ಮನೆಯಲ್ಲಿ ಇಲಿ ಕಾಟದಿಂದ ಬೇಸತ್ತಿದ್ದೀರಾ, ಹಾಗಿದ್ರೆ ಈ ಟ್ರಿಕ್ಸ್‌ ಅನುಸರಿಸಿ ನೋಡಿ  

Pexels

By Reshma
Apr 10, 2024

Hindustan Times
Kannada

ಇಲಿಗಳು ಒಮ್ಮೆ ಮನೆ ಒಳಗೆ ಸೇರಿದ್ರೆ ಹೊರ ಹೋಗೋದು ಕಷ್ಟ. ಇದಕ್ಕಾಗಿ ಹಲವರು ಇಲಿ ಪಾಷಾಣಗಳನ್ನೂ ಇರಿಸುತ್ತಾರೆ. ಆದರೂ ಅವುಗಳ ಕಾಟದಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ. 

Pexels

ಇಲಿ ಪಾಷಾಣಗಳನ್ನು ಮನೆಯಲ್ಲಿ ಇರಿಸುವುದು ಅಪಾಯ ಕೂಡ. ಆದರೆ ಕೆಲವು ನೈಸರ್ಗಿಕ ವಿಧಾನಗಳಿಂದ ಇಲಿಗಳನ್ನು ಶಾಶ್ವತವಾಗಿ ದೂರ ಓಡಿಸಬಹುದು. ಅಂತಹ ಸುಲಭ ಉಪಾಯಗಳು ಇಲ್ಲಿದೆ. 

Pexels

ಬೆಳ್ಳುಳ್ಳಿ ಗಿಡ: ಇದರ ಕಟುವಾದ ವಾಸನೆಯು ನಿಮ್ಮ ಮನೆಯಿಂದ ಇಲಿಗಳನ್ನು ದೂರವಿಡುತ್ತದೆ. ಮನೆಯ ಒಳಗೆ ಕುಂಡದಲ್ಲಿ ಬೆಳ್ಳುಳ್ಳಿ ಗಿಡ ಬೆಳೆಸಬಹುದು. 

Pexels

ಪುದೀನಾ ಗಿಡ: ಪುದೀನಾ ವಾಸನೆಯಿಂದ ಇಲಿಗಳು ಓಡಿ ಹೋಗುತ್ತವೆ. ಅಂತೆಯೇ ಪುದೀನಾ ಎಲೆಗಳನ್ನು ಎಣ್ಣೆಯಲ್ಲಿ ಕುದಿಸಿ ಅದರಲ್ಲಿ ಹತ್ತಿಯ ಉಂಡೆಯನ್ನು ಅದ್ದಿ ಇಲಿಗಳು ಬರುವ ಜಾಗದಲ್ಲಿ ಇಡುವುದರಿಂದ ಇಲಿಗಳು ದೂರವಾಗುತ್ತವೆ.

Pexels

ನಿಂಬೆ ಹುಲ್ಲು: ಇಲಿಗಳಷ್ಟೇ ಅಲ್ಲ, ಕ್ರಿಮಿಕೀಟಗಳೂ ಇದರ ವಾಸನೆ ನೋಡಿ ಮನೆಯಿಂದ ಓಡಿ ಹೋಗುತ್ತವೆ.

pixa bay

ಈರುಳ್ಳಿ ಗಿಡ: ಈರುಳ್ಳಿ ಗಿಡ ಇಲಿಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಅದೇ ರೀತಿ, ಕತ್ತರಿಸಿದ ಈರುಳ್ಳಿಯ ಬಲವಾದ ವಾಸನೆಯು ಇಲಿಗಳ ಕಣ್ಣುಗಳಿಗೆ ಹಾನಿ ಮಾಡುತ್ತದೆ. ಇಲಿ ಹಸಿರು ಈರುಳ್ಳಿಯನ್ನು ನುಂಗಿದರೆ ಇಲಿಯ ಆರೋಗ್ಯ ಕೆಡುತ್ತದೆ. ಇದರಿಂದ ಇಲಿಗಳ ಹಾವಳಿ ಕಡಿಮೆಯಾಗುತ್ತದೆ.

pixa bay

ರೋಸ್‌ಮೆರಿ: ಈ ಗಿಡದ ಪರಿಮಳವು ಇಲಿಗಳಿಗೆ ಸಹ್ಯವಾಗುವುದಿಲ್ಲ. ಹಾಗಾಗಿ ಇಲಿಗಳನ್ನು ಓಡಿಸಲು ಈ ಗಿಡವನ್ನೂ ನೆಡಬಹುದು. 

Pexels

Horoscope: ಏಪ್ರಿಲ್ 22ರ ಮಂಗಳವಾರ 12 ರಾಶಿಯವರ ಫಲಾಫಲ ಹೀಗಿವೆ