ಅರಿಸಿನ ಪುಡಿ ಬಹಳ ದಿನ ಕೆಡದಂತೆ ಇಡಲು ಇಲ್ಲಿದೆ ಸಿಂಪಲ್ ಟ್ರಿಕ್ಸ್

By Reshma
Sep 02, 2024

Hindustan Times
Kannada

ಅರಿಸಿನ ಪುಡಿ ಇಲ್ಲದ ಭಾರತೀಯ ಅಡುಗೆಮನೆಯನ್ನು ಊಹಿಸಲು ಸಾಧ್ಯವಿಲ್ಲ. ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಅರಿಸಿನ ಪುಡಿ ಆರೋಗ್ಯಕ್ಕೂ ಉತ್ತಮ 

ಆದರೆ ತೇವಾಂಶ ಹೆಚ್ಚಾದರೆ ಅರಿಸಿನ ಪುಡಿ ಡಬ್ಬಿಯಲ್ಲಿ ಒಂದು ರೀತಿಯ ಕೀಟಗಳು ಸುಳಿದಾಡಲು ಆರಂಭವಾಗುತ್ತದೆ

ಹಾಗಾದರೆ ಅರಿಸಿನ ಪುಡಿ ತೇವದಾಗದಂತೆ, ಕೀಟಗಳು ಸುಳಿದಾಡದಂತೆ ಬಹಳ ದಿನ ಕೆಡದೇ ಇರಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ 

ಅರಿಸಿನ ಪುಡಿ ತೇವವಾದಂತೆ ಅನ್ನಿಸಿದರೆ ಈ ಪುಡಿಯನ್ನು ವಾರಕ್ಕೆ ಎರಡು ಬಾರಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ

ಅರಿಸಿನ ಪುಡಿಯನ್ನು ಸಂಗ್ರಹಿಸಿ ಇಡಲು ಗಾಳಿಯಾಡದ ಡಬ್ಬಿ ಅಥವಾ ಜಿಪ್ ಲಾಕ್ ಬ್ಯಾಗ್ ಬಳಸಿ. ಇದರಿಂದ ತೇವಾಂಶ ಒಳಗೆ ಹೋಗುವುದಿಲ್ಲ 

ಸಾಮಾನ್ಯವಾಗಿ ಅರಿಸಿನ ಪುಡಿ ಹಾಳಾಗಲು ತೇವಾಂಶವೇ ಕಾರಣ. ಅದಕ್ಕೆ ನೀವು ಅರಿಸಿನ ಪುಡಿಯ ಪಾತ್ರೆಯನ್ನು ತಂಪಾದ, ಶುಷ್ಕ ಪ್ರದೇಶದಲ್ಲಿಡಿ 

ಒಣಗಿಸಿದ ಕಹಿಬೇವಿನ ಎಲೆಯನ್ನು ಅರಿಸಿನ ಪುಡಿಯ ಡಬ್ಬಿಯಲ್ಲಿ ಹಾಕಿ ಇಡುವುದರಿಂದ ಕೂಡ ಕ್ರಿಮಿಕೀಟಗಳು ಬರುವುದಿಲ್ಲ, ಆಗಾಗ ಎಲೆಗಳನ್ನ ಬದಲಿಸಲು ಮರೆಯಬೇಡಿ 

ಅರಿಸಿನ ಬೇಗ ಕೆಡದಂತೆ ಮಾಡಲು ಇದರ ಡಬ್ಬಿಯನ್ನು ಫ್ರಿಜ್‌ನಲ್ಲಿ ಕೂಡ ಇಡಬಹುದು. ಇದರಿಂದ ಕೀಟಗಳು ಬರದಂತೆ ತಡೆಯಬಹುದು 

ಅರಿಸಿನವನ್ನು ಸಂರಕ್ಷಿಸಲು ಸಿಲಿಕಾ ಜೆಲ್ ಪ್ಯಾಕೆಟ್‌ಗಳನ್ನು ಡಬ್ಬಿಯಲ್ಲಿ ಹಾಕಿ ಇಡಬಹುದು. ಸಿಲಿಕಾ ಜೆಲ್ ತೇವಾಂಶವನ್ನು ಹೀರಿಕೊಳ್ಳುತ್ತದೆ 

ಸಾಧ್ಯವಾದಷ್ಟು ಗಾಳಿಯಾಡದಂತಹ ಡಬ್ಬಿಯಲ್ಲಿ ಸಂಗ್ರಹಿಸುವುದು ಅರಿಸಿನವನ್ನು ಸಂಗ್ರಹಿಸುವ ಉತ್ತಮ ವಿಧಾನ 

ಮಾನವ ಜನಾಂಗದ ಬದುಕನ್ನೇ ಬದಲಿಸಿದ  7 ಆವಿಷ್ಕಾರಗಳಿವು

Pixabay