ಅಡುಗೆಮನೆಯಲ್ಲಿ ಈ ಸಿಂಪಲ್ ಟ್ರಿಕ್ಸ್ ಫಾಲೊ ಮಾಡಿದ್ರೆ ಗ್ಯಾಸ್ ಸಿಲಿಂಡರ್ ಉಳಿತಾಯವಾಗುತ್ತೆ 

By Reshma
Jul 15, 2024

Hindustan Times
Kannada

ಭಾರತದಲ್ಲಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬಳಕೆ ಸಾಮಾನ್ಯವಾಗಿದೆ. ಇತರ ಇಂಧನ ಮೂಲಗಳಿದ್ದರೂ ಎಲ್‌ಪಿಜಿ ಬಳಕೆಯ ಪ್ರಮಾಣ ಹೆಚ್ಚು. 

ಕೆಲವರು ಅಡುಗೆಮನೆಯಲ್ಲಿನ ಗ್ಯಾಸ್‌ ಸಿಲಿಂಡರ್‌ ಬೇಗನೆ ಖಾಲಿಯಾಗುತ್ತದೆ ಎಂದು ದೂರುತ್ತಾರೆ. ಪದೇ ಪದೇ ಗ್ಯಾಸ್‌ ಸಿಲಿಂಡರ್‌ ಖಾಲಿ ಆದ್ರೆ ಖರ್ಚು ಕೂಡ ಹೆಚ್ಚುತ್ತೆ. 

Enter text Here

ಇತ್ತೀಚಿನ ದಿನಗಳಲ್ಲಿ ಹಣದುಬ್ಬರ ಕಾರಣದಿಂದ ಗ್ಯಾಸ್‌ ಸಿಲಿಂಡರ್‌ ಕೂಡ ಹೊರೆ ಎನ್ನಿಸುತ್ತಿದೆ. ಆ ಕಾರಣಕ್ಕೆ ಹಲವರು ಗ್ಯಾಸ್‌ ಸಿಲಿಂಡರ್‌ ಉಳಿಸುವ ಮಾರ್ಗ ಹುಡುಕುತ್ತಿರುತ್ತಾರೆ. 

ಇಲ್ಲಿ ನಾವು ಕೆಲವು ತಂತ್ರಗಳನ್ನು ಹೇಳುತ್ತೇವೆ. ಆ ತಂತ್ರಗಳ ಮೂಲಕ ನೀವು ದೀರ್ಘಕಾಲದವರೆಗೆ ಅಡುಗೆಮನೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಅನ್ನು ಉಳಿಸಿ ಬಳಸಬಹುದು. 

ಅಡುಗೆಮನೆಯಲ್ಲಿ ಗ್ಯಾಸ್‌ ಉಳಿಸಲು ಬಯಸಿದರೆ, ಅಕ್ಕಿ ಬೇಳೆಕಾಳುಗಳನ್ನು ಮಾತ್ರವಲ್ಲ, ವಿವಿಧ ತರಕಾರಿಗಳನ್ನು ಕುಕ್ಕುರ್‌ನಲ್ಲಿ ಬೇಯಿಸಿಬೇಕು. ಇದರಿಂದ ಗ್ಯಾಸ್‌ ಹೆಚ್ಚು ಉಳಿತಾಯವಾಗುತ್ತದೆ. 

ಆಹಾರಗಳನ್ನು ಬೇಯಿಸುವಾಗ ಪಾತ್ರೆ ತಪ್ಪದೇ ಮುಚ್ಚಿ, ತೆರೆದಿಟ್ಟ ಪಾತ್ರೆಯಲ್ಲಿ ಬೇಯಿಸುವ ಆಹಾರವು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಗ್ಯಾಸ್‌ ಹೆಚ್ಚು ಖರ್ಚಾಗಬಹುದು. 

ಭಾರತದಲ್ಲಿ ಸ್ಟೀಲ್‌ ಹಾಗೂ ಸಿಲ್ವರ್‌ ಪಾತ್ರೆಗಳ ಬಳಕೆ ಹೆಚ್ಚು, ಆದರೆ ಈ ಎರಡೂ ಗ್ಯಾಸ್‌ ಹೆಚ್ಚು ಖರ್ಚಾಗುವಂತೆ ಮಾಡುತ್ತವೆ. ಇವುಗಳ ಬದಲು ನಾನ್‌ಸ್ಟಿಕ್‌ ಪಾತ್ರೆಗಳನ್ನ ಬಳಸಿ ಗ್ಯಾಸ್‌ ಖರ್ಚಾಗದಂತೆ ಮಾಡಬಹುದು. 

ಹೆಚ್ಚಿನ ಬಾರಿ ನೀರಿರುವ ಅಥವಾ ಒದ್ದೆಯಾದ ಪಾತ್ರೆಯನ್ನು ಒಲೆಯ ಮೇಲೆ ಇಡುತ್ತೇವೆ. ಇದನ್ನು ಬಿಸಿ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಇದಕ್ಕಾಗಿ ಅಡುಗೆ ಸಿದ್ಧ ಮಾಡುವ ಮೊದಲು ಪಾತ್ರೆಯನ್ನ ಒಣಗಿಸಿಡಿ. 

ಫ್ರಿಜ್‌ನಲ್ಲಿಟ್ಟ ಹಾಲು, ತರಕಾರಿ ಬಿಸಿಯಾಗಲು ಸಾಕಷ್ಟು ಸಮಯ ಬೇಕಾಗುತ್ತದೆ. ಇದರಿಂದ ಗ್ಯಾಸ್‌ ಹೆಚ್ಚು ಖರ್ಚಾಗುತ್ತದೆ. ಇದರಿಂದ ಸಮಯವೂ ವ್ಯರ್ಥವಾಗುತ್ತದೆ. ಹಾಗಾಗಿ ಇವುಗಳನ್ನು ಮೊದಲೇ ಫ್ರಿಜ್‌ನಿಂದ ಹೊರಗಿಟ್ಟು ಬಿಡಿ. 

ದೊಡ್ಡ ಉರಿಯಲ್ಲಿ ಆಹಾರಗಳನ್ನು ಬೇಯಿಸುವುದರಿಂದ ಕೂಡ ಗ್ಯಾಸ್‌ ಹೆಚ್ಚು ಖರ್ಚಾಗುತ್ತದೆ. ಯಾವಾಗಲೂ ಮಧ್ಯಮ ಉರಿಯಲ್ಲಿ ಬೇಯಿಸುವುದು ಉತ್ತಮ ಕ್ರಮ. 

Horoscope: ಏಪ್ರಿಲ್ 22ರ ಮಂಗಳವಾರ 12 ರಾಶಿಯವರ ಫಲಾಫಲ ಹೀಗಿವೆ