ಉಪ್ಪಿನಕಾಯಿ ಭರಣಿಗೆ ಅಂಟಿದ ಜಿಡ್ಡು, ಕೊಳೆ ಸ್ವಚ್ಛಗೊಳಿಸಲು ಇಲ್ಲಿದೆ ಸಿಂಪಲ್‌ ಟಿಪ್ಸ್ 

By Reshma
Jul 15, 2024

Hindustan Times
Kannada

ಉಪ್ಪಿನಕಾಯಿ ಇಲ್ಲ ಅಂದ್ರೆ ಭಾರತದ ಅಡುಗೆಮನೆಯೇ ಅಲ್ಲ ಎನ್ನಬಹುದು. ಅಷ್ಟರ ಮಟ್ಟಿಗೆ ನಮ್ಮ ಅಡುಗೆಮನೆಗೂ ಉಪ್ಪಿನಕಾಯಿಗೂ ನಂಟಿದೆ. 

ಉಪ್ಪಿನಕಾಯಿಯನ್ನು ಗಾಜಿನ ಅಥವಾ ಸೆರಾಮಿಕ್‌ ಜಾಡಿಗಳಲ್ಲಿ ಸಂಗ್ರಹಿಸಿ ಇಡುತ್ತಾರೆ. ಇದನ್ನು ತಯಾರಿಸಲು ವಿವಿಧ ಬಗೆಯ ಮಸಾಲೆಗಳು ಮತ್ತು ಎಣ್ಣೆಯನ್ನು ಬಳಸಲಾಗುತ್ತದೆ. 

ನಿರಂತರವಾಗಿ ಉಪ್ಪಿನಕಾಯಿ ಶೇಖರಿಸಿ ಇಟ್ಟ ಪಾತ್ರೆ ಒಳಗಿನಿಂದಲೂ ಹಾಗೂ ಹೊರಗಿನಿಂದಲೂ ಕೊಳೆಯಾಗಿರುತ್ತದೆ. 

ಉಪ್ಪಿನಕಾಯಿ ಇಟ್ಟ ಪಾತ್ರೆಯನ್ನು ಆದಷ್ಟು ಬೇಗ ಸ್ವಚ್ಛ ಮಾಡದೇ ಇದ್ದರೆ ಅವು ಕೊಳಕಾಗಿ ಕಾಣಲು ಪ್ರಾರಂಭವಾಗುತ್ತವೆ. ಅಲ್ಲದೇ ಉಪ್ಪಿನಕಾಯಿ ಕೂಡ ಕೆಡುತ್ತದೆ. 

ಜಾಡಿಗಳ ಮೇಲೆ ಎಣ್ಣೆಯಿಂದ ಉಂಟಾಗಿರುವ ಕಲೆಗಳನ್ನು ಸುಲಭವಾಗಿ ತೆಗೆಯಲು ಸಾಧ್ಯವಿಲ್ಲ ಎಂದು ಜನರು ಹೇಳುತ್ತಾರೆ. ಆದರೆ ಈ ಕೆಲವು ಸುಲಭ ತಂತ್ರಗಳ ಮೂಲಕ ಜಾಡಿಯನ್ನು ಸ್ವಚ್ಛ ಮಾಡಬಹುದು. 

ಜಿಗುಟಾದ ಪಾತ್ರೆಗಳನ್ನು ಸ್ವಚ್ಛ ಮಾಡಲು ಒಂದು ಬಟ್ಟಲಿನಲ್ಲಿ ವಿನೆಗರ್‌ ಮತ್ತು ಡಿಟರ್ಜೆಂಟ್‌ ಅನ್ನು ಮಿಶ್ರಣ ಮಾಡಿ ಮತ್ತು ಜಿಗುಟಾದ ಕೊಳಕು ಜಾರ್‌ ಅಥವಾ ಬಿನ್‌ಗಳನ್ನು ಸ್ವಚ್ಛ ಮಾಡಲು ಬಳಸಬಹುದು.

ಉಪ್ಪಿನಕಾಯಿ ಜಾಡಿ ಪೇಸ್ಟ್‌ನಂತೆ ಅಂಟಿದ್ದರೆ ಇದನ್ನು ಬಾತ್‌ರೂಮ್‌ ಕ್ಲೀನರ್‌ನಿಂದ ಕೂಡ ಸ್ವಚ್ಛ ಮಾಡಬಹುದು. ಇದರಿಂದ ಸ್ವಚ್ಛ ಮಾಡಿದ ನಂತರ ಡಿಶ್‌ವಾಶರ್‌ನಿಂದ ತೊಳೆಯಿರಿ. 

ಜಿಗುಟಾದ ಭರಣಿಯನ್ನು ತೊಳೆಯಲು ನೀವು ಹೈಡ್ರೋಜೆನ್‌ ಫೆರಾಕ್ಸೈಡ್‌ ಅನ್ನು ಕೂಡ ಬಳಸಬಹುದು. ಬಳಕೆಯ ವಿಧಾನ ಹೇಗೆ ನೋಡಿ. 

ಒಂದು ದೊಡ್ಡ ಪಾತ್ರೆಯಲ್ಲಿ ಎರಡು ಮೂರು ಲೀಟರ್‌ ಬಿಸಿ ನೀರು ಹಾಕಿ. ಆ ನೀರಿಗೆ 4 ಚಮಚ ಹೈಡ್ರೋಜನ್‌ ಪೆರಾಕ್ಸೈಡ್‌ ಅನ್ನು ಮಿಶ್ರಣ ಮಾಡಿ. ಈಗ ಉಪ್ಪಿನಕಾಯಿ ಜಾರ್‌ ಅಥವಾ ಜಾಡಿಗಳನ್ನು ಅರ್ಧ ಗಂಟೆ ಈ ನೀರಿನಲ್ಲಿ ನೆನೆಸಿಡಿ. ನಂತರ ಡಿಶ್‌ವಾಶ್‌ರಿಂದ ಸ್ವಚ್ಛ ಮಾಡಿ.

ಒಂದು ಬಟ್ಟಲಿನಲ್ಲಿ ಬಿಸಿನೀರು, ನಿಂಬೆ ಮತ್ತು ಅಡುಗೆ ಸೋಡಾ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಉಪ್ಪಿನಕಾಯಿ ಜಾರ್‌ ಅಥವಾ ಜಾಡಿಗಳ ಮೇಲೆ ಅನ್ವಯಿಸಿ. 10 ನಿಮಿಷಗಳ ಕಾಲ ಬಿಡಿ. ನಂತರ ಸ್ಕ್ರಬರ್‌ ಸಹಾಯದಿಂದ ಸ್ವಚ್ಛ ಮಾಡಿ. 

ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು