ಈ 7 ಟ್ರಿಕ್ಸ್ ಗೊತ್ತಿದ್ರೆ ಅಡುಗೆಮನೆಯ ಕೆಲಸಗಳು ಬಲು ಸುಲಭ ಅನ್ನಿಸುತ್ತೆ
By Reshma
Sep 21, 2024
Hindustan Times
Kannada
ಅಡುಗೆ ಮಾಡುವುದು ನಿಜಕ್ಕೂ ಕಷ್ಟದ ಕೆಲಸವಲ್ಲ. ಅಡುಗೆ ಸರಿಯಾಗಿ ಮಾಡಿಲ್ಲ ಅಂದ್ರೆ ಮಾಡಿದ ಅಡುಗೆಯೂ ಹಾಳಾಗುತ್ತದೆ, ಹಾಗಾಗಿ ಕೆಲವು ತಂತ್ರಗಳನ್ನು ಕಲಿಯಬೇಕು
ಅಡುಗೆ ಮಾಡುವಾಗ ಪಕೋಡ ಗರಿಗರಿಯಾಗುವುದಿಲ್ಲ, ಚಪಾತಿ ಗಟ್ಟಿಯಾಗುತ್ತದೆ, ಸಾಂಬಾರ್‌ಗೆ ಉಪ್ಪು ಹೆಚ್ಚಾಯ್ತು ಎಂದೆಲ್ಲಾ ದೂರುವುದು ಸಹಜ. ಇದರಿಂದ ಶ್ರಮವೂ ವ್ಯರ್ಥವಾಗುತ್ತದೆ
ಪ್ರತಿದಿನ ಅಡುಗೆಮನೆಯಲ್ಲಿ ನೀವು ಇಲ್ಲದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಮಯ ವ್ಯರ್ಥ ಆಗುತ್ತಿದ್ದರೆ ಈ ಟ್ರಿಕ್ಸ್‌ಗಳನ್ನು ಕಲಿತುಕೊಳ್ಳಿ
ದಾಲ್ ಮಾಡುವಾಗ ಪ್ರೆಶರ್ ಕುಕ್ಕರ್‌ನಲ್ಲಿ ಸಣ್ಣ ಬೌಲ್ ಹಾಕಿ, ಇದರಿಂದ ದಾಲ್ ಕರಗುವುದಿಲ್ಲ, ಕುಕ್ಕರ್‌ನ ಸೀಟಿಯಿಂದ ಹಬೆ ಮಾತ್ರ ಹೊರಬರುತ್ತದೆ
ಅಡುಗೆ ಮಾಡುವಾಗ ಟೊಮೆಟೊ ಖಾಲಿಯಾದರೆ ಟೊಮೆಟೊ ಕೆಚಪ್ ಅಥವಾ ಸಾಸ್ ಬಳಸಬಹುದು
ಅಡುಗೆಮನೆಯ ಟೈಲ್ಸ್ ಮೇಲೆ ತರಕಾರಿ ಕತ್ತರಿಸುವುದರಿಂದ ಚಾಕುವಿನ ಅಂಚು ಹಾಳಾಗುತ್ತದೆ. ಅದಕ್ಕಾಗಿ ಯಾವಾಗಲೂ ಚಾಪಿಂಗ್ ಬೋರ್ಡ್ ಬಳಸಿ
ಮನೆಯಲ್ಲಿ ತಯಾರಿಸಿದ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಅನ್ನು ದೀರ್ಘಕಾಲದವರೆಗೆ ಕೆಡದಂತೆ ಸಂಗ್ರಹಿಸಲು ಅದರಲ್ಲಿ 1 ಚಮಚ ಬಿಸಿ ಎಣ್ಣೆ ಮತ್ತು ಉಪ್ಪನ್ನು ಮಿಶ್ರಣ ಮಾಡಿ
ಆಹಾರವನ್ನು ಪದೇ ಪದೇ ಬಿಸಿ ಮಾಡುವುದಿಂದ ಅದರಲ್ಲಿ ಪೋಷಕಾಂಶಗಳು ನಾಶವಾಗುತ್ತವೆ. ರುಚಿಯಲ್ಲೂ ವ್ಯತ್ಯಾಸವಾಗುತ್ತದೆ
ಪಾಯಸ ಮಾಡುವಾಗ ಯಾವಾಗಲೂ ದಪ್ಪ ತಳದ ಪಾತ್ರೆಯನ್ನೇ ಬಳಸಿ. ಕಡಿಮೆ ಉರಿಯಲ್ಲಿ ಕುದಿಸಿ, ಇದರಿಂದ ಪಾಯಸದ ರುಚಿ ಕೆಡುವುದಿಲ್ಲ.
ತರಕಾರಿ ಬೇಯಿಸುವಾಗ ಉಪ್ಪು ಜಾಸ್ತಿಯಾದರೆ 8–10 ಸಣ್ಣ ಹಿಟ್ಟಿನ ಉಂಡೆ ಸೇರಿಸಿ. ಸ್ವಲ್ಪ ಸಮಯದ ನಂತರ ಅದನ್ನು ಹೊರ ತೆಗೆಯಿರಿ. ಈ ಉಪ್ಪಿನಾಂಶ ಕಡಿಮೆಯಾಗಿರುತ್ತದೆ
ಬಜೆಟ್‌ಗಿಂತ 5 ಪಟ್ಟು ಹೆಚ್ಚು ಗಳಿಕೆ ಕಂಡ ಸೂಪರ್‌ಹಿಟ್ ಹಿಂದಿ ಸಿನಿಮಾಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ