ಅಡುಗೆಮನೆ ಸಿಂಕ್‌ ಪಳಪಳ ಹೊಳೆಯುವಂತೆ ಮಾಡಲು ಇಲ್ಲಿದೆ ಸಿಂಪಲ್‌ ಟ್ರಿಕ್ಸ್‌

By Reshma
Jul 08, 2024

Hindustan Times
Kannada

ಅಡುಗೆಮನೆಯ ಸಿಂಕ್‌ನಲ್ಲಿ ಬಳಸಿದ ಹಾಗೂ ಎಂಜಲು ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲ, ಅದರಲ್ಲಿ ಇತರ ವಸ್ತುಗಳನ್ನು ಸ್ವಚ್ಛ ಮಾಡುತ್ತೇವೆ. ಇದರಿಂದ ಸಿಂಕ್‌ ಬೇಗನೆ ಕೊಳೆಯಾಗುತ್ತದೆ. 

ಹಲವು ಬಾರಿ ಸಿಂಕ್‌ ತುಂಬಾ ಕೊಳೆಯಾಗುತ್ತದೆ. ಅದು ಅಡುಗೆಮನೆಯ ಅಂದವನ್ನು ಹಾಳು ಮಾಡಿ ಕೆಟ್ಟ ವಾಸನೆ ಹೊರ ಸೂಸುತ್ತದೆ. ಆ ಕಾರಣಕ್ಕೆ ಸಿಂಕ್‌ ಅನ್ನು ಕಾಲಕಾಲಕ್ಕೆ ಸ್ವಚ್ಛ ಮಾಡಬೇಕು. 

ಕೆಲವರು ತಮ್ಮ ಕಿಚನ್‌ ಸಿಂಕ್‌ ಅನ್ನು ಹೊಳೆಯುವಂತೆ ಮಾಡಲು ವಿಶೇಷ ಕ್ಲೀನರ್‌ಗಳನ್ನು ಸಹ ಬಳಸುತ್ತಾರೆ. ಆದರೆ ಇದು ಹೆಚ್ಚಿನ ಪ್ರಯೋಜನ ನೀಡುವುದಿಲ್ಲ. 

ನೀವು ನಿಮ್ಮ ಅಡುಗೆಮನೆಯ ಸಿಂಕ್‌ ಹೊಸದಾಗಿ ಕಾಣುವಂತೆ ಮಾಡಲು ಬಯಸಿದರೆ ಈ ತಂತ್ರಗಳು ನಿಮಗೆ ಸಹಾಯ ಮಾಡಬಹುದು. 

ಅಡುಗೆಸೋಡಾ ಮತ್ತು ನಿಂಬೆ: ಕಿಚನ್‌ ಸಿಂಕ್‌ ಸಂಪೂರ್ಣವಾಗಿ ಸ್ವಚ್ಛಗೊಂಡು ಪಳಪಳ ಹೊಳೆಯುವಂತಾಗಲು ಸೋಡಾ ಮತ್ತು ನಿಂಬೆ ಬಳಸಬಹುದು. 

ಮೊದಲು ಅಡುಗೆಮನೆಯ ಸಿಂಕ್‌ನಿಂದ ಎಲ್ಲಾ ಪಾತ್ರೆಗಳನ್ನು ತೊಳೆಯಿರಿ. ನಂತರ ನೀರಿನ ಸಹಾಯದಿಂದ ಕೊಳೆಯನ್ನು ಸ್ವಚ್ಛಗೊಳಿಸಿ. ಸಿಂಕ್‌ನಲ್ಲಿ ಯಾವುದೇ ಅಂಶ ಉಳಿಯಬಾರದು.

ಅಡುಗೆಸೋಡಾವನ್ನು ಸಿಂಕ್‌ ಸ್ವಚ್ಛ ಮಾಡಲು ಬಳಸಲಾಗುತ್ತದೆ. ಇದು ಸರಳ ಮತ್ತು ಅತ್ಯಂತ ಪರಿಣಾಮಕಾರಿ ಪರಿಣಾಮ. 

ಬೇಕಿಂಗ್‌ ಸೋಡಾವನ್ನು ಸಿಂಕ್‌ ಮೇಲೆ ಚೆನ್ನಾಗಿ ಸಿಂಪಡಿಸಿ ಮತ್ತು ಅರ್ಧ ಗಂಟೆಯವರೆಗೆ ಬಿಡಿ. ಅರ್ಧ ಗಂಟೆವರೆಗೆ ನೀರು ಅಥವಾ ಏನನ್ನೂ ಹಾಕಬೇಡಿ. 

ಈಗ ನಿಂಬೆಹಣ್ಣು ಕತ್ತರಿಸಿ, ಅದರ ಭಾಗದಿಂದ ಸಿಂಕ್‌ ಅನ್ನು ಚೆನ್ನಾಗಿ ಉಜ್ಜಿ. ನಿಂಬೆಹಣ್ಣಿನಲ್ಲಿ ಆಮ್ಲೀಯ ಅಂಶವಿರುತ್ತದೆ. ಇದು ಸಿಂಕ್‌ ಅನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತದೆ. 

ನಿಂಬೆಹಣ್ಣಿನ ಸಹಾಯದಿಂದ ಸಿಂಕ್‌ ಅನ್ನು ಕನಿಷ್ಠ 5 ನಿಮಿಷಗಳ ಕಾಲ ಸ್ಕ್ರಬ್‌ ಮಾಡಿ ಮತ್ತು ನಂತರ ಅದನ್ನ ಚೆನ್ನಾಗಿ ತೊಳೆಯಿರಿ. ಅಡುಗೆ ಸೋಡಾ ಮತ್ತು ನಿಂಬೆ ಸಹಾಯದಿಂದ ಸಿಂಕ್‌ ಪಳಪಳ ಹೊಳೆಯುತ್ತದೆ. 

ಕನ್ನಡಿಗರ ಮನಗೆದ್ದ ಕೆಎಸ್‌ ಅಶ್ವಥ್‌ ನೆನಪು ಸದಾ ಹಸಿರು