ಮಂಡಕ್ಕಿ ಕೆಡದೇ ಬಹಳ ದಿನಗಳವರೆಗೆ ಗರಿಗರಿಯಾಗಿ ಇರಬೇಕು ಅಂದ್ರೆ ಹೀಗೆ ಸಂಗ್ರಹಿಸಿಡಿ

By Reshma
Aug 25, 2024

Hindustan Times
Kannada

ಮಂಡಕ್ಕಿ ಭಾರತದ ಹಲವು ಭಾಗಗಳಲ್ಲಿ ಬಳಕೆಯಲ್ಲಿರುವ ಆಹಾರ ಪದಾರ್ಥ. ಇದರಿಂದ ವಿವಿಧ ಖಾದ್ಯಗಳನ್ನ ತಯಾರಿಸಬಹುದು. ಇದನ್ನು ಸ್ನ್ಯಾಕ್ಸ್ ರೂಪದಲ್ಲಿ ಹೆಚ್ಚಾಗಿ ತಿನ್ನಲಾಗುತ್ತದೆ 

ಇದೊಂದು ಬಹುಮುಖಿ ಆಹಾರ ಪದಾರ್ಥವಾಗಿದ್ದು, ಇದನ್ನ ವಿವಿಧ ವಿಧಗಳಲ್ಲಿ ತಿನ್ನಬಹುದು. ಆದರೆ ಇದನ್ನು ಕಡೆದಂತೆ ಬಹಳ ದಿನಗಳವರೆಗೆ ಗರಿಗರಿಯಾಗಿ ಇರುವಂತೆ ಇರಿಸುವುದು ಕಷ್ಟ 

ಇದು ಗರಿಗರಿಯಾಗಿದ್ದರಷ್ಟೇ ತಿನ್ನಲು ಚೆನ್ನಾಗಿರುತ್ತದೆ. ಕೊಂಚ ತೇವ ಅನ್ನಿಸಿದರೂ ರುಚಿ ಹೋಗುತ್ತದೆ

ಇದನ್ನು ಸರಿಯಾದ ವಿಧಾನದಲ್ಲಿ ಸಂಗ್ರಹಿಸಿ ಇಟ್ಟರೆ ದೀರ್ಘಕಾಲದವರೆಗೆ ಕೆಡುವುದಿಲ್ಲ. ತಾಜಾವಾಗಿರುತ್ತದೆ. ಹಾಗಾದರೆ ಮಂಡಕ್ಕಿ ಕಡೆದಂತೆ ಇರಲು ಏನು ಮಾಡಬೇಕು ನೋಡಿ

ಗಾಳಿ ಹಾಗೂ ತೇವಾಂಶದ ಕಾರಣದಿಂದ ಮಂಡಕ್ಕಿ ಬೇಗನೆ ಹಾಳಾಗುತ್ತದೆ.‍ ಇದು ಕೆಲವು ದಿನಗಳವರೆಗೆ ಗರಿಗರಿಯಾಗಿ ಇರಬೇಕು ಅಂದರೆ ಗಾಳಿಯಾಡದ ಡಬ್ಬಿಯಲ್ಲಿ ಇರಿಸಬೇಕು 

ಮಂಡಕ್ಕಿಯನ್ನು ಶೀಲ್ ಮಾಡಲು ಸಾಧ್ಯವಾಗುವಂತಹ ಚೀಲದಲ್ಲಿ ಹಾಕಿ, ಮುಚ್ಚಿಡಿ. ಹೀಗೆ ಮಾಡುವುದರಿಂದ ದೀರ್ಘಕಾಲ ಸಂಗ್ರಹಿಸಿ ಇಡಬಹುದು 

ಮಂಡಕ್ಕಿಯನ್ನು ಯಾವಾಗಲೂ ಶುಷ್ಕ ಪ್ರದೇಶದಲ್ಲಿ ಇಡಬೇಕು. ತೇವಾಂಶ ಇರುವ ಜಾಗದಲ್ಲಿ ತಪ್ಪಿಯೂ ಇಡಬಾರದು 

ಮಂಡಕ್ಕಿಯಲ್ಲಿ ತೇವಾಂಶ ಕಡಿಮೆ ಮಾಡಲು ಸಿಲಿಕಾ ಜೆಲ್ ಪ್ಯಾಕೆಟ್‌ಗಳನ್ನು ಕಂಟೈನರ್‌ಗೆ ಸೇರಿಸಿ. ತೇವಾಂಶ ಹೀರಿಕೊಳ್ಳಲು ಸಿಲಿಕಾ ಜೆಲ್ ಅತ್ಯುತ್ತಮ ಪರಿಹಾರ 

ಯಾವುದೋ ಕಾರಣದಿಂದ ಮಂಡಕ್ಕಿ ಒದ್ದೆಯಾದಂತೆ ಅನ್ನಿಸಿದರೆ ಇದನ್ನು ಬೇಕಿಂಗ್ ಟ್ರೇನಲ್ಲಿ ಹರಡಿ 180 ಡಿಗ್ರಿ ಸೆಲ್ಸಿಯಸ್‌ನಲ್ಲಿ 5 ರಿಂದ 10 ನಿಮಿಷ ಬಿಸಿ ಮಾಡಿ 

ಬಾಣಲೆಗೆ ಉಪ್ಪು ಸೇರಿಸಿ ಬಿಸಿ ಮಾಡಿ. ಅದಕ್ಕೆ ಮಂಡಕ್ಕಿ ಸೇರಿಸಿ 5 ರಿಂದ 7 ನಿಮಿಷ ಕೈಯಾಡಿಸಿ. ಹೀಗೆ ಮಾಡುವುದರಿಂದ ಮಂಡಕ್ಕಿ ಗರಿಗರಿಯಾಗುತ್ತದೆ 

ನೀವು ಈ 7 ಅಭ್ಯಾಸ ಬದಲಿಸಿಕೊಂಡ್ರೆ ದಪ್ಪ ಅಂತ ಕೊರಗೋ ಪರಿಸ್ಥಿತಿ ಬರಲ್ಲ