ಹೇಗೆ ಬಳಸಿದ್ರೆ ಫ್ರಿಡ್ಜ್​​ನಲ್ಲಿ ಇಡೋ ಆಹಾರ ಹೆಚ್ಚು ಕಾಲ ಫ್ರೆಶ್ ಇರುತ್ತೆ

By Meghana B
Feb 25, 2024

Hindustan Times
Kannada

ಅಳಿದುಳಿದ ಆಹಾರವನ್ನು ರಂಧ್ರ ಇರದ ಡಬ್ಬಿಯಲ್ಲಿ ಸೋರಿಕೆಯಾಗದಂತೆ ಹಾಕಿ ಫ್ರಿಡ್ಜ್​​ನಲ್ಲಿ ಇಡಿ ಅಥವಾ ಸರಿಯಾಗಿ ಕವರ್​ನಲ್ಲಿ ಸುತ್ತಿಡಿ. 

ತೀರಾ ಬಿಸಿಯಾದ ಆಹಾರವನ್ನು ತಣಿಯಲು ಬಿಟ್ಟು ಆನಂತರ ರೆಫ್ರಿಜರೇಟರ್​ನಲ್ಲಿಡಿ. 

ಹಣ್ಣುಗಳಾಗಿರಲಿ, ತರಕಾರಿಗಳಾಗಿರಲಿ ಎಲ್ಲವನ್ನೂ ಪ್ರತ್ಯೇಕವಾಗಿ ಇರಿಸಿ. ಕತ್ತರಿಸಿದ ಹಣ್ಣು-ತರಕಾರಿಯನ್ನ ತೆರೆದು ಇಡಬೇಡಿ.  

ಕೊಳೆಯಲು ಆರಂಭಿಸಿದ ತರಕಾರಿ, ಹಣ್ಣುಗಳನ್ನು ಮೊದಲು ಫ್ರಿಡ್ಜ್​ನಿಂದ ತೆಗೆದು ಎಸೆಯಿರಿ. ಇದು ಇತರ ಪದಾರ್ಥಗಳ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ. 

ದೀರ್ಘಾವಧಿ ವಿದ್ಯುತ್​ ಕಡಿತವಾದಾಗ 4 ಗಂಟೆಗಳ ಒಳಗಾಗಿ ಫ್ರಿಡ್ಜ್​​ನಲ್ಲಿರುವ ಸಾಧ್ಯವಾದಷ್ಟು ಆಹಾರವನ್ನು  ಬಳಸಿಬಿಡಿ. 

ಯಾವಾಗಲೂ ಫ್ರಿಡ್ಜ್​​ನಲ್ಲಿಟ್ಟ ಹಳೆದ ಪದಾರ್ಥಗಳನ್ನು ಮೊದಲು ಬಳಸಿ. ತಾಜಾ ಇರುವುದನ್ನ ನಂತರ ಬಳಸಿ. 

ಶೋಭಿತಾ ಧೂಳಿಪಾಲ ಬಗ್ಗೆ ಕಾಮೆಂಟ್ ಮಾಡಿದ ನಾಗ ಚೈತನ್ಯ