದಂತೆ ಇಬ್ಬರೂ ಆಪ್ತರಾದರು. ಕ್ರಮೇಣ ಈ ಸ್ನೇಹ ಪ್ರೀತಿಗೆ ತಿರುಗಿತು.

ಒಬ್ಬರನ್ನೊಬ್ಬರು ಪರಸ್ಪರ ಅರ್ಥಮಾಡಿಕೊಂಡು ದೀರ್ಘಕಾಲ ಡೇಟಿಂಗ್ ಮಾಡಿದ ನಂತರ, ಈ ಜೋಡಿ ಮದುವೆಯಾಗಲು ನಿರ್ಧರಿಸಿದರು.

ಸೃಷ್ಟಿ ದೇಶಮುಖ್ ತಮ್ಮ ಪತಿಯೊಂದಿಗಿನ ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ.

Social Media

ಅತಿ ಹೆಚ್ಚು ಸಿಕ್ಸರ್​ ಸಿಡಿಸಿದವರು, ರೋಹಿತ್​ 2ನೇ ಸ್ಥಾನಕ್ಕೆ ಜಿಗಿತ!