ಹಾಲಿನಿಂದ ದಪ್ಪ ಕೆನೆ ತೆಗೆಯಲು ಇಲ್ಲಿದೆ ಸುಲಭ ಉಪಾಯ

By Reshma
Jul 30, 2024

Hindustan Times
Kannada

ಭಾರತೀಯ ಮನೆಗಳಲ್ಲಿ ಹಾಲಿನಿಂದ ಕೆನೆ ತೆಗೆಯುವುದು ಸಹಜ. ಹಾಲಿನ ಕೆನೆಯನ್ನು ಬೇರೆ ಬೇರೆ ರೂಪದಲ್ಲಿ ಬಳಸಲಾಗುತ್ತದೆ. ಕೆಲವರು ಇದನ್ನು ಆಹಾರ ರೂಪದಲ್ಲಿ, ಕೆಲವರು ಸೌಂದರ್ಯವರ್ದಕವಾಗಿ ಬಳಸುತ್ತಾರೆ. 

ಉತ್ತಮ ಗುಣಮಟ್ಟದ ಹಾಲಿನಿಂದ ಉತ್ತಮ ಕೆನೆ ಬರುತ್ತದೆ. ಆದರೆ ಕೆಲವೊಮ್ಮೆ ಎಷ್ಟೇ ಉತ್ತಮ ಗುಣಮಟ್ಟದ ಹಾಲಿದ್ದರೂ ಕೆನೆ ಚೆನ್ನಾಗಿ ಬರುವುದಿಲ್ಲ.

ಹಾಲಿನ ಕೆನೆ ಚೆನ್ನಾಗಿದ್ದರೆ ಮೊಸರು ಕೂಡ ಚೆನ್ನಾಗಿ ಬರುತ್ತದೆ. 

ಇಂದು ನಾವು ಹೇಳುವ ತಂತ್ರಗಳನ್ನು ಬಳಸುವ ಮೂಲಕ ನೀವು ಹಾಲಿನಿಂದ ದಪ್ಪನೆಯ ಕೆನೆ ತೆಗೆಯಬಹುದು. 

ಹಾಲು ಕುದಿ ಬಂದಾಗ ಮಧ್ಯಮ ಉರಿಯಲ್ಲಿ ಸುಮಾರು 15 ರಿಂದ 20 ನಿಮಿಷಗಳ ಕುದಿಸಿ. ಫ್ರಿಜ್‌ನಲ್ಲಿ ಇಟ್ಟ ಹಾಲನ್ನು ಕೂಡಲೇ ಕಾಯಿಸುವ ಅಭ್ಯಾಸ ಒಳ್ಳೆಯದಲ್ಲ. 

ಹಾಲು ಚೆನ್ನಾಗಿ ಕುದಿಯುವಾಗ ಅದಕ್ಕೆ ಮುಚ್ಚಳ ಮುಚ್ಚುವ ಬದಲು ಸ್ಟೈನರ್‌ನಿಂದ ಮುಚ್ಚಿ. ನಂತರ ಕೋಣೆಯ ಉಷ್ಣಾಂಶದಲ್ಲಿ ಅರ್ಧ ಗಂಟೆ ಇರಿಸಿ. ನಂತರ ಫ್ರಿಜ್‌ನಲ್ಲಿಡಿ. 

ಹಾಲು ಕುದಿಯಲು ಆರಂಭಿಸಿದಾಗ ಕನಿಷ್ಠ ಎರಡು ಬಾರಿ ಚಮಚದಿಂದ ತಿರುಗಿಸಿ, ಗುಳ್ಳೆಗಳನ್ನು ಬದಿಗೆ ಸರಿಸಿ. 

ಕಾಯಿಸಿದ ಹಾಲನ್ನು ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿದರೆ ಕೆನೆ ದಪ್ಪವಾಗಿ ಮೊಸರು ಕೂಡ ಚೆನ್ನಾಗಿ ಬರುತ್ತದೆ. 

ಮಣ್ಣಿಗೆ ಪಾತ್ರೆಯಲ್ಲಿ ಹಾಲು ಬೇಗನೆ ಪ್ರತಿಕ್ರಿಯಿಸುತ್ತದೆ. ಈ ಕಾರಣದಿಂದಾಗಿ ಕೆನೆ ಚೆನ್ನಾಗಿರುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರ ಜನಿಸಿದವರು ಹೇಗಿರುತ್ತಾರೆ?