ಕೊಳೆ, ಜಿಡ್ಡಿನಿಂದ ಕೂಡಿದ ಕಿಚನ್‌ ಚಿಮಣಿ ಸ್ವಚ್ಛಗೊಳಿಸಲು ಇಲ್ಲಿದೆ ಕೆಲವು ಸಿಂಪಲ್‌ ಟ್ರಿಕ್ಸ್‌

By Reshma
Jul 01, 2024

Hindustan Times
Kannada

ಅಡುಗೆಮನೆಯಲ್ಲಿ ಅಡುಗೆ ಮಾಡುವುದು ನಿಜಕ್ಕೂ ಕಷ್ಟದ ಕೆಲಸವಲ್ಲ, ಬದಲಾಗಿ ಅಡುಗೆಮನೆ ಸ್ವಚ್ಛ ಮಾಡುವುದು ಕಷ್ಟದ ಸಂಗತಿ. 

ಅಡುಗೆಮನೆಯಲ್ಲಿ ಸ್ವಚ್ಛತೆ ಕಾಪಾಡದೇ ಇದ್ದರೇ ಕ್ರಿಮಿಕೀಟಗಳು ತುಂಬಿಕೊಳ್ಳುತ್ತವೆ. ಧೂಳು, ಜಿಡ್ಡು ಕೂಡ ಅಡುಗೆಮನೆಯ ಅಂದ ಕೆಡಿಸುತ್ತವೆ. ನಂತರ ಸ್ವಚ್ಛ ಮಾಡುವುದು ನಿಜಕ್ಕೂ ಸವಾಲು ಎನ್ನಿಸುತ್ತದೆ. 

ಇತ್ತೀಚಿನ ಮಾರ್ಡನ್‌ ಅಡುಗೆಮನೆಯಲ್ಲಿ ಚಿಮಣಿ ಇರುವುದು ಸಹಜ. ಅಡುಗೆಮನೆಯಲ್ಲಿ ಉತ್ತಮ ಗಾಳಿ ಹರಡಲು ಚಿಮಣಿ ಬಹಳ ಮುಖ್ಯ. 

ಇಂದು ನಾವು ಅಡುಗೆಮನೆ ಚಿಮಣಿಯನ್ನು ಸುಲಭವಾಗಿ ಸ್ವಚ್ಛಗೊಳಿಸಲು ಕೆಲವು ಸರಳ ಸಲಹೆಗಳನ್ನು ನಿಮಗೆ ತಿಳಿಸುತ್ತೇವೆ. 

ಚಿಮಣಿಗೆ ಕೊಳೆ ಹಿಡಿಯಬಾರದು ಅಂದ್ರೆ ಪ್ರತಿದಿನ ನೀವು ಊಟ ಮಾಡಿ ಪಾತ್ರೆ ತೊಳೆದ ನಂತರ ಒದ್ದೆ ಬಟ್ಟೆಯಿಂದ ಚಿಮಣಿಯನ್ನು ಒರೆಸಿ.

ಚಿಮಣಿಗೆ ಹಿಡಿದ ಕೊಳೆ ತೆಗೆಯಲು ನೀವು ಸೋಡಾ ಪುಡಿಯನ್ನು ಕೂಡ ಬಳಸಬಹುದು. 

ನೀರಿನ ಬಾಟಲಿಯಲ್ಲಿ 1 ಚಮಚ ಅಡಿಗೆ ಸೋಡಾ ಮತ್ತು ನೀರು ಸೇರಿಸಿ. ಬಾಟಲಿಯನ್ನು ಕುಲುಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಚಿಮಣಿಗೆ ಸ್ಪೇ ಮಾಡಿ, ನಂತರ ಬಟ್ಟೆಯಿಂದ ಚೆನ್ನಾಗಿ ಒರೆಸಿ

ಚಿಮಣಿ ಸ್ವಚ್ಛ ಮಾಡಲು ಬಿಸಿ ನೀರನ್ನು ಕೂಡ ಬಳಸಬಹುದು. ಪ್ರತಿದಿನ ಚಿಮಣಿಯನ್ನು ಒರೆಸುವುದರಿಂದ ಅದರಲ್ಲಿ ಕೊಳೆ, ಜಿಡ್ಡು ಸಂಗ್ರಹವಾಗುವುದಿಲ್ಲ. 

ಚಿಮಣಿಯ ಯಾವುದೇ ಭಾಗದಲ್ಲಿ ಜಿಡ್ಡಿನ ಕಲೆಯಾಗಿದ್ದರೆ, ಆ ಜಾಗಕ್ಕೆ ಟೂತ್‌ಪೇಸ್ಟ್‌ ಹಚ್ಚಿ. 5 ರಿಂದ 10 ನಿಮಿಷ ಬಿಡಿ. ನಂತರ ಒದ್ದೆ ಬಟ್ಟೆಯಿಂದ ಒರೆಸಿ. 

ಚಿಮಣಿಯ ಕಲೆ ತೆಗೆಯಲು ಬಹುಪಯೋಗಿ ಕ್ಲೀನರ್‌ ಅನ್ನು ಕೂಡ ಬಳಸಬಹುದು. 

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?