ಅಡುಗೆ ಮಾಡುವವರಿಗೆ ಈ ಟ್ರಿಕ್ಸ್ ಗೊತ್ತಿದ್ದರೆ ಆಹಾರದ ರುಚಿ ಎಂದಿಗೂ ಕೆಡೊಲ್ಲ 

By Reshma
Sep 16, 2024

Hindustan Times
Kannada

ರುಚಿಯಾಗಿ ಅಡುಗೆ ಮಾಡುವುದು ಒಂದು ಕಲೆ. ಆದರೆ ಅಡುಗೆಯಲ್ಲಿ ನೀವು ಎಷ್ಟೇ ಪರಿಣಿತರಾದರೂ ಕೆಲವೊಂದು ತಪ್ಪುಗಳು ಖಂಡಿತ ಆಗುತ್ತವೆ 

ಅಡುಗೆ ಮಾಡುವಾಗ ಏಕಾಗ್ರತೆಯ ಕೊರತೆ ಅಥವಾ ಆತುರದಿಂದ ಕೆಲವೊಮ್ಮೆ ಉಪ್ಪು ಹೆಚ್ಚಾಗುತ್ತದೆ, ಕೆಲವೊಮ್ಮೆ ಸೀದು ಹೋಗುತ್ತದೆ 

ಅಡುಗೆ ಮಾಡುವ ನೀವು ಆಗಾಗ್ಗೆ ಮಾಡುವ ಇಂತಹ ಸರಳ ತಪ್ಪುಗಳನ್ನು  ಸರಿಪಡಿಸಲು ಕೆಲವು ಟ್ರಿಕ್ಸ್‌ಗಳಿವೆ. ಅಂತಹ ಟ್ರಿಕ್ಸ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ

ಅಡುಗೆಗೆ ತರಕಾರಿ ಬೇಯಿಸುವಾಗ ತಳದಲ್ಲಿ ಅಂಟಿಕೊಳ್ಳುತ್ತದೆ, ಕೆಲವೊಮ್ಮೆ ಸೀದು ಹೋಗುತ್ತದೆ. ಹಾಗಿದ್ದಾಗ ಒಂದು ಪಾತ್ರೆಯಲ್ಲಿ ತರಕಾರಿ ತೆಗೆದುಕೊಳ್ಳಿ. ಈಗ ಏಲಕ್ಕಿ, ಲವಂಗ, ದಾಲ್ಚಿನ್ನಿ ಎಲೆಯನ್ನು ಬಟ್ಟೆಯಲ್ಲಿ ಕಟ್ಟಿ ತರಕಾರಿಗೆ ಸೇರಿಸಿ. 

ಲವಂಗ, ಏಲಕ್ಕಿ, ದಾಲ್ಚಿನ್ನಿ ಎಲೆಯ ಕಟ್ಟು ತರಕಾರಿಯ ಸೀದ ವಾಸೆನಯನ್ನು ತ್ವರಿತವಾಗಿ ಹೀರಿಕೊಳ್ಳುತ್ತದೆ.

ನೀವು ತಯಾರಿಸಿದ ಸಾಂಬಾರ್‌ಗೆ ಅರಿಸಿನ ಹೆಚ್ಚಾದ್ರೆ ಇದನ್ನು ಸರಿ ಮಾಡಲು ಸ್ವಲ್ಪ ಹಾಲಿನೊಂದಿಗೆ ಸಕ್ಕರೆ ಬೆರೆಸಿ ಸೇರಿಸಿ, ಇದರಿಂದ ಅರಿಸಿನದ ಘಾಟು ಕಡಿಮೆಯಾಗುತ್ತದೆ  

ಅರಿಸಿನದ ಅಂಶ ಹೆಚ್ಚಾಗಿದೆ ಎನ್ನಿಸಿದರೆ ನಿಂಬೆಹಣ್ಣು ಸೇರಿಸಬಹುದು, ಇದು ಕೂಡ ಪರಿಹಾರ 

ಅಡುಗೆ ಮಾಡುವಾಗ ನಾವು ಹಸಿಮೆಣಸಿನ ಕಾಯಿಯನ್ನು ಬಳಸುತ್ತೇವೆ. ಇದರಿಂದ ಖಾರ ಜಾಸ್ತಿ ಆದ್ರೆ ಕಡಿಮೆ ಮಾಡಲು ತುಪ್ಪ, ಮೊಸರು ಅಥವಾ ಕೆನೆ ಬಳಸಬಹುದು

ನೀವು ಹಲ್ವಾ ಮಾಡುತ್ತಿದ್ದರೆ ಸಕ್ಕರೆ ಹೆಚ್ಚಾದರೆ ಮಖಾನವನ್ನು ಪುಡಿ ಮಾಡಿ ಸೇರಿಸಿ ಸಿಹಿಯನ್ನು ಸಮತೋಲನಗೊಳಿಸಬಹುದು 

ಗ್ರೇವಿ, ಸಾಂಬಾರ್‌ಗೆ ಉಪ್ಪು ಹೆಚ್ಚಾದರೆ ಕಡಿಮೆ ಮಾಡಲು ಕಡಲೆಹಿಟ್ಟು ಸೇರಿಸಬಹುದು. ಆದರೆ ಹಿಟ್ಟು ಹಾಕುವ ಮುನ್ನ ಸ್ವಲ್ಪ ಹುರಿದುಕೊಳ್ಳಿ 

ಸೀಬೆ ಹಣ್ಣನ್ನು ಬೆಂಕಿಯಲ್ಲಿ ಸುಟ್ಟು ತಿನ್ನುವುದರಿಂದ ಏನೆಲ್ಲ ಪ್ರಯೋಜ‌ನ ಇದೆ ನೋಡಿ